/newsfirstlive-kannada/media/post_attachments/wp-content/uploads/2024/06/DARSHAN-40.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಗ್ಯಾಂಗ್ ಪರಪ್ಪನ ಅಗ್ರಹಾರದ ಪಂಜರದಲ್ಲಿ ಬಂಧಿಯಾಗಿದೆ. ಪಟ್ಟಣಗೆರೆ ಶೆಡ್‌ನಲ್ಲಿ ಕ್ರೌರ್ಯದ ಪರಮಾವಧಿ ಮೆರೆದ ಆರೋಪಿಗಳು ಅಕ್ಷರಶಃ ಪರದಾಡುತ್ತಿದ್ದಾರೆ. ಅದರಲ್ಲೂ ದರ್ಶನ್ ಅವರಿಗೆ ನಿಮಿಷಗಳು ವರ್ಷಗಳಾದ್ರೆ ಒಂದೊಂದು ದಿನ ಕಳೆಯೊಂದು ಒಂದೊಂದು ಯುಗದಂತೆ ಭಾಸವಾಗುತ್ತಿದೆ.
ಆರೋಪಿ ದರ್ಶನ್ ಅವರು ಸೆಂಟ್ರಲ್ ಜೈಲು ಪಾಲಿಗೆ ಇಂದಿಗೆ 5 ದಿನಗಳು ಕಳೆದಿದೆ. ನ್ಯಾಯಾಂಗ ಬಂಧನದಲ್ಲಿ ಇನ್ನು 9 ದಿನಗಳು ಬಾಕಿ ಇದೆ. ಇಷ್ಟು ದಿನ ಚಾಪೆ ಮೇಲೆ ಮಲಗುತ್ತಿದ್ದ ದರ್ಶನ್ ಅವರಿಗೆ ವಿಶೇಷ ವ್ಯವಸ್ಥೆ ನೀಡಲಾಗಿದೆ. ಸಹಕೈದಿಗಳ ಜೊತೆ ಇರುವ ದರ್ಶನ್ ಭದ್ರತಾ ಕೊಠಡಿಗೆ ಈಗ ಟಿವಿ ಹಾಗೂ ಕಾಟ್ ವ್ಯವಸ್ಥೆ ನೀಡಲಾಗಿದೆ.
/newsfirstlive-kannada/media/post_attachments/wp-content/uploads/2024/06/DARSHAN-JAIL-1.jpg)
ನ್ಯೂಸ್ ಚಾನೆಲ್ ಹಾಕದ ದರ್ಶನ್!
ಕೊಲೆ ಕೇಸ್‌ನಲ್ಲಿ ಆರೋಪಿಯಾಗಿರುವ ದರ್ಶನ್ ಅವರು ಜೈಲಿಗೆ ಹೋದಾಗಿಂದ ಇದುವರೆಗೂ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ ನೋಡಿಲ್ಲ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಳಿಕ ಮಂಕಾಗಿರುವ ದರ್ಶನ್ ಅವರು ಕನ್ನಡ ಚಾನೆಲ್ ಕೂಡ ಹಾಕ್ತಿಲ್ಲ. ಸೆಲ್‌ನಲ್ಲಿ ಯಾವುದೇ ಕನ್ನಡ ಸಿನಿಮಾ ಕೂಡ ನೋಡ್ತಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ‘ಪ್ಲೀಸ್ ಯಾರನ್ನೂ ಭೇಟಿಗೆ ಬಿಡಬೇಡಿ..’ ಜೈಲು ಅಧಿಕಾರಿಗಳ ಮುಂದೆ ದರ್ಶನ್ ಪಶ್ಚಾತ್ತಾಪದ ಮಾತುಗಳು..?
ಕನ್ನಡ ಚಾನೆಲ್‌ಗಳ ಕಡೆ ಮುಖ ಮಾಡದ ದರ್ಶನ್ ಅವರು ಜೈಲಿನಲ್ಲಿ ಬರೀ ಹಿಂದಿ ಸಿನಿಮಾಗಳನ್ನೇ ವೀಕ್ಷಣೆ ಮಾಡುತ್ತಾ ಇದ್ದಾರೆ. ಹಿಂದಿ ಸಿನಿಮಾ ನೋಡಿ, ನೋಡಿ ಬೋರ್ ಆದ್ರೆ ಸ್ವಲ್ಪ ಹೊತ್ತು ಸ್ಫೋರ್ಟ್ಸ್ ಚಾನೆಲ್‌ಗಳನ್ನು ಹಾಕ್ಕೊಂಡು ಕಾಲ ಕಳೆಯುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/06/darshan53.jpg)
ಧೈರ್ಯ ತುಂಬಿದ್ದ ಪತ್ನಿ ವಿಜಯಲಕ್ಷ್ಮಿ!
ಎರಡು ದಿನದ ಹಿಂದಷ್ಟೇ ಜೈಲಿನಲ್ಲಿರುವ ದರ್ಶನ್ ಅವರ ಭೇಟಿಯಾಗಲು ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಆಗಮಿಸಿದ್ದರು. ಮಗ ಬಂದ ದಿನ ಸುಮಾರು ಎರಡು ನಿಮಿಷ ಮಗನನ್ನು ತಬ್ಬಿಕೊಂಡು ದರ್ಶನ್ ಕಣ್ಣೀರು ಹಾಕಿದ್ದಾರೆ.
ಮಗನ ನೋಡಿದ ಬಳಿಕ ಇಲ್ಲಿ ನನಗೆ ಇರೋಕೆ ಆಗ್ತಾ ಇಲ್ಲ ಅಂತ ಪತ್ನಿ ವಿಜಯಲಕ್ಷ್ಮಿ ಅವರ ಬಳಿಯೂ ದರ್ಶನ್ ಅವರು ಕಣ್ಣೀರು ಹಾಕಿದ್ದಾರೆ. ಈ ವೇಳೆ ಜಾಮೀನಿನ ಮೇಲೆ ಹೊರಗಡೆ ತರೋದಕ್ಕೆ ಪ್ರಯತ್ನಿಸುತ್ತಿರೋದಾಗಿ ವಿಜಯಲಕ್ಷ್ಮಿ ಅವರು ಧೈರ್ಯದ ಮಾತನಾಡಿದ್ದಾರೆ. ಏನು ಆಗಲ್ಲ ನೀವು ಧೈರ್ಯದಿಂದ ಇರಿ. ನೀವು ಹೀಗೆ ಆದ್ರೆ ಹೇಗೆ ಅಂತ ಗಂಡನಿಗೆ ವಿಜಯಲಕ್ಷ್ಮಿ ಧೈರ್ಯ ತುಂಬಿದ್ದಾರೆ. ಕೊನೆಗೆ ದರ್ಶನ್ ಅವರು ಮಗನಿಗೆ ಹುಷಾರು ಮಗನೇ ಅಂತೇಳಿ ಜೈಲಿನಿಂದ ಕಳುಹಿಸಿದ್ದಾರೆ.
ಪತ್ನಿ, ಮಗನನ್ನು ನೋಡಿದ ದರ್ಶನ್ ಅವರು ಮತ್ತೆ ಸೆಲ್ ಒಳಗೆ ಸೇರಿಕೊಂಡಿದ್ದು ಬೇರೆ ಕೈದಿಗಳ ಜೊತೆಗೂ ಮಾತನಾಡುತ್ತಿಲ್ಲ. ಮೌನಿಯಾಗಿರುವ ದರ್ಶನ್ ಅವರು ನನ್ನನ್ನು ಭೇಟಿಯಾಗಲು ಯಾರಿಗೂ ಅವಕಾಶ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us