/newsfirstlive-kannada/media/post_attachments/wp-content/uploads/2025/03/darshan.jpg)
ಬೆಂಗಳೂರು: ಇಂದು ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿದ್ದಪ್ಪ ಚೊಚ್ಚಲ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು ಅಂತ ಸಾಕಷ್ಟ ಮಂದಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಬಹಳಷ್ಟು ಅಭಿಮಾನಿಗಳ ನಿರೀಕ್ಷೆ ಇಂದು ಹುಸಿಯಾಗಿದೆ.
ಇದನ್ನೂ ಓದಿ:ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ಅದ್ಧೂರಿ ನಾಮಕರಣ ಶಾಸ್ತ್ರ; ಇಲ್ಲಿವೆ ಟಾಪ್ 10 ಫೋಟೋಸ್!
ಹೌದು, ಇಂದು ಕನ್ನಡದ ರೆಬೆಲ್ ಸ್ಟಾರ್ ದಿವಂಗತ ಅಂಬರೀಷ್ ಅವರ ಮೊಮ್ಮಗನ ನಾಮಕರಣ ಶಾಸ್ತ್ರ ನಡೆಯುತ್ತಿದೆ. JW ಮ್ಯಾರಿಯೆಟ್ ಹೋಟೆಲ್ನಲ್ಲಿ ನಡೆಯುತ್ತಿರುವ ನಾಮಕರಣ ಶಾಸ್ತ್ರದಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ಭಾಗಿಯಾಗಿದ್ದರು.
ಇನ್ನೂ ಅಭಿಷೇಕ್ ಅಂಬರೀಷ್ ಅವರು ನಾಮಕರಣ ಶಾಸ್ತ್ರಕ್ಕೆ ಕುಟುಂಬಸ್ಥರು ಹಾಗೂ ಆತ್ಮೀಯರಿಗಷ್ಟೇ ಆಹ್ವಾನ ನೀಡಿದ್ದರು. ಆದ್ರೆ ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಶಾಸ್ತ್ರಕ್ಕೆ ನಟ ದರ್ಶನ್ ಬರಬಹುದು ಅಂತ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದರು.
ಆದ್ರೆ ನಟ ದರ್ಶನ್ ಕುಟುಂಬಸ್ಥರು ಯಾರೋಬ್ಬರು ಸಹ ಭಾಗಿಯಾಗಿಲ್ಲ. ಇದು ಸಾಕಷ್ಟು ಅಭಿಮಾನಿಗಳಿಗೆ ನೋವು ತಂದಿದೆ ಅಂತಲೇ ಹೇಳಬಹುದು. ಏಕೆಂದರೆ ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್ ಸ್ಟಾರ್ ನಟಿ ಸುಮಲತಾ ಅವರ ಜೊತೆಗೆ ಒಳ್ಳೆಯ ಒಡನಾಟ ಇತ್ತು.
ಇತ್ತೀಚೆಗಷ್ಟೆ ಸೋಷಿಯಲ್ ಮೀಡಿಯಾದಲ್ಲಿ ಸುಮಲತಾ ಅಂಬರೀಷ್, ಅಭಿಷೇಕ್, ಅವಿವಾ ಎಲ್ಲರನ್ನೂ ನಟ ದರ್ಶನ್ ಅನ್‌ಪಾಲೋ ಮಾಡಿದ್ದರು. ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಸಹ ಮಾಡಿತ್ತು. ಆದ್ರೆ ಭಿಷೇಕ್ ಅಂಬರೀಷ್ ಅವರು ನಾಮಕರಣ ಶಾಸ್ತ್ರಕ್ಕೆ ಬರದೇ ಇದ್ದಿದ್ದೂ ಮತ್ತೊಂದು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ನಟ ದರ್ಶನ್ ಅವರು ದಿ ಡೆವಿಲ್ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಾಗಿ ಅಭಿಷೇಕ್ ಹಾಗೂ ಅವಿವಾ ಮಗನ ನಾಮಕರಣಕ್ಕೆ ಮಿಸ್ ಆಗಿರಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ