ಹತ್ಯೆ ಬಳಿಕ ಮೊಬೈಲ್‌ನಲ್ಲಿದ್ದ 4 ಫೋಟೋಗಳನ್ನು ಡಿಲೀಟ್ ಮಾಡಿದ್ದರು
ಪ್ರಕರಣದ ಆರೋಪಿಗಳು ನಟ ದರ್ಶನ್ ವಿರುದ್ಧ ನೀಡಿರುವ ಹೇಳಿಕೆ
ಇನ್ನೆರಡು ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸ್ ತಯಾರಿ
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ಪ್ರಕರಣದಲ್ಲಿ A2 ಆಗಿರೋ ದರ್ಶನ್ ಅವರು ಆರೋಪಿ ನಂ.1 ಆಗೋ ಸಾಧ್ಯತೆ ಹೆಚ್ಚಾಗಿದೆ. ಪೊಲೀಸರ ತನಿಖೆ ವೇಳೆ ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿರೋ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದೆ. ಇದು ಕೊಲೆ ಕೇಸ್‌ಗೆ ಸದ್ಯ ರೋಚಕ ಟ್ವಿಸ್ಟ್ ಕೊಟ್ಟಿದೆ.
ಇದನ್ನೂ ಓದಿ: ‘ದರ್ಶನ್‌ಗೆ ಹಾಲು, ಮೊಟ್ಟೆ, ಬ್ರೆಡ್ ಕೊಡುತ್ತಿದ್ದೇವೆ’- ಮನೆ ಊಟದ ಅರ್ಜಿಗೆ ಹೊಸ ಟ್ವಿಸ್ಟ್ ಕೊಟ್ಟ ಜೈಲಾಧಿಕಾರಿಗಳು!
ಕೊಲೆ ಕೇಸ್ ತನಿಖೆಯ ಅಂತಿಮ ಹಂತದಲ್ಲಿರುವ ಪೊಲೀಸರು ಇನ್ನೆರಡು ವಾರದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆ ವೇಳೆ ಸಾಕ್ಷ್ಯಗಳ ಆಧಾರದಲ್ಲಿ ದರ್ಶನ್ ಎ1 ಆಗೋದು ಬಹುತೇಕ ಫಿಕ್ಸ್ ಎನ್ನಲಾಗುತ್ತಿದೆ. ಕೊಲೆ ಕೇಸಲ್ಲಿ A1 ಆಗಿರೋ ಪವಿತ್ರಾ ಗೌಡ ಅವರು ಈಗಾಗಲೇ ಜಾಮೀನಿಗಾಗಿ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ದರ್ಶನ್ನ A1 ಮಾಡ್ತಿರೋದೇಕೆ?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಕ್ರಿಮಿನಲ್ ಒಳಸಂಚಿನಲ್ಲಿ ಭಾಗಿಯಾಗಿರುವ ಆರೋಪ ದರ್ಶನ್ ಅವರ ಮೇಲಿದೆ. ದರ್ಶನ್ ಹೇಳಿದ್ದಕ್ಕೆ ಆರೋಪಿಗಳಿಂದ ರೇಣುಕಾಸ್ವಾಮಿ ಕಿಡ್ನಾಪ್ ಮಾಡಿರೋದು ಸ್ಪಷ್ಟವಾಗಿ ಕಂಡು ಬಂದಿದೆ. ಅಪಹರಣ, ಕೊಲೆಯ ಸಾಕ್ಷ್ಯ ನಾಶದಲ್ಲೂ ಪ್ರಮುಖ ಪಾತ್ರ ವಹಿಸಿದ್ರಿಂದ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ: ದರ್ಶನ್‌ಗೆ ಮತ್ತಷ್ಟು ಸಂಕಷ್ಟ, ಮೊಬೈಲ್ ರಿಟ್ರೀವ್.. ಫೋನ್ನಲ್ಲಿ ಸಿಕ್ಕ ಆ 4 ಸತ್ಯಗಳೇನು?
ರೇಣುಕಾಸ್ವಾಮಿ ಮೃತದೇಹ ಸಾಗಿಸೋದಕ್ಕೆ ಆರೋಪಿಗಳಿಗೆ ₹30 ಲಕ್ಷ ಹಣ ನೀಡಿರುವ ಆರೋಪ ಕೂಡ ಇದೆ. ಎಫ್ಎಸ್ಎಲ್ ರಿಪೋರ್ಟ್ನಲ್ಲೂ ದರ್ಶನ್ ವಿರುದ್ಧ ಸಾಕ್ಷ್ಯ ಪತ್ತೆಯಾಗಿದೆ. ಕೊಲೆ ಕೇಸ್‌ನಲ್ಲಿ ದರ್ಶನ್ ಭಾಗಿಯಾಗಿದ್ದಕ್ಕೆ ಪ್ರಬಲ ಸಾಕ್ಷ್ಯಗಳು ಪೊಲೀಸರಿಗೆ ಸಿಕ್ಕಿದೆ. ಪ್ರಕರಣದ ಕೆಲ ಆರೋಪಿಗಳು ದರ್ಶನ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು, ಸಿಸಿಟಿವಿ ಪುರಾವೆಗಳಿಂದಲೂ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
4 ಸ್ಫೋಟಕ ಫೋಟೋಗಳು ಲಭ್ಯ!
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಗಳ ಬಳಿಯಿದ್ದ ಮೊಬೈಲ್‌ನಲ್ಲಿ ರಿಟ್ರೀವ್ ಮಾಡಲಾಗಿದೆ. ಮೊಬೈಲ್ ರಿಟ್ರೀವ್ ವೇಳೆ ನಾಲ್ಕು ಸ್ಫೋಟಕ ಫೋಟೋಗಳು ಲಭ್ಯವಾಗಿದೆ. ಜೀವ ಬಿಡೋ ಮುನ್ನ ರೇಣುಕಾಸ್ವಾಮಿ ಕೈ ಮುಗಿದು ಬೇಡಿಕೊಂಡಿದ್ದಾನೆ ಎನ್ನಲಾಗಿದ್ದು ಈ ಫೋಟೋಗಳನ್ನ ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಇಬ್ಬರು ಆರೋಪಿಗಳ ಮೊಬೈಲ್‌ನಲ್ಲಿ ನಾಲ್ಕು ಫೋಟೋಗಳು ಲಭ್ಯವಾಗಿದೆ.
ಇಬ್ಬರು ಆರೋಪಿಗಳು ರೇಣುಕಾಸ್ವಾಮಿ ಹತ್ಯೆ ಬಳಿಕ ತಮ್ಮ ಮೊಬೈಲ್‌ನಲ್ಲಿದ್ದ 4 ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಡಿಲೀಟ್ ಮಾಡಿರೋ ಆ ಫೋಟೋಗಳನ್ನು ರಿಟ್ರೀವ್ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತ ರೇಣುಕಾಸ್ವಾಮಿಯ ಮೇಲೆ ಹಲ್ಲೆ ಮಾಡಿದ್ದ ಫೋಟೋಗಳನ್ನು ನೋಡಿದ ಪೊಲೀಸರು ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ.
ಮೊಬೈಲ್‌ನಲ್ಲಿದ್ದ ಫೋಟೋಗಳ್ಯಾವುವು?
01: ಹಲ್ಲೆ ಬಳಿಕ ರೇಣುಕಾಸ್ವಾಮಿಯನ್ನು ಮಲಗಿಸಿರೋ ಫೋಟೋ
02: ಹಲ್ಲೆ ಮಾಡುವಾಗ ರೇಣುಕಾಸ್ವಾಮಿ ಕೈ ಮುಗೀತಿರೋ ಫೋಟೋ
03: ಹಲ್ಲೆಗೊಳಗಾದ ಬಳಿಕ ರಕ್ತದ ಮಡುವಿನಲ್ಲಿ ಬಿದ್ದಿರೋ ಫೋಟೋ
04: ರಕ್ತದ ಮಡುವಿನಲ್ಲಿ ರೇಣುಕಾಸ್ವಾಮಿ ಬಿದ್ದಿರೋ ಇನ್ನೊಂದು ಫೋಟೋ
ಇನ್ನೂ ಕೆಲವರಿಗೆ ಸಂಕಷ್ಟ ಫಿಕ್ಸ್!
ದರ್ಶನ್ A1 ಆಗೋ ಜೊತೆಗೆ ಇನ್ನೂ ಕೆಲವರಿಗೆ ಸಂಕಷ್ಟ ಎದುರಾಗಲಿದೆ. A10 ವಿನಯ್, A14 ಪ್ರದೋಶ್ ದರ್ಶನ್ ಕೆಳಗೆ ಬರೋ ಸಾಧ್ಯತೆ ಇದೆ. ಸಾಕ್ಷ್ಯಗಳ ಆಧಾರದಲ್ಲಿ ಆರೋಪಿ ಸಂಖ್ಯೆ ಬದಲಾವಣೆಯಾದ್ರೆ ವಿನಯ್, ಪವನ್ ಹಾಗೂ ಪ್ರದೋಶ್ಗೂ ಬಿಗ್ ಶಾಕ್ ಕಾದಿದೆ. ಪ್ರಕರಣದ ತನಿಖೆಯ ವೇಳೆ ಯಾಱರ ಪಾತ್ರ ಏನೆಂದು ಬಯಲಾಗಲಿದ್ದು, ಒಳಸಂಚು, ಕ್ರೌರ್ಯತೆ ಮೆರೆದವರಿಗೆ ಚಾರ್ಜ್ಶೀಟ್ನಲ್ಲಿ ಬಿಗ್ ಶಾಕ್ ಎದುರಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ