Advertisment

ಇವರ ಭೇಟಿಯಿಂದ ಜೈಲಿನಲ್ಲಿ ಕೊಂಚ ರಿಲೀಫ್.. ದರ್ಶನ್ ಜೈಲ್ ಡೈರಿ..!

author-image
Ganesh
Updated On
ಜೈಲು ಸೇರಿದ ಬಳಿಕ ಚೇಂಜ್ ಆದ ದರ್ಶನ್.. ಟಿವಿ ನೋಡ್ತಾರೆ, ಕೇರಂ ಆಡ್ತಾರೆ, ಟೈಂ ಪಾಸ್​ ಮಾಡ್ತಾರೆ!
Advertisment
  • ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟನಿಗೆ ಜೈಲು
  • ಮುದ್ದೆ, ಚಪಾತಿ, ಅನ್ನ, ಸಾಂಬಾರ್, ಮಜ್ಜಿಗೆ ಸೇವಿಸಿ ನಿದ್ರೆ
  • ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದಿರುವ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ನಿನ್ನೆ ರಾತ್ರಿ ಬೇಗ ನಿದ್ರೆಗೆ ಜಾರಿದ್ದಾರೆ. ನಿನ್ನೆಯ ದಿನ ಪುತ್ರ ಹಾಗೂ ಮಡದಿ ದರ್ಶನ್ ಅವರನ್ನು ಮಾತಾಡಿಸಿಕೊಂಡು ಹೋಗಿದ್ದಾರೆ.

Advertisment

ಮಗ ಹಾಗೂ ಪತ್ನಿ ಜೊತೆ ಮಾತಾಡಿದ ಬಳಿಕ ದರ್ಶನ್ ಕೊಂಚ ನಿರಾಳರಾಗಿದ್ದಾರೆ ಎಂದು ತಿಳಿದುಬಂದಿದೆ. ನಿನ್ನೆ ರಾತ್ರಿ ಜೈಲೂಟ ಸೇವಿಸಿ 12 ಗಂಟೆ ಸುಮಾರಿಗೆ ನಿದ್ರೆ ಮಾಡಿದ್ದಾರೆ. ಮುದ್ದೆ, ಚಪಾತಿ, ಅನ್ನ ಸಾಂಬಾರ್ ಮಜ್ಜಿಗೆ ಸೇವಿಸಿ ನಿದ್ರೆಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಸೆಮಿಫೈನಲ್ ಹೇಗಿರುತ್ತೆ..? ಯಾರು ಯಾರ ವಿರುದ್ಧ ಸೆಣಸಾಟ ಮಾಡ್ತಾರೆ..?

publive-image

ಕಳೆದ ಎರಡು ದಿನಗಳಿಂದ ಜೈಲಿನಲ್ಲಿ ದರ್ಶನ್ ಚಡಪಡಿಸುತ್ತಿದ್ದರು. ಪತ್ನಿ ಮತ್ತು ಮಗನ ಭೇಟಿ ವೇಳೆ ಕಣ್ಣೀರು ಹಾಕಿ ಮನಸ್ಸು ಹಗುರ ಆಗಿತ್ತು. ಕಳೆದ ಹದಿನೈದು ದಿನಗಳ ನೋವು, ಹತಾಶೆ ಬೇಸರಕ್ಕೆ ಮಡದಿ ಮಗ ಸಾಂತ್ವನ ಸಿಕ್ಕಿತು. ವಿಜಯಲಕ್ಷ್ಮೀ ಅವರು ನಿನ್ನೆ ಜೈಲಿಗೆ ಭೇಟಿ ನೀಡಿ ದರ್ಶನ್​ಗೆ ಧೈರ್ಯ ತುಂಬಿದ್ದಾರೆ ಎನ್ನಲಾಗಿದೆ.

Advertisment

ಇದನ್ನೂ ಓದಿ:ಹೊಟ್ಟೆ ತುಂಬಾ ಕೊಟ್ಟಿದ್ದಾರೆ.. ನಟ ದರ್ಶನ್ ಸ್ಥಿತಿ ನೆನೆದು ಬೇಸರಗೊಂಡ ಧರ್ಮ ಕೀರ್ತಿ ರಾಜ್

publive-image

ಇನ್ನು, ಬೆಳಗ್ಗೆ 6 ಗಂಟೆ ಸುಮಾರಿಗೆ ನಿದ್ದೆಯಿಂದ ಎದ್ದಿದ್ದಾರೆ. ಎದ್ದ ಕೂಡಲೇ ಬಿಸಿ ನೀರು ಕುಡಿದಿದ್ದಾರೆ. ಸಹಕೈದಿಗಳ ಜೊತೆ ದರ್ಶನ್ ಇನ್ನೂ ಸರಿಯಾಗಿ ಬೆರತಿಲ್ಲ. ಕೊಠಡಿಯಲ್ಲಿ ಒಂಟಿಯಾಗಿ ಕುಳಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment