‘ದರ್ಶನ್​ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್‌ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ

author-image
admin
Updated On
‘ದರ್ಶನ್​ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್‌ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ
Advertisment
  • ನ್ಯಾಯಾಧೀಶರ ಮುಂದೆ ಎ1 ಪವಿತ್ರ ಗೌಡ, ಎ2 ದರ್ಶನ್ ಹಾಜರು
  • ಕೋರ್ಟ್‌ನಲ್ಲಿ ಅಕ್ಕ-ಪಕ್ಕದಲ್ಲೇ ನಿಂತಿದ್ದ ದರ್ಶನ್, ಪವಿತ್ರಾ ಗೌಡ
  • ಇತರೆ ಆರೋಪಿಗಳನ್ನು ಭೇಟಿ ಮಾಡುತ್ತಿರುವ ಪೊಲೀಸರಿಂದ ಒತ್ತಡ?

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಗ್ಯಾಂಗ್ ಇವತ್ತು ಮತ್ತೆ ನ್ಯಾಯಾಧೀಶರ ಮುಂದೆ ಹಾಜರಾಗಿತ್ತು. ಸಿಸಿಎಚ್ 57ನೇ ಕೋರ್ಟ್‌ಗೆ ಎ1 ಪವಿತ್ರ ಗೌಡ, ಎ2 ದರ್ಶನ್ ಸೇರಿದಂತೆ 15 ಆರೋಪಿಗಳು ಆಗಮಿಸಿದ್ದರು. ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಗೌಡ ಅಕ್ಕ-ಪಕ್ಕದಲ್ಲೇ ನಿಂತಿದ್ದರು.

ಆರೋಪಿಗಳಿಗೆ ಜಾಮೀನು ನೀಡುವಾಗ ಕೋರ್ಟ್‌ ವಿಚಾರಣೆಗೆ ಖುದ್ದು ಹಾಜರಾಗುವಂತೆ ಷರತ್ತು ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಆರೋಪಿಗಳು ನ್ಯಾಯಾಧೀಶರ ಮುಂದೆ ಹಾಜರಾಗಿದ್ದು, ಮುಂದಿನ ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ.

publive-image

ಇದನ್ನೂ ಓದಿ: ಮುಗಿಯದ ಕಾನೂನು ಹೋರಾಟ.. ಕೋರ್ಟ್​ಗೆ ಹಾಜರಾದ ದರ್ಶನ್, ಪವಿತ್ರಾ ಗೌಡ 

ದರ್ಶನ್, ಪವಿತ್ರಾ ಗೌಡ ಅವರು ವಿಚಾರಣೆಗೆ ಹಾಜರಾಗಿ ತೆರಳಿದ ಬಳಿಕ ದರ್ಶನ್ ಪರ ವಕೀಲ ಸುನೀಲ್ ಕುಮಾರ್ ಅವರು ಪೊಲೀಸರ ವಿರುದ್ಧವೇ ಆರೋಪ ಮಾಡಿದ್ದಾರೆ. ಪೊಲೀಸರು ರೇಣುಕಾಸ್ವಾಮಿ ಪ್ರಕರಣದ 3-4 ಆರೋಪಿಗಳಿಗೆ ಒತ್ತಡ ಹಾಕುತ್ತಿದ್ದಾರೆ. ಆರೋಪಿಗಳನ್ನು ಪೊಲೀಸರು ಭೇಟಿಯಾಗಿದ್ದು ದರ್ಶನ್​ ವಿರುದ್ಧ ಮಾಫಿ ಸಾಕ್ಷಿಯಾಗಲು ಒತ್ತಡ‌ ಹಾಕುತ್ತಿದ್ದಾರೆ ಎಂದಿದ್ದಾರೆ.

ಪೊಲೀಸರು ಆರೋಪಿಗಳನ್ನು ಮಾಫಿ ಸಾಕ್ಷಿ ಮಾಡಲು ಒತ್ತಡ ಹಾಕಿದ್ದಾರೆ ಎಂದಿರುವ ವಕೀಲ ಸುನೀಲ್ ಕುಮಾರ್ ಈ ಬಗ್ಗೆ ನ್ಯಾಯಾಲಯದ ಗಮನಕ್ಕೂ ತಂದಿದ್ದಾರೆ. ವಕೀಲರ ಮನವಿ ಪುರಸ್ಕರಿಸಿರುವ ನ್ಯಾಯಾಧೀಶರು ಇದರ ಬಗ್ಗೆ ಅರ್ಜಿ ಹಾಕುವಂತೆ ಸೂಚನೆ ಕೂಡ ನೀಡಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment