ಪೊಲೀಸರು ಫೋನ್ ಮುಟ್ಟಂಗಿಲ್ಲ, 24X7 80 ಸಿಸಿಟಿವಿ ಕಣ್ಗಾವಲು
ನಟ ದರ್ಶನ್ ತೊಟ್ಟಿದ್ದ ಟೀ ಶರ್ಟ್‌ನಲ್ಲೇ ಇತ್ತಾ ಫ್ಯಾನ್ಸ್‌ಗಳಿಗೆೆ ಸಿಗ್ನಲ್?
ದರ್ಶನ್ರನ್ನು ನೋಡೋದಕ್ಕೂ ಇದೀಗ ಹತ್ತಾರು ಅನುಮತಿ ಪಡೀಬೇಕು
ದರ್ಶನ್ ಕೊನೆಗೂ ಭಯಾನಕ ಬಳ್ಳಾರಿ ಜೈಲು ಸೇರಿದ್ದಾರೆ. 7 ಸುತ್ತಿನ ಕೋಟೆಯ ಮಧ್ಯೆ ದರ್ಶನ್ ಇರಿಸಿರೋ ಸೆಲ್ ಇದೆ. ದರ್ಶನ್ ಸಣ್ಣದಾಗಿ ಮಿಸುಕಾಡಿದ್ರೂ ಜೈಲರ್ಗೆ ಸಿಗ್ನಲ್ ಹೋಗುತ್ತೆ. 24 ಗಂಟೆಯೂ ದರ್ಶನ್ ಸುತ್ತಾ ಮೂವರ ವಿಶೇಷ ಕಾವಲು ಇರಲಿದೆ. ಇಲ್ಲಿನ ಭದ್ರತಾ ವ್ಯವಸ್ಥೆಯ ಒಂದೊಂದು ಗೇಟ್ ದಾಟೋಕೆ ಯಾರಿಂದಲೂ ಸಾಧ್ಯವಾಗೋದಿಲ್ಲ. ಪರಪ್ಪನ ಅಗ್ರಹಾರಕ್ಕಿಂತಲೂ ಟೈಟ್ ಸೆಕ್ಯೂರಿಟಿ ಇದೊಂದು ಸೆಲ್ಗಿದೆ. ಟೆರರಿಸ್ಟ್ಗಳಿಗೆ ಕಟ್ಟಿದ್ದ ಕೋಣೆಯೊಳಗೆ ದರ್ಶನ್ರನ್ನ ಬಿಟ್ರಾ ಜೈಲಾಧಿಕಾರಿಗಳು? ಎಂಥಾ ಕೋಣೆಯಲ್ಲಿ ಇನ್ಮುಂದೆ ದರ್ಶನ್ ಇರಬೇಕಿದೆ ಎಂಬ ವಿಚಾರದ ಬಗ್ಗೆ ಇಲ್ಲಿ ತಿಳಿಯೋಣ.
ಇದನ್ನೂ ಓದಿ: ಕೂಲಿಂಗ್ ಗ್ಲಾಸ್, ಹ್ಯಾಂಡ್ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!
ಅವತ್ತು ಚೌಕ ಸಿನಿಮಾ ಶೂಟಿಂಗ್ಗಾಗಿ ಬಳ್ಳಾರಿ ಜೈಲಿಗೆ ಹೋಗಿದ್ರು. ಆದ್ರೀಗ, ವಿಚಾರಣಾಧೀನ ಕೈದಿಯಾಗಿ ಭಯಾನಕ ಬಳ್ಳಾರಿ ಜೈಲಿಗೆ ದರ್ಶನ್ ಕಾಲಿಟ್ಟಿದ್ದಾರೆ. ಬಳ್ಳಾರಿ ಜೈಲಿಗೆ ಬರೋದಕ್ಕೆ ಆರಂಭದಲ್ಲಿ ವಿರೋಧಿಸಿದ್ದ ದರ್ಶನ್ ಕೋರ್ಟ್ ಆದೇಶಕ್ಕೆ ತಲೆ ಬಾಗಿದ್ದಾರೆ. ಬಳ್ಳಾರಿ ಜೈಲಿನ ಭಯಾಗ್ರಫಿಗೆ ಬೆಚ್ಚಿಬಿದ್ದಿದ್ದ ದರ್ಶನ್ಗೀಗ ಮತ್ತೊಂದು ಭಯವೂ ಶುರುವಾಗಿದೆ. ಅದು ದರ್ಶನ್ರನ್ನ ಇರಿಸುತ್ತಿರೋ ಕೋಣೆಯ ಭಯ. ದರ್ಶನ್‌ಗೆ ಬಳ್ಳಾರಿ ಕೇಂದ್ರ ಕಾರಾಗೃಹದ 15ನೇ ನಂಬರ್ ಸೆಲ್ ನಿಗದಿಪಡಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ದರ್ಶನ್‌ಗೆ 6106 ಎಂಬ ವಿಚಾರಣಾಧೀನ ಕೈದಿ ನಂಬರ್ ನೀಡಲಾಗಿತ್ತು. ಆದರೆ ಈಗ ಅದು ಬದಲಾಗಿದೆ.
ದರ್ಶನ್ ಬಳ್ಳಾರಿ ಜೈಲಿಗೆ ಎಂಟ್ರಿ ನೀಡುತ್ತಿದ್ದಂತೆಯೇ, ಅವರಿಗೆ ಹಳೆಯ ಕೈದಿ ನಂಬರ್ ಅನ್ನು ಬದಲಾಯಿಸಲಾಗಿದೆ. ಸದ್ಯ ದರ್ಶನ್ ವಿಚಾರಣಾಧೀನ ಕೈದಿ ನಂಬರ್ 511 ಎಂದಾಗಿದೆ. ಬಳ್ಳಾರಿ ಜೈಲಿನಲ್ಲಿ ಅವರು ವಿಚಾರಣಾಧೀನ ಕೈದಿಯಾಗಿ ಇರುವ ತನಕ ಇದೇ ನಂಬರ್ ಇರಲಿದೆ. ಕೈದಿ ನಂಬರ್ಗಿಂತಲೂ ಹೆಚ್ಚು ದರ್ಶನ್ರನ್ನು ಬೆಚ್ಚಿಬೀಳಿಸುತ್ತಿರುವುದು ಸೆಲ್ ನಂಬರ್ 15ರ ಕೋಣೆ. ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪಡೆದ ಕಾರಣಕ್ಕೇ ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದಾರೆ ದರ್ಶನ್. ವಿಲ್ಸನ್ ಗಾರ್ಡನ್ ನಾಗ. ಬೇಕರಿ ರಘು ಅನ್ನೋ ರೌಡಿಗಳ ರಾಜಾತಿಥ್ಯದ ಅಂತರ್ಯುದ್ಧಕ್ಕೆ ಸಿಲುಕಿದ್ದ ದರ್ಶನ್ ಬೆಂಕಿಯಿಂದ ಬಾಣಲೆಗೆ ಬಿದ್ದಿದ್ದಾರೆ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ರನ್ನ ಇರಿಸಿರೋ ಸ್ಪೆಷಲ್ ಸೆಲ್ ಅಕ್ಷರಶಃ 7 ಸುತ್ತಿನ ಕೋಟೆಯ ಮಧ್ಯೆ ಇದೆ. ದರ್ಶನ್ರನ್ನು ನೋಡೋದಕ್ಕೂ ಇದೀಗ ಹತ್ತಾರು ಅನುಮತಿ ಪಡೆಯಬೇಕಾಗುತ್ತೆ.
ಬಳ್ಳಾರಿ ಸೆಂಟ್ರಲ್ ಜೈಲಿನ ಮುಖ್ಯದ್ವಾರದಿಂದ 900 ಮೀಟರ್ ದೂರದಲ್ಲಿದೆ ದರ್ಶನ್ ಇರಿಸಲಿರೋ ವಿಶೇಷ ಸೆಲ್. ಮುಂದಿನ ಗೇಟ್ನಿಂದ ದರ್ಶನ್ ಇರೋ ಜಾಗಕ್ಕೆ ಹೋಗೋದಕ್ಕೆ ಜೈಲಿನ ಪೊಲೀಸ್ ಪೇದೆಯೂ ಸಹ ಏಳು ಸುತ್ತಿನ ಕೋಟೆಯನ್ನು ದಾಟಲೇಬೇಕಿದೆ. ಅಷ್ಟರ ಮಟ್ಟಿಗಿನ ಭದ್ರತಾ ವ್ಯವಸ್ಥೆಯನ್ನು ಜೈಲಾಧಿಕಾರಿಗಳು ಮಾಡಿದ್ದಾರೆ. ಬಳ್ಳಾರಿ ಎಸ್ಪಿ ಶೋಭಾರಾಣಿ ದರ್ಶನ್ ಶಿಫ್ಟ್ ಆಗೋಕೆ ಮುಂಚೆಯೇ ಆ ಸ್ಪೆಷಲ್ ಸೆಲ್ ಬಗ್ಗೆ ಇಂಥದ್ದೊಂದು ಸುಳಿವನ್ನು ನೀಡಿದ್ದರು. ಅಬ್ಸರ್ವೇಷನ್ ಇರೋವಂತಹ ಕೈದಿಗೆ ವಿಶೇಷ ಸೆಲ್ ಒಂದಿದೆ. ಅದೇ ಸೆಲ್ನಲ್ಲೇ ಇರಿಸುತ್ತೇವೆ ಅನ್ನೋ ಮಾತನ್ನು ಹೇಳಿದ್ರು. ಅಂತೆಯೇ ದರ್ಶನ್ ಇದೀಗ ಸೆಲ್ ನಂಬರ್ 15ರಲ್ಲಿ ಇರಲಿದ್ದಾರೆ. ಅಷ್ಟಕ್ಕೂ ದರ್ಶನ್ ಸೆಲ್ ಸುತ್ತಲೂ ಇರೋ ಏಳು ಸುತ್ತಿನ ಸರ್ಪ ಕೋಟೆಗಳು ಯಾವುವು ಗೊತ್ತಾ? ಸೆಲ್ ನಂಬರ್ 15ರ ಸೀಕ್ರೆಟ್ಗಳೇನು? ಅನ್ನೋದನ್ನ ಒಂದೊಂದಾಗಿ ತಿಳಿಯೋಣ.
ಇದನ್ನೂ ಓದಿ: ಕೊನೆಗೂ ದರ್ಶನ್ ಕೈಯಲ್ಲಿದ್ದ ಕಡಗ ತೆಗೆಸಿದ ಪೊಲೀಸರು.. ಬಳ್ಳಾರಿ ಜೈಲಲ್ಲೂ ಅದೇ ಗತ್ತು, ದೌಲತ್ತು!
ಬಳ್ಳಾರಿ ಸೆಂಟ್ರಲ್ ಜೈಲಿನೊಳಕ್ಕೆ ಕಾಲಿಡೋದಕ್ಕೂ ಮುನ್ನ ಎರಡು ಇಲಾಖೆಗಳ ಪೊಲೀಸ್ ಭದ್ರತಾ ಪಡೆಯನ್ನು ದಾಟಬೇಕು. ಮೊದಲ ಗೇಟ್ ಮುಂದೆ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಪೊಲೀಸರ ಸರ್ಪಗಾವಲು ದಾಟಬೇಕು. ಒಂದು ವೇಳೆ ಇವರನ್ನು ದಾಟಿ ಒಳಗೆ ಕಾಲಿಟ್ರೆ ಅಲ್ಲಿ ಜೈಲಿನ ಪೊಲೀಸರ ಸರ್ಪಗಾವಲು ಇರುತ್ತದೆ. ಈ ಎರಡೂ ಇಲಾಖೆಯ ಪೊಲೀಸ್ ಪಡೆಯನ್ನು ದಾಟದೇ ದರ್ಶನ್ ಇರೋ ಸೆಲ್ ನಂಬರ್ 15ರ ಸನಿಹಕ್ಕೂ ಹೋಗೋದಕ್ಕೆ ಸಾಧ್ಯವಾಗೋದಿಲ್ಲ.
ಪರಪ್ಪನ ಅಗ್ರಹಾರದಲ್ಲೂ ಸಿಸಿಟಿವಿ ಕ್ಯಾಮೆರಾಗಳಿದ್ವು. ಕುಖ್ಯಾತ ರೌಡಿಗಳ ಸಲುಗೆ ಮಧ್ಯೆ ದರ್ಶನ್ ದರ್ಬಾರ್ ಮಾಡಿದ್ರು. ಆದ್ರೆ, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಸಾಮಾನ್ಯ ಸಿಸಿಟಿವಿಗಳಂತೂ ಇಲ್ಲ. ದರ್ಶನ್ ಸಣ್ಣದಾಗಿ ಮಿಸುಕಾಡಿದ್ರೂ ತಕ್ಷಣಕ್ಕೆ ಜೈಲರ್ಗೆ ಸಿಗ್ನಲ್ ಕೊಡೋ ವಿಶೇಷ ವ್ಯವಸ್ಥೆ ಇದೆ. ದರ್ಶನ್ ಬಳ್ಳಾರಿ ಜೈಲಿನಲ್ಲಿ ಮೊದಲಿನಂತೆ ಇರೋಕಾಗಲ್ಲ. ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿರುತ್ತಾರೆ. ಈ ಜೈಲಿನಲ್ಲಿ 80 ಸಿಸಿ ಕ್ಯಾಮರಾ, ಇದ್ದು 9 ಡಾನ್ ಮೆಟರಿಯಲ್ ಹಾಲ್ ಮತ್ತು 16 ಸ್ಪೆಷಲ್ ಬ್ಯಾರಿಕೇಡ್ ಇದೆ. ಇಷ್ಟೆಲ್ಲಾ ಸರ್ಪಗಾವಲು ಇರೋ ಕಾರಣಕ್ಕೇ ದರ್ಶನ್ರನ್ನ ಈ ಸ್ಪೆಷಲ್ ಸೆಲ್ 15ರಲ್ಲಿ ಇರಿಸಲಾಗಿರೋದು.
ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಇರೋ ತನಕ 24 ಗಂಟೆಯೂ ಮೂವರ ವಿಶೇಷ ಸರ್ಪಗಾವಲು ಇರುತ್ತದೆ. ಇದಕ್ಕಾಗಿಯೇ ಬಳ್ಳಾರಿ ಜೈಲರ್ ದರ್ಶನ್ ಮೇಲೆ ಸದಾ ನಿಗಾ ಇಡೋದಕ್ಕೆ ಇಬ್ಬರು ವಾಚ್ ಗಾರ್ಡ್ ಹಾಗೂ ಒಬ್ಬ ಎಎಸ್ಐ ನೇಮಿಸಿದ್ದಾರೆ. ಈ ಮೂವರು ದಿನದ 24 ಗಂಟೆಯೂ ಸಹ ದರ್ಶನ್ ಮೇಲೆ ಕಣ್ಣಿಟ್ಟಿರುತ್ತಾರೆ. ಸಣ್ಣದೊಂದು ನೊಣ ದರ್ಶನ್ ಮೇಲೆ ಕೂತರೂ ಈ ಮೂವರನ್ನು ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಅಷ್ಟರ ಮಟ್ಟಿಗಿನ ಅಬ್ಸರ್ವೇಷನ್ ದರ್ಶನ್ ಮೇಲಿರುತ್ತೆ. ಈ ಮೂರನೇ ಸರ್ಪವಾಗಲು ಮುಟ್ಟೋದಕ್ಕೆ ಜೈಲರ್ ಪರ್ಮೀಷನ್ ಬೇಕೇಬೇಕು. ಇವರಲ್ಲದೇ ಅನುದಿನವೂ 200 ಸಿಬ್ಬಂದಿಯ ಕಾವಲು ಇರುತ್ತದೆ.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್, PUMA ಟೀ-ಶರ್ಟ್, ಕತ್ತಲ್ಲಿ ಕೂಲಿಂಗ್ ಗ್ಲಾಸ್.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!
ದರ್ಶನ್ ಸುಮ್ಮನೆ ಕೂತಿದ್ರೂ ಕೂಡ ಅವರ ಸುತ್ತಲಿನ ವಾತಾವರಣವನ್ನು ದಿನದ 24 ಗಂಟೆಯೂ ನೋಡುವಂಥಾ ವ್ಯವಸ್ಥೆ ಇರುತ್ತದೆ. ಅದಕ್ಕಾಗಿಯೇ ವಿಶೇಷ ಕ್ಯಾಮೆರಾ ಕೂಡ ದರ್ಶನ್ ಸುತ್ತಲೂ ಸದಾ ಗರುಡಗಣ್ಣಿನಿಂದ ನೋಡುತ್ತಾ ಇರುತ್ತದೆ. ಹಾಗಾಗಿಯೇ ದರ್ಶನ್ ಆಕಳಿಸೋದೂ ಸಹ ಗೊತ್ತಾಗಿಬಿಡುತ್ತದೆ. ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಏನು ಮಾಡಿದ್ರು? ಹೇಗಿದ್ರು ಅನ್ನೋದಕ್ಕೆ ವೈರಲ್ ಆಗಿದ ವಿಡಿಯೋ ಫೋಟೋ ಸಾಕ್ಷಿ ನುಡಿಯುತ್ತಿದೆ.
ಆದ್ರೆ, ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ದರ್ಶನ್ ಸುಮ್ಮನೆ ಕೆಮ್ಮಿದ್ರೂ ಏನಾಗ್ತಿದೆ ಅನ್ನೋ ಲೈವ್ ಕಂಟೆಂಟ್ ಜೈಲರ್ ಮುಂದಿರೋ ಕಂಪ್ಯೂಟರ್ ಪರದೆಯ ಮೇಲೆ ಸದಾ ಬಿತ್ತರ ಆಗ್ತಾ ಇರುತ್ತೆ. ಯಾಕಂದ್ರೆ, ಡಿ ಸೆಲ್‌ನಲ್ಲಿ 360 ಡಿಗ್ರಿ ಕ್ಯಾಮೆರಾವನ್ನೂ ಸಹ ಈಗಾಗಲೇ ಜೋಡಿಸಲಾಗಿದೆ. ಪಂಜಾಬ್ ಸಿಎಂ ಹತ್ಯೆ ಮಾಡಿದ ಉಗ್ರಗಾಮಿಗಳು ಬಂಧಿಸಿಡಲು ಸಿದ್ದಪಡಿಸಿದ್ದ ಸೆಲ್ ಗಳು ಇವಾಗಿದ್ದು, ಇದರಲ್ಲಿ ಮಂಗಳೂರು, ಶಿವಮೊಗ್ಗ, ಬೆಂಗಳೂರಿನಲ್ಲಿ ವಿವಿಧ ಆರೋಪ ಮತ್ತು ಅಪರಾಧ ಅಡಿಯಲ್ಲಿ ಬಂಧಿತರಾಗಿದ್ದ 11 ಜನರು ಈ ಸೆಲ್ ಗಳಲ್ಲಿ ಇಡಲಾಗಿದೆ. ಕಲ್ಲಿನಿಂದ ನಿರ್ಮಾಣವಾದ ಬೃಹತ್ ಗೋಡೆಗಳ ಪಕ್ಕದಲ್ಲೇ ಇರೋ ಈ ಸೆಲ್ ಬಗ್ಗೆ ಭಯಾನಕ ಕಥೆಗಳೂ ಇವೆ. ಪುಟ್ಟ ಕೋಣೆ ಸುಣ್ಣದ ಲೇಪನ ಮಾಡಲಾಗಿದೆ.
ಯಾವ ಮೂಲೆಯಿಂದಲೂ ದರ್ಶನ್ ಇಣುಕಿ ನೋಡೋದಕ್ಕೂ ಅವಕಾಶವಿಲ್ಲದ ಸೆಲ್ ಇದು. ಈ ವಿಶೇಷ ಕೋಣೆಯನ್ನು ಬಹುಪಾಲು ಕುಖ್ಯಾತ ರೌಡಿಗಳು. ಪಾತಕಿಗಳಿಗೇ ಬಳಸಲಾಗಿದೆ. ದರ್ಶನ್ ಸದ್ಯ ಜೈಲುವಾಸ ಅನುಭವಿಸಬೇಕಿರೋ ಬಳ್ಳಾರಿ ಜೈಲಿನ ಈ ಸೆಲ್ ಅನ್ನ ಒಂದರ್ಥದಲ್ಲಿ ಅರ್ಧ ಕತ್ತಲಿನ ಕೋಣೆ ಅಂದ್ರೂ ತಪ್ಪಾಗೋದಿಲ್ಲ. ಅಷ್ಟರಮಟ್ಟಿಗಿನ ಭೀಕರತೆ ಈ ಕೋಣೆಯನ್ನು ಆವರಿಸಿದೆ. ಅಲ್ಲದೇ ಡಿ ಸೆಲ್ ಅನ್ನ ಸುಣ್ಣದ ಸೆಲ್ ಅಂತಾರೆ. ಇದು ಮಾಮೂಲಿ ಸೆಲ್ ಅಲ್ಲ. ದರ್ಶನ್ ಅವರನ್ನು ಇರಿಸಲಿರುವ ಸೆಲ್ ನಂಬರ್ 15, ಉಳಿದ ಸೆಲ್‌ಗಳಿಂದ ಪ್ರತ್ಯೇಕವಾಗಿದೆ. ಈ ಸೆಲ್‌ಗೆ ಹೆಚ್ಚಿನ ಭದ್ರತೆ ಒದಗಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಪ್ರತಿ ಅವಧಿಯಲ್ಲೂ ಮೂವರು ಸಿಬ್ಬಂದಿ ನಿರಂತರ ನಿಗಾವಹಿಸಲಿದ್ದಾರೆ. ಜೈಲ್ ಪ್ರವೇಶದ ಬಲ ಭಾಗದಲ್ಲಿ ಮಹಿಳಾ ಸೆಲ್ ಇದ್ದು, ಅಲ್ಲೂ ಪ್ರತ್ಯೇಕ ಸೆಲ್‌ಗಳಿವೆ. ಇಲ್ಲಿನ ಒಂದು ಸೆಲ್‌ನಲ್ಲಿ ದರ್ಶನ್ ಅವರನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದೆ. ಇವರ ಸನಿಹದ ಸೆಲ್ಗಳಲ್ಲಿದ್ದ ಕುಖ್ಯಾತ ರೌಡಿಗಳನ್ನು, ಗಲಭೆಕೋರರನ್ನು ಇದೀಗ ಮತ್ತೊಂದು ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಹಾಗಾಗಿಯೇ ದರ್ಶನ್ ಡಿ ಸೆಲ್‌ನಲ್ಲಿ ಏಕಾಂಗಿಯಾಗಿರ್ತಾರೆ. ಸನಿಹದಲ್ಲಿ ಯಾರನ್ನಾದ್ರೂ ಮಾತಾಡಿಸೋಣ ಅಂದ್ರೆ ಅಕ್ಕ ಪಕ್ಕದ ಸೆಲ್ಗಳಲ್ಲಿ ನರಪಿಳ್ಳೆಯೂ ಇರೋದಿಲ್ಲ. ಇದೆಲ್ಲವೂ ಸೆಲ್ ನಂಬರ್ 15ರ ಅಂದ್ರೆ ಡಿ ಸೆಲ್ನ ಭಯಾನಕ ಸಂಗತಿಗಳು. ಈ ಸೆಲ್ ಸನಿಹಕ್ಕೆ ಹೋದ್ರೂ, ಕೊನೆಯ ಅಂದ್ರೆ 7ನೇ ಕೋಟೆ ಮುಟ್ಟೋದಕ್ಕೆ ಯಾರಿಂದಲೂ ಸಾಧ್ಯವಾಗೋದಿಲ್ಲ. 7 ಕೋಟೆಯಲ್ಲಿ 6 ವಲಯದ ರಕ್ಷಾ ಪ್ರವಾಹ ಹರಿಯುತ್ತಿರುತ್ತದೆ. ಮುಟ್ಟಿದ್ರೆ ಮಟಾಷ್ ಆಗೋದು ಪಕ್ಕಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ