newsfirstkannada.com

ಕೊಲೆ ಆರೋಪ ಪ್ರಕರಣ.. ದರ್ಶನ್​​ಗೆ ಈ ಮೂರು ಕೇಸ್​ಗಳಲ್ಲಿ ಕಂಟಕ ಪಕ್ಕಾ..?

Share :

Published June 11, 2024 at 2:00pm

Update June 11, 2024 at 2:05pm

    ಚಾಲೆಂಜಿಂಗ್ ಸ್ಟಾರ್ ದರ್ಶನ್​​ರನ್ನು ಬಂಧಿಸಿದ ಪೊಲೀಸರು

    ಮುಂದಿನ ದಿನಗಳಲ್ಲಿ ದರ್ಶನ್​​ಗೆ ಕಾನೂನು ಕಂಟಕ

    ದರ್ಶನ್ ವಿರುದ್ಧ ಕೇಳಿಬಂದ ಆರೋಪಗಳು ಏನೇನು?

ಕೊಲೆ ಆರೋಪ ಪ್ರಕರಣದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧನಕ್ಕೆ ಒಳಗಾಗಿರುವ ದರ್ಶನ್​ ಅವರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಬಂಧನಕ್ಕೆ ಒಳಗಾಗಿರುವ ದರ್ಶನ್​​ಗೆ ಮೂರು ಪ್ರಕರಣಗಳಲ್ಲಿ ಸಂಕಷ್ಟ ಎದುರಿಸಬೇಕಾದ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ:ದರ್ಶನ್​ ಅಭಿಮಾನಿ ಆಗಿದ್ದ ರೇಣುಕಾಸ್ವಾಮಿ -ವಿಜಯಲಕ್ಷ್ಮೀ ಸಂಸಾರ ಚೆನ್ನಾಗಿರಲಿ ಅಂತಾ ಬಯಸಿದ್ನಂತೆ..!

ಯಾವುದು ಆ ಮೂರು ಪ್ರಕರಣ..?

  1. ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿರೋ ಆರೋಪ ಕೇಸ್ (ಐಪಿಸಿ ಸೆಕ್ಷನ್‌ 364)
  2. ಗೋಡೌನ್​​ನಲ್ಲಿ ಆತನನ್ನು ಕೂಡಿಟ್ಟು ಮಾರಣಾಂತಿಕ ಹಲ್ಲೆ ಮಾಡಿರೋ ಆರೋಪ ಕೇಸ್ (IPC ಸೆಕ್ಷನ್ 302 )
  3. ಮೃತದೇಹ ಎಸೆದು ಸಾಕ್ಷ್ಯ ನಾಶಕ್ಕೂ ಯತ್ನಿಸಿದ ಆರೋಪ ಕೇಸ್ (PC 201 – ಸಾಕ್ಷ್ಯ ನಾಶ)

ಈ ಪ್ರಕರಣದಲ್ಲಿ ಪೊಲೀಸರು ಸಮರ್ಪಕವಾಗಿ ತನಿಖೆ ನಡೆಸಿದ್ರೆ ದರ್ಶನ್ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಈಗಾಲೇ ಸಾಕ್ಷ್ಯ ನಾಶ ಹಾಗೂ ಕೊಲೆ ಸೆಕ್ಷನ್ ಅಡಿಯಲ್ಲಿ ದರ್ಶನ್ ವಿರುದ್ಧ ಕೇಸ್ ದಾಖಲಾಗಿದೆ. ಚಿತ್ರದುರ್ಗದಲ್ಲಿ ಕಿಡ್ನ್ಯಾಪ್ ಮಾಡಿದ ಅಡಿಯಲ್ಲಿ ರಘು ದರ್ಶನ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಿಡ್ನಾಪ್ ಕೇಸ್ ತನಿಖೆ ನಡೆಸಿದಾಗ ಅಪರಹಣಕ್ಕೆ ಮೂಲ ಕಾರಣ ಯಾರು ಅನ್ನೋದ್ರ ಬಗ್ಗೆ ತನಿಖೆ ಆಗಲಿದೆ.

ಇದನ್ನೂ ಓದಿ:ಶೆಡ್​ನಲ್ಲಿ ಕೂಡಿ ಹಾಕಿ ಥಳಿತ.. ಅಲ್ಲೇ ಸ್ಪಾಟ್.. ಕೇಸ್​ ಮುಚ್ಚಿಹಾಕಲು ನಡೆದಿತ್ತಾ ಪ್ಲಾನ್..?

ಅದೇ ರೀತಿ ಶೆಡ್​ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿರೋದು. ಹಲ್ಲೆ ಬಳಿಕ ಆತ ಸಾವನ್ನಪ್ಪಿರೋದ್ರಿಂದ ಇಲ್ಲಿ ಕೊಲೆ ಪ್ರಕರಣ ದಾಖಲಾಗಲಿದೆ. ಅಂದರೆ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಾಗಿದೆ. ಅದೇ ರೀತಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಸೆಕ್ಷನ್ ಅಡಿಯಲ್ಲೂ ಕೇಸ್ ದಾಖಲಾಗಿದೆ. ಈ ಮೂರು ಕೇಸ್​ನಲ್ಲೂ ದರ್ಶನ್ ತಪ್ಪಿಸಿಕೊಳ್ಳೋದು ಸುಲಭವಿಲ್ಲ. ಈ ಸಂಬಂಧ ದರ್ಶನ್ ಪಾತ್ರ ಇರುವ ಬಗ್ಗೆ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ.

ಇದನ್ನೂ ಓದಿ:ಒಂದು ವರ್ಷದ ಹಿಂದೆ ಮದುವೆ.. ಕೊಲೆಯಾದ ರೇಣುಕಾಸ್ವಾಮಿ ಪತ್ನಿ ತುಂಬು ಗರ್ಭಿಣಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಲೆ ಆರೋಪ ಪ್ರಕರಣ.. ದರ್ಶನ್​​ಗೆ ಈ ಮೂರು ಕೇಸ್​ಗಳಲ್ಲಿ ಕಂಟಕ ಪಕ್ಕಾ..?

https://newsfirstlive.com/wp-content/uploads/2024/06/DARSHAN-8.jpg

Load More