ರೇಣುಕಾಸ್ವಾಮಿ ಕೇಸ್​​; ನಾಳೆ ನಟ ದರ್ಶನ್​​ಗೆ ಜಾಮೀನು ಸಿಗುವ ಸಾಧ್ಯತೆ

author-image
Ganesh Nachikethu
Updated On
ಬಳ್ಳಾರಿ ಜೈಲಲ್ಲಿ ಗಡ್ಡ ಬಿಟ್ಟ ದಾಸ.. ಪತ್ನಿ ಭೇಟಿ ಬೆನ್ನಲ್ಲೇ ಸೊರಗಿದ ದರ್ಶನ್ ಮುಖದಲ್ಲಿ ಕಳೆ!
Advertisment
  • ನಾಳೆ ಕೊಲೆ ಆರೋಪಿ ನಟ ದರ್ಶನ್​ಗೆ ಮಹತ್ವದ ದಿನ
  • ಪದೇ ಪದೇ ನ್ಯಾಯಾಂಗ ಬಂಧನ ವಿಸ್ತರಣೆಗೆ ಸುಸ್ತು..!
  • ತಂದೆ ನೋಡಲು ಬಳ್ಳಾರಿ ಜೈಲಿಗೆ ಬಂದ ದರ್ಶನ್​ ಪುತ್ರ

ಬೆಂಗಳೂರು: ಬಳ್ಳಾರಿ ಜೈಲಿನಲ್ಲಿ 36 ದಿನಗಳನ್ನು ಕಳೆದಿರೋ ನಟ ದರ್ಶನ್ ಜಾಮೀನು ಅರ್ಜಿ ನಾಳೆ ವಿಚಾರಣೆಗೆ ಬರಲಿದ್ದು, ಜಾಮೀನು ಸಿಗುವ ವಿಶ್ವಾಸದಲ್ಲಿದ್ದಾರೆ. ಈ ಮಧ್ಯೆ ಇವತ್ತು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಬಳ್ಳಾರಿ ಜೈಲಿಗೆ ಭೇಟಿ ನೀಡಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ಅಪ್ಪ-ಮಗನ ನಡುವೆ ಮಿಸ್ ಯೂ ಸಂಭಾಷಣೆ ನಡೆದಿದೆ.

ಪದೇ ಪದೇ ನ್ಯಾಯಾಂಗ ಬಂಧನ ವಿಸ್ತರಣೆಗೆ ಕಾಟೇರ ಸುಸ್ತು

ನೂರು ದಿನಗಳ ಸೆರೆವಾಸ.. ಇದು ನಟ ದರ್ಶನ್ ದಿನಚರಿ.. ಬಳ್ಳಾರಿ ಕಾರಾಗೃಹದಲ್ಲಿ 36 ದಿನಗಳನ್ನ ಕಳೆದಿರೋ ದಾಸನಿಗೆ ಒಂದೊಂದು ದಿನವೂ ಯುಗವಾಗಿಬಿಟ್ಟಿದೆ. ಸೆಪ್ಟೆಂಬರ್ 30ರಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿತ್ತು. ಸತತ 8 ಬಾರಿ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿದ್ದು ನಾಳೆ ಬೇಲ್ ಸಿಗುತ್ತೋ, ಇಲ್ವೋ ಅಂತ ದರ್ಶನ್ ಚಡಪಡಿಸ್ತಿದ್ದಾರೆ ಎನ್ನಲಾಗಿದೆ. ಇವತ್ತಿನಿಂದ ನವರಾತ್ರಿ ಕೂಡ ಆರಂಭವಾಗಿದ್ದು ಜೈಲಿನಲ್ಲೇ ಹಬ್ಬ ಆಚರಿಸುವಂತಾಗಿದೆ. ಬೆನ್ನುನೋವು, ಕೈ ಮೂಳೆಯ ನೋವಿನಿಂದ ಬಳಲುತ್ತಿದ್ದು ಜೈಲಿನ ಪೆಸಿಲಿಟಿಗಳು ಸಿಗದೇ ಕಾಟೇರ ಹೈರಾಣಾಗಿದ್ದಾರೆ.

ವಿನೇಶ್​ಗೆ ಐ ಮಿಸ್ ಯೂ ಮಗನೇ ಎಂದ ನಟ ದರ್ಶನ್

ನಾಳೆ ಜಾಮೀನು ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಇವತ್ತು ಬಳ್ಳಾರಿ ಜೈಲಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಇದೇ ಮೊದಲ ಬಾರಿಗೆ ಪುತ್ರ ವಿನೇಶ್ ಭೇಟಿ ನೀಡಿದ್ದಾರೆ. ವಿಜಯಲಕ್ಷ್ಮಿ 7ನೇ ಬಾರಿಗೆ ಬಳ್ಳಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ನಾಳೆ ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಪತ್ನಿ, ಪುತ್ರನ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮಿ, ನಟ ದರ್ಶನ್​ಗೆ ಡ್ರೈಪ್ರೂಟ್ಸ್, ಬೇಕರಿ ತಿನಿಸು, ಬಟ್ಟೆ ನೀಡಿದ್ದಾರೆ. ಅಪ್ಪನನ್ನು ನೋಡ್ತಿದ್ದಂತೆ ಪುತ್ರ ವಿನೇಶ್ ಐ ಮಿಸ್​ ಯೂ ಪಪ್ಪಾ ಎಂದಿದ್ದಾನೆ. ದರ್ಶನ್ ಕೂಡ ಮಿಸ್ ಯೂ ಮಗನೇ ಎಂದಿದ್ದು ಆದಷ್ಟು ಬೇಗ ಜೈಲಿನಿಂದ ಹೊರಬರ್ತೀನಿ, ನಿನ್ನ ಜೊತೆ ಸಮಯ ಕಳೀತೀನಿ ಎಂದಿದ್ದಾರಂತೆ. ಭೇಟಿ ಬಳಿಕ ಅಪ್ಪನ‌ ಜೊತೆ ಮಾತಾಡಿದ್ದು ಖುಷಿ ಆಯ್ತಾ ಅಂತ ವಿಜಯಲಕ್ಷ್ಮಿ ಕೇಳಿದ್ದಾರೆ, ಈ ವೇಳೆ ವಿನೀಶ್​ ಹೌದು ಅಂತ ತಲೆ ಅಲ್ಲಾಡಿಸಿದ್ದಾನೆ ಎನ್ನಲಾಗಿದೆ.

ಒಟ್ಟಾರೆ, ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಒಬ್ಬಂಟಿಯಾಗಿ 36 ದಿನಗಳನ್ನು ಕಳೆದಿದ್ದು ಇವತ್ತು ಪತ್ನಿ, ಮಗನನ್ನು ನೋಡಿದ ಬಳಿಕ ಮನಸ್ಸು ಹಗುರವಾಗಿದೆ. ನಾಳೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ನವರಾತ್ರಿ ರಿಲೀಫ್ ಸಿಗುತ್ತಾ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ:50 ಕೋಟಿ ಸುಲಿಗೆ ಆರೋಪ ಕೇಸ್​​; ಕೇಂದ್ರ ಸಚಿವ ಹೆಚ್​​.ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment