ಮತ್ತೆ ಕೋರ್ಟ್​ ಮೆಟ್ಟಿಲೇರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈಗ ಏನಾಯ್ತು..?

author-image
Ganesh
Updated On
‘ದರ್ಶನ್​ ವಿರುದ್ಧ ಮತ್ತೆ ಪೊಲೀಸರ ಸಂಚು’- ಡಿಗ್ಯಾಂಗ್‌ ಕೋರ್ಟ್‌ಗೆ ಹಾಜರಾದ ಬಳಿಕ ವಕೀಲರ ಆರೋಪ
Advertisment
  • ಡೆವಿಲ್ ಚಿತ್ರಕ್ಕಾಗಿ ದರ್ಶನ್ ಅಂಡ್ ಟೀಂ ಮೆಗಾ ಪ್ಲಾನ್
  • ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ಗೆ ಜಾಮೀನು
  • 25 ದಿನಗಳ ಕಾಲ ವಿದೇಶಕ್ಕೆ ಹಾರಲು ಕೋರ್ಟ್​ಗೆ ಅರ್ಜಿ

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದಾರೆ.​ ವಿದೇಶಕ್ಕೆ ಹಾರಲು ನಟ ಸಿದ್ಧತೆ ಮಾಡಿಕೊಂಡಿದ್ದು, ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಅವರ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರೀಕರಣ ಸಂಬಂಧ ವಿದೇಶಕ್ಕೆ ತೆರಳಲು ನಿರ್ಧರಿಸಲಾಗಿದೆ. ದುಬೈ ಮತ್ತು ಯೂರೋಪ್​​ಗೆ ತೆರಳಲು ಅವಕಾಶ ಕೋರಿ ಸಿಆರ್​ಪಿಸಿ ಸೆಕ್ಷನ್ 439(1) (b) ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಒಟ್ಟು 25 ದಿನಗಳ ಕಾಲ ವಿದೇಶಕ್ಕೆ ತೆರಳಲು ಅನುಮತಿ ಕೋರಲಾಗಿದೆ. ಜೂನ್ 1 ರಿಂದ 25 ರವರೆಗೆ ವಿದೇಶಕ್ಕೆ ತೆರಳಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಅಬ್ದುಲ್ ರಹಿಮಾನ್​ನ ಬರ್ಬರ ಹತ್ಯೆ.. ಸದ್ಯ ಹೇಗಿದೆ ಮಂಗಳೂರು ಪರಿಸ್ಥಿತಿ..?

ಈ ಹಿಂದೆ ಹೈಕೋರ್ಟ್ ಜಾಮೀನು ನೀಡುವಾಗ ಬೆಂಗಳೂರು ಬಿಡುವಂತಿಲ್ಲ ಎಂಬ ಷರತ್ತು ವಿಧಿಸಿತ್ತು. ಕೊನೆಗೆ ದೇಶಾದ್ಯಂತ ಪ್ರಯಾಣಕ್ಕೆ ಅನುಮತಿ ನೀಡಿತ್ತು. ಸಿನಿಮಾ ಚಿತ್ರೀಕರಣ ಕಾರಣ ನೀಡಿ ಷರತ್ತುಗಳನ್ನು ಸಡಿಸಿಲಿಕೊಂಡಿದ್ದರು. ಇದೀಗ ಅದೇ ಚಿತ್ರೀಕರಣ ಕಾರಣ ವಿದೇಶಕ್ಕೆ ತೆರಳಲು ಅನುಮತಿ ಕೇಳಿದ್ದಾರೆ.

ಇದನ್ನೂ ಓದಿ: ಅಬ್ದುಲ್ ರಹೀಮಾನ್​ ಪ್ರಕರಣಕ್ಕೆ ಟ್ವಿಸ್ಟ್ -ಗಾಯಾಳು ಶಫಿಯಿಂದ ಮಹತ್ವದ ಮಾಹಿತಿ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment