Advertisment

‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್​​

author-image
Ganesh Nachikethu
Updated On
ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ದರ್ಶನ್, ಪವಿತ್ರ ಗೌಡ ಸೇರಿ ಮತ್ತೆ ಮೂವರ ಅರೆಸ್ಟ್; ಮುಂದೇನು?
Advertisment
  • ಪವಿತ್ರಾ ಗೌಡ ಜತೆ 10 ವರ್ಷಗಳಿಂದ ಲಿವ್‌-ಇನ್‌ ರಿಲೇಷನ್‌ಶಿಪ್​​​​
  • ಕೋರ್ಟ್‌ಗೆ ಸಲ್ಲಿಕೆಯಾದ ಚಾರ್ಜ್​ಶೀಟ್​​ನಲ್ಲಿ ಈ ಬಗ್ಗೆ ಬಹಿರಂಗ
  • ಪವಿತ್ರಾಗೆ ಸಾಲ ಮಾಡಿ ಮನೆ ಕೊಡಿಸಿದ್ದೇನೆ ಎಂದ ನಟ ದರ್ಶನ್​​

ಬೆಂಗಳೂರು: ಪವಿತ್ರಾ ಗೌಡ ಜತೆ 10 ವರ್ಷಗಳಿಂದ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ನಟ ದರ್ಶನ್​ ಒಪ್ಪಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೇಸ್​ ಸಂಬಂಧ ಕೋರ್ಟ್‌ಗೆ ಸಲ್ಲಿಕೆಯಾದ ಚಾರ್ಜ್​ಶೀಟ್​ ಪ್ರತಿಯಲ್ಲಿ ದರ್ಶನ್‌ ಪವಿತ್ರಾ ಗೌಡ ಜೊತೆಗಿನ ಸಂಬಂಧದ ಹೀಗೆ ಹೇಳಿಕೆ ನೀಡಿದ್ದಾರೆ.

Advertisment

ನಟ ದರ್ಶನ್​ ಹೇಳಿದ್ದೇನು?

ಪವಿತ್ರಾಗೌಡ ಜೊತೆ 10 ವರ್ಷಗಳಿಂದ ನಾನು ಲೀವ್-ಇನ್ ರಿಲೇಷನ್‌ಷಿಪ್‌ನಲ್ಲಿ ಇದ್ದೇನೆ. ಆರ್​​.ಆರ್​ ನಗರದಲ್ಲಿ ನನ್ನ ಮನೆಯಿಂದ ಒಂದೂವರೆ ಕಿಲೋ ಮೀಟರ್​ ದೂರದಲ್ಲಿ ಪವಿತ್ರಾ ಗೌಡ ನೆಲೆಸಿದ್ದಾರೆ ಎಂದರು.

1.75 ಕೋಟಿ ಕೊಟ್ಟು ಮನೆ ಖರೀದಿ

ನನಗೆ ಸೌಂದರ್ಯ ಜಗದೀಶ್ ಸುಮಾರು 10 ವರ್ಷಗಳಿಂದ ಪರಿಚಯ. 2018 ರಲ್ಲಿ ನಾನು ಸೌಂದರ್ಯ ಜಗದೀಶ್‌ ನಡೆಯಿಂದ 1.75 ಕೋಟಿ ರೂ. ಸಾಲ ಪಡೆದು ಪವಿತ್ರಾ ಗೌಡಗೆ ಮನೆ ಖರೀದಿ ಮಾಡಿಕೊಟ್ಟೆ. ಈ ಹಣವನ್ನು ನಾನು ಪವಿತ್ರಾ ಬ್ಯಾಂಕ್‌ ಖಾತೆಗೆ ನೇರ ವರ್ಗಾವಣೆ ಮಾಡಿದ್ದೆ. 2 ವರ್ಷದ ಹಿಂದೆಯೇ ಈ ಸಾಲವನ್ನು ತೀರಿಸಿದ್ದೇನೆ ಎಂದರು ದರ್ಶನ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment