newsfirstkannada.com

‘ನನ್ನ ಮೇಲೆ ಅಂಬರೀಶ್​ ಅಪ್ಪಾಜಿ ಕೈ ಮಾಡಿದಾಗ..’- ಅಂದಿನ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ದರ್ಶನ್​​!

Share :

Published February 18, 2024 at 7:00pm

  ಸುಮಲತಾ ಅಂಬರೀಶ್​ ಅವರನ್ನು ಹಾಡಿಹೊಗಳಿದ ನಟ ದರ್ಶನ್​​

  ಅಭಿಶೇಕ್​ಗೆ ಬೇಜಾರಾದ್ರೂ ಪರ್ವಾಗಿಲ್ಲ ಹೇಳ್ತೀನಿ ಎಂದ ಕಾಟೇರ

  ಅವತ್ತು ನನ್ನ ಸಹಾಯಕ್ಕೆ ಬಂದಿದ್ದೇ ಸುಮಮ್ಮ ಎಂದು ಬಿಚ್ಚಿಟ್ರು ಸತ್ಯ

ಇದು ಯಾವುದೇ ರಾಜಕೀಯ ಕಾರ್ಯಕ್ರಮ, ಎಲ್ಲ ಪಕ್ಷದವರು ಇಲ್ಲೇ ಇದಾರೆ ಎಂದು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮಾತಾಡಿದ್ದಾರೆ. ದರ್ಶನ್​​ ಪುಟ್ಟಣ್ಣಯ್ಯ ಅವರು ಇದಾರೆ, ಉದಯಣ್ಣ ಬಂದಿದ್ದಾರೆ. ಸುಮಮ್ಮ ಬಂದಿದ್ದಾರೆ. ಶ್ರೀರಂಗಪಟ್ಟಣದಲ್ಲೇ ಕಾರ್ಯಕ್ರಮ ಮಾಡೋಕೆ ರೀಸನ್​ ಇದೆ ಎಂದರು.

ನಾನು ಸುಮಮ್ಮ ಬಗ್ಗೆ ಮಾತಾಡಲೇಬೇಕು. ನನಗೆ ಜನ್ಮ ಕೊಟ್ಟ ಅಮ್ಮ ಒಂದು ಕಡೆ, ಬುದ್ಧಿ ಕಲಿಸಿದ ತಾಯಿ ಮತ್ತೊಂದು ಕಡೆ. ನನಗೆ ಬುದ್ಧಿ ಕಲಿಸಿದ್ದೇ ಸುಮಮ್ಮ. ಅಂಬರೀಶ್​ ಅಪ್ಪಾಜಿ ಅಭಿಗೆ ಹೊಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ನನಗಂತೂ ಸರಿಯಾಗಿ ಬಿದ್ದಿವೆ ಎಂದರು ದರ್ಶನ್​​.

ಅಪ್ಪಾಜಿ ನನಗೆ ಹೊಡೆಯೋಕೆ ಬಂದಾಗ ಸುಮಮ್ಮ ತಡಿಯೋಕೆ ಬಂದರು. ಅಪ್ಪಾಜಿ ನನ್ನ ಮೈಮೇಲೆ ಕೈ ಮಾಡಿದಾಗಿ ಇವರೇ ನನ್ನ ಬೆನ್ನಿಗೆ ನಿಂತಿದ್ದು. ಇವತ್ತು ಅಪ್ಪಾಜಿ ಸ್ಥಾನದಲ್ಲಿ ಅಮ್ಮ ನಿಂತು ನಂದು ಯಾವುದೇ ತಪ್ಪಿದ್ರೂ ತಿದ್ದುತ್ತಿದ್ದಾರೆ. ಒಳ್ಳೆಯದು ಮಾಡಿದ್ರು ಯಾವತ್ತು ಹೊಗಳಲ್ಲ, ನನಗೆ ಎರಡು ಕೊಂಬು ಬಂದುಬಿಡುತ್ತೆ ಎಂದು. ನನ್ನಮ್ಮನ ಬಗ್ಗೆ ನನಗೆ ಪ್ರೀತಿ ಇದೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನನ್ನ ಮೇಲೆ ಅಂಬರೀಶ್​ ಅಪ್ಪಾಜಿ ಕೈ ಮಾಡಿದಾಗ..’- ಅಂದಿನ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ದರ್ಶನ್​​!

https://newsfirstlive.com/wp-content/uploads/2024/02/Darshan_Ambarish.jpg

Load More