ಬೆಳಗ್ಗೆ 4.30ಕ್ಕೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಡಲಾಗಿದೆ
ಭದ್ರತಾ ದೃಷ್ಟಿಯಿಂದ ಬೆಳ್ಳಂಬೆಳಗ್ಗೆ ದರ್ಶನ್ ಶಿಫ್ಟ್ ಮಾಡಲಾಗ್ತಿದೆ
ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ
ಬೆಂಗಳೂರು: ಪರಪ್ಪನ ಅಗ್ರಹಾರದಿಂದ ನಟ ದರ್ಶನ್ನನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ದರ್ಶನ್ರನ್ನ ಕರೆದೊಯ್ಯುತ್ತಿರುವ ಮಾರ್ಗದಲ್ಲಿ ಪೊಲೀಸರು ಬದಲಾವಣೆ ಮಾಡಿದ್ದಾರೆ.
ಆಂಧ್ರದ ಅನಂತಪುರ ಮಾರ್ಗವಾಗಿ ಹೋಗ್ತಿರುವ ಮಾಹಿತಿ ಇದೆ. ತುಮಕೂರು, ಚಿತ್ರದುರ್ಗದ ಬದಲು ಅನಂತರಪುರ ರೂಟ್ ಮೂಲಕ ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ, ಅನಂತರಪುರ ಮಾರ್ಗವಾಗಿ ಬಳ್ಳಾರಿ ಜೈಲಿಗೆ ದರ್ಶನ್ ಹೋಗಲಿದ್ದಾರೆ. ಬೆಳಗಿನ ಜಾವ 4:30ಕ್ಕೆ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಡಲಾಗಿದೆ. ಬೆಳಗ್ಗೆ 6:40ಕ್ಕೆ ಬಾಗೇಪಲ್ಲಿ ಟೋಲ್ ಬಳಿ ದರ್ಶನ್ ಇದ್ದ ವಾಹನ ರೀಚ್ ಆಗಿದೆ. ಒಟ್ಟು ಐದು ಪೊಲೀಸ್ ವಾಹನಗಳು ಭದ್ರತೆ ಒದಗಿಸಿವೆ. ಬಾಗೇಪಲ್ಲಿ ತಾಲ್ಲೂಕಿನ ಅನಂತಪುರ ಗುಂತಕಲ್ ಮಂತ್ರಾಲಯ ಮೂಲಕ ಬಳ್ಳಾರಿ ಪ್ರವೇಶ ಮಾಡಲಿದ್ದಾರೆ.
ಇದನ್ನೂ ಓದಿ:Breaking: ಪರಪ್ಪನ ಅಗ್ರಹಾರ ಟು ಬಳ್ಳಾರಿ ಜೈಲು; ದರ್ಶನ್ ಕರೆದೊಯ್ದ ಪೊಲೀಸರು..!
ದರ್ಶನ್ ಅವರನ್ನು ಕರೆದುಕೊಂಡು ಹೋಗುವಾಗ ಅಭಿಮಾನಿಗಳು ಅಡ್ಡಿಪಡಿಸುವ ಆತಂಕ ಇದೆ. ಭದ್ರತಾ ದೃಷ್ಟಿಯಿಂದ ಮುಂಜಾಗೃತ ಕ್ರಮವಾಗಿ ಪೊಲೀಸರು ಮಾರ್ಗದಲ್ಲಿ ಬದಲಾವಣೆ ಮಾಡಿದ್ದಾರೆ. ನಿಯಮದ ಪ್ರಕಾರ ರಾತ್ರಿ ವೇಳೆ ವಿಚಾರಣಾದೀನ ಕೈದಿಗಳನ್ನು ಸ್ಥಳಾಂತರ ಮಾಡುವಂತಿಲ್ಲ.. ಆದ್ರೆ ಭದ್ರತಾ ದೃಷ್ಟಿಯಿಂದ ದರ್ಶನ್ರನ್ನು ರಾತ್ರೋ ರಾತ್ರಿ ಬಳ್ಳಾರಿಗೆ ಜೈಲಿನತ್ತ ಕರೆದೊಯ್ಯಲಾಗ್ತಿದೆ. ಜೈಲು ಸಿಬ್ಬಂದಿ ಬಂದೋಬಸ್ತ್ನಲ್ಲಿ ಮುಂಜಾನೆ 4.30ಕ್ಕೆ ಕರೆದೊಯ್ದಿದ್ದಾರೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಚೇರ್ ಮೇಲೆ ಕುಳಿತು ಸಿಗರೇಟ್ ಸೇದುತ್ತಾ, ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಥರದ ನಟೋರಿಯಸ್ ಪಾತಕಿಗಳ ಜೊತೆಗೆ ಬಿಂದಾಸ್ ಆಗಿ ಮಾತುಕತೆ ಮಾಡುತ್ತಿದ್ದರು. ಇದು ಅವರು ಜೈಲಿನಲ್ಲಿ ಎಷ್ಟು ಆರಾಮಾಗಿ ಇದ್ದಾರೆ, ಎಷ್ಟೆಲ್ಲಾ ಸೌಲಭ್ಯ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ ಆಗಿದ್ದವು. ಇದಕ್ಕೆ ಬ್ರೇಕ್ ಹಾಕೋದಕ್ಕೆ ಅಂತಾನೆ ಬಂಧಿಖಾನೆ ಅಧಿಕಾರಿಗಳು ದರ್ಶನ್ರನ್ನ ಬಳ್ಳಾರಿಗೆ ಶಿಫ್ಟ್ ಮಾಡಲಾಗ್ತಿದೆ.
ಇದನ್ನೂ ಓದಿ:ದರ್ಶನ್ಗೆ ಬೆಳ್ಳಂಬೆಳಗ್ಗೆ ಬಳ್ಳಾರಿ ಜೈಲಿನ ದರ್ಶನ; ಜೈಲು ಸವಾರಿ ರೂಟ್ ಮ್ಯಾಪ್ ಹೇಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ