/newsfirstlive-kannada/media/post_attachments/wp-content/uploads/2024/06/darshan-3.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸ್ತಿದ್ದಾರೆ. ತನಿಖೆ ವೇಳೆ ಕೆಲವು ಆರೋಪಿಗಳು ಸ್ಫೋಟಕ ಮಾಹಿತಿಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಜೂನ್ 7 ರಂದು ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿದ ಬಳಿಕ ಬೆಂಗಳೂರಿನ ಆರ್​ಆರ್​ ನಗರದಲ್ಲಿರುವ ಶೆಡ್ ಒಂದರಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಕ್ರೂರವಾಗಿ ಸಾಯಿಸಲಾಗಿದೆ ಎಂಬ ಆರೋಪ ಇದೆ. ಮಾರಣಾಂತಿಕ ಹಲ್ಲೆ ಏಟಿಗೆ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಬಳಿಕ ಆರೋಪಿಗಳ ಮಧ್ಯೆ ಏನೆಲ್ಲ ಪ್ಲಾನ್ ನಡೀತು ಅನ್ನೋ ವಿವರ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.
ಮಾಹಿತಿಗಳ ಪ್ರಕಾರ.. ಕೊಲೆ ಮಾಡಿದ ಬಳಿಕ ದರ್ಶನ್ ಅಂಡ್ ಗ್ಯಾಂಗ್ ತಗ್ಲಾಕೊಂಡಿದ್ದೇ ರೋಚಕವಾಗಿದೆ. ಶವ ವಿಲೇವಾರಿ ಮಾಡಲು ಬಂದ ಮೂವರು ದರ್ಶನ್ ಜೊತೆಗೆ 30 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 30 ಲಕ್ಷ ರೂಪಾಯಿ ಹಣ ಪಡೆದ ಬಳಿಕ ಆರ್.ಆರ್.ನಗರದ ಪಟ್ಟಣಗೆರೆ ಶೆಡ್​ನಿಂದ ಮೃತದೇಹವನ್ನು ಸುಮ್ಮನಹಳ್ಳಿ ಬಳಿಯ ಸತ್ವಾ ಅಪಾರ್ಟ್ಮೆಂಟ್ ಮುಂಭಾಗದ ರಾಜಕಾಲುವೆಗೆ ಎಸೆದಿದ್ದರು.
ಯಾಕೆ ರಾಜಕಾಲುವೆಗೆ ಶವ ಬಿಸಾಕಿದ್ದರು?
ಪಟ್ಟಣಗೆರೆಯ ಶೆಡ್​​ನಲ್ಲಿ ಕೊಲೆ ಮಾಡಿದ ಬಳಿಕ ಸುಮ್ಮನಹಳ್ಳಿಗೆ ಯಾಕೆ ಶವ ತಂದರು? ಬೇರೆ ಎಲ್ಲಾದರೂ ಮಣ್ಣು ಮಾಡಬಹುದಿತ್ತಲ್ಲ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದಾರೆ ಎನ್ನಲಾಗಿರುವ ಮಾಹಿತಿಗಳ ಪ್ರಕಾರ.. ರಾಜಕಾಲುವೆಗೆ ಬಿಸಾಕಿದ್ರೆ ಮೃತದೇಹ ನೀರಿನಲ್ಲಿ ಕೊಚ್ಚಿಹೋಗುತ್ತದೆ ಅನ್ಕೊಂಡಿದ್ದರು.
ಆದರೆ.. ಆರೋಪಿಗಳ ಪ್ಲಾನ್ ಉಲ್ಟಾ ಆಗಿದ್ದೇ ಇಲ್ಲಿ. ನಸುಕಿನ ಜಾವ ಶವವನ್ನ ರಾಜಕಾಲುವೆಗೆ ಬಿಸಾಕಲು ಆರೋಪಿಗಳು ಹೋಗಿದ್ದರು. ಶವವನ್ನು ಮೇಲೆ ಎತ್ತಿ ಬೀಸಾಡುವ ಆತುರದಲ್ಲಿ ಅದು ಸರಿಯಾಗಿ ರಾಜಕಾಲುವೆಗೆ ಬಿದ್ದಿಲ್ಲ. ರಾಜಕಾಲುವೆಯ ದಡದಲ್ಲಿ ರೇಣುಕಾಸ್ವಾಮಿ ಮೃತದೇಹ ಬಿದ್ದಿದೆ. ಕಾಲುವೆ ಒಳಗೆ ಬಿದ್ದಿದೆಯೆಂದು ಭಾವಿಸಿದ್ದ ಆರೋಪಿಗಳು ಅಲ್ಲಿಂದ ಪರಾರಿ ಆಗಿದ್ದರು. ಕೊಳಚೆ ನೀರಿನಿಂದ ತುಂಬಿರುತ್ತಿದ್ದ ಸುಮ್ಮನಹಳ್ಳಿ ರಾಜಕಾಲುವೆ, ಒಂದೊಮ್ಮೆ ಮೃತದೇಹ ಕಾಲುವೆ ಒಳಗೆ ಬಿದ್ದಿದ್ರೆ ನೀರಿನಲ್ಲಿ ಹರಿದು ಹೋಗುತ್ತಿತ್ತು. ದೇಹದ ಮೇಲಿನ ಗುರುತುಗಳು ಸಿಗುತ್ತಿರಲಿಲ್ಲ. ಆದರೆ ಮೃತದೇಹ ರಾಜಕಾಲುವೆಯ ದಡಕ್ಕೆ ಬಿದ್ದಿದ್ದರಿಂದ ಪ್ಲಾನ್ ಉಲ್ಟಾ ಹೊಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ