/newsfirstlive-kannada/media/post_attachments/wp-content/uploads/2025/03/Darshan-kerala-Temple-3.jpg)
ಮಡಾಯಿ ಶ್ರೀ ತಿರುವರ್ಕ್ಕಾಟ್ಟು ಕಾವು ಭಗವತಿ ದೇವಸ್ಥಾನ. ಕೇರಳದ ಕಣ್ಣೂರಿನಲ್ಲಿರುವ ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಮಾಡಿದ್ರೆ ಬಹಳಷ್ಟು ಲಾಭವಿದೆ ಎಂಬ ನಂಬಿಕೆ ಇದೆ. ಹಲವು ರಾಜಕಾರಣಿಗಳು ಕೇರಳದ ಈ ಶಕ್ತಿ ದೇವತೆಯ ಮೊರೆ ಹೋಗಿದ್ದಾರೆ.
ಇಂದು ಕೇರಳದ ಈ ಪ್ರಸಿದ್ಧ ದೇವಸ್ಥಾನದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡಿದ್ದಾರೆ. ಶತ್ರು ಸಂಹಾರ ಪೂಜೆಗೆ ಪ್ರಸಿದ್ಧವಾದ ಈ ದೇವಸ್ಥಾನಲ್ಲಿ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀಶ್, ಆಪ್ತ ಧನ್ವೀರ್ ಜೊತೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇಂದು ಶನಿವಾರ, ಅಷ್ಟಮಿ ತಿಥಿ!
ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಪೂಜೆ ಮಾಡಲು ನಕ್ಷತ್ರ, ಗಳಿಗೆ, ಸೂಕ್ತ ಸಮಯ ನೋಡಿಕೊಂಡು ಪೂಜೆ ಮಾಡಲಾಗುತ್ತೆ. ಇವತ್ತು ಶುಭವಾದ ಸಮಯವಾಗಿದ್ದು, ಪ್ರಾರ್ಥನೆ ಮಾಡಿದ್ರೆ ಫಲ ಸಿಗುತ್ತೆ ಅನ್ನೋ ನಂಬಿಕೆ ಇದೆ.
ಹಿಂದೂ ಪಂಚಾಂಗದ ಪ್ರಕಾರ ಅಷ್ಟಮಿ ತಿಥಿಯಾದ ಇಂದು ಶತ್ರು ಸಂಹಾರ ಪೂಜೆ ಸಲ್ಲಿಸಿದ್ರೆ ವಿಶೇಷ ಫಲ, ಪರಿಹಾರ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇವತ್ತು ಶನಿವಾರ ಮತ್ತು ಅಷ್ಟಮಿ ತಿಥಿ ಇರುವ ಹಿನ್ನೆಲೆಯಲ್ಲಿ ಜ್ಯೋತಿಷಿಗಳ ಸಲಹೆ ಮೇರೆಗೆ ಶತ್ರು ಸಂಹಾರ ಪೂಜೆ ನೆರವೇರಿದೆ ಎನ್ನಲಾಗಿದೆ.
ಶತ್ರು ಸಂಹಾರ ಪೂಜೆಯಲ್ಲಿ ಕುಟುಂಬಸ್ಥರ ಜೊತೆ ಹೋದ್ರೆ ಒಳ್ಳೆಯ ಪೂಜಾ ಫಲ ಸಿಗುತ್ತೆ. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಭವಿಷ್ಯದಲ್ಲಿ ಹೆಚ್ಚಿನ ಲಾಭ ಸಿಗುವ ನಂಬಿಕೆಯೂ ಇದೆ. ಈ ಪೂಜೆಯ ಬಳಿಕ ಪ್ರಸಾದವನ್ನು ಸ್ವೀಕಾರ ಮಾಡಿದ್ರೆ ಶತ್ರು ಸಂಹಾರ ಆಗುತ್ತೆ ಎನ್ನಲಾಗಿದೆ.
ಇದನ್ನೂ ಓದಿ: ಬಡ ಮನುಷ್ಯ ಅಣ್ಣಾಮಲೈ.. ತಮಿಳುನಾಡಿನಲ್ಲಿ ‘ಕಿಚ್ಚು’ ಹಚ್ಚಿದ ಡಿ.ಕೆ ಶಿವಕುಮಾರ್; ಹೇಳಿದ್ದೇನು?
ಏನಿದು ಶತ್ರು ಸಂಹಾರ ಪೂಜೆ?
ಕೇರಳದ ಶತ್ರು ಸಂಹಾರ ಪೂಜೆಯ ಬಗ್ಗೆ ನ್ಯೂಸ್ ಫಸ್ಟ್ ಚಾನೆಲ್‌ಗೆ ಪ್ರತ್ಯಂಗೀರಾ ದೇಗುಲದ ಅರ್ಚಕ ಶರತ್ ಗೌರೀಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ದೇವಸ್ಥಾನದ ವಿಶೇಷ ಏನಂದ್ರೆ ಆಗಿನ ಕಾಲದ ರಾಜ, ಮಹಾರಾಜರು ಅವರ ರಕ್ಷಣೆಗೋಸ್ಕರ ತಾಂತ್ರಿಕ ಹಾಗೂ ಮಾಂತ್ರಿಕ ಶಕ್ತಿಗಾಗಿ ಆಚಾರ್ಯರ ಮೊರೆ ಹೋಗುತ್ತಿದ್ದರು.
ಇಲ್ಲಿ ದೇವಿ ಕಾಳಿಯನ್ನು ಆರಾಧನೆ ಮಾಡುವುದೇ ವಿಶೇಷ. ವಾಮಮಾರ್ಗದಲ್ಲಿ ಪೂಜೆ ಮಾಡುವ ಸಂಪ್ರದಾಯ ಇಲ್ಲಿ ಇದೆ. ಮದ್ಯವನ್ನು ಇಟ್ಟು ನೈವೇದ್ಯ ಕೂಡ ಮಾಡುತ್ತಾರೆ. ಇಲ್ಲಿ ನಡೆಯುವ ಪೂಜೆಗಳು ಬಹಳಷ್ಟು ರಹಸ್ಯವಾಗಿರುತ್ತದೆ. ಇಲ್ಲಿ ರಹಸ್ಯವಾಗಿ ಪೂಜೆ ಮಾಡಿದ್ರೆ ಶತ್ರು ಸಂಹಾರ ಆಗಿದೆ ಎಂದು ಹಲವು ಭಕ್ತರು ನಂಬಿದ್ದಾರೆ ಎಂದು ಅರ್ಚಕ ಶರತ್ ಗೌರೀಶ್ ಅವರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ