/newsfirstlive-kannada/media/post_attachments/wp-content/uploads/2025/03/Dhanveer_Darshan.jpg)
ಕನ್ನಡದ ಬಹುನಿರೀಕ್ಷಿತ 2025ರ ಸಿನಿಮಾ ವಾಮನ. ನಟ ಧನ್ವೀರ್ ಅಭಿನಯದ ಈ ಸಿನಿಮಾ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಲೀಸ್ ಮಾಡಿದ್ರು. ಈ ಮೂಲಕ ಆಪ್ತ ಗೆಳೆಯನಿಗೆ ನಟ ದರ್ಶನ್ ಸಾಥ್ ಕೊಟ್ಟರು.
ಸಿನಿಮಾ ಬಗ್ಗೆ ಏನಂದ್ರು ದರ್ಶನ್?
ಇನ್ನು, ನಟ ಧನ್ವೀರ್ ಸಿನಿಮಾ ಬಗ್ಗೆ ಮಾತಾಡಿದ ದರ್ಶನ್ ಅವರು ಶುಭ ಹಾರೈಸಿದ್ದಾರೆ. ಕನ್ನಡ ಸಿನಿಮಾಗಳ ಹರಸಿ. ನಾವು ಯಾವಾಗಲೂ ಕನ್ನಡ ಸಿನಿಮಾಗಳೇ ಮಾಡೋದು. ಈ ಸಿನಿಮಾ ದೊಡ್ಡ ಹಿಟ್ ಮಾಡಿ ಎಂದರು.
ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ… pic.twitter.com/7Tr0Kd429x
— Darshan Thoogudeepa (@dasadarshan)
ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ ೧೦ ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೈಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ… pic.twitter.com/7Tr0Kd429x
— Darshan Thoogudeepa (@dasadarshan) March 27, 2025
">March 27, 2025
ಬಜಾರ್, ಬೈ ಟು ಲವ್ ಮತ್ತು ಕೈವ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿದವರು ಧನ್ವೀರ್. ಇವರು ಚಾಲೆಂಜಿಂಗ್ ಸ್ಟಾರ್ನ ಬೆಸ್ಟ್ ಫ್ರೆಂಡ್ ಕೂಡ ಹೌದು. ದರ್ಶನ್ ಕಷ್ಟದಲ್ಲಿದ್ದಾಗ ಕೈ ಹಿಡಿದವರು ಧನ್ವೀರ್. ಟೀಸರ್ ಹಾಗೂ ಹಾಡುಗಳಿಂದ ಗಮನ ಸೆಳೆದಿದ್ದ ವಾಮನ ಟೀಮ್ಗೆ ದರ್ಶನ್ ಸಾಥ್ ನೀಡಿದ್ದು, ಸಿನಿಮಾ ಏಪ್ರಿಲ್ 10ಕ್ಕೆ ರಿಲೀಸ್ ಆಗಲಿದೆ.
ರೀಷ್ಮಾ ನಾಣಯ್ಯ ಸಿನಿಮಾದ ನಾಯಕಿ. ವಾಮನ ಚಿತ್ರಕ್ಕೆ ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿದ್ದು, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಜವಾಬ್ದಾರಿ ಕೂಡ ಇವರದ್ದೇ ಆಗಿದೆ. ಚೇತನ್ ಗೌಡ ನಿರ್ಮಾಣದ ಈ ಸಿನಿಮಾಗೆ ಅಜನೀಶ್ ಬಿ. ಲೋಕನಾಥ್ ಸಂಗೀತ ಇದೆ.
ಇದನ್ನೂ ಓದಿ:ನಾಳೆ ಚೆನ್ನೈ ವಿರುದ್ಧ ರೋಚಕ ಪಂದ್ಯ; ಬಲಿಷ್ಠ ಆರ್ಸಿಬಿ ತಂಡ ಕಣಕ್ಕೆ; ಯಾರಿಗೆ ಚಾನ್ಸ್?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ