Advertisment

ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..

author-image
Bheemappa
Updated On
ತೊಟ್ಟಿಲಲ್ಲಿ ಹಾಕಿದ್ದ ಕೈ ಮಣ್ಣಲ್ಲಿಯೂ ಹಾಕ್ತಿದೆ ಎಂದ ಹೆತ್ತ ತಾಯಿ.. ಕರುಳು ಹಿಂಡುವ ಕ್ಷಣಗಳ ಕಂಡು ಕಣ್ಣೀರಿಟ್ಟ ಜನ..
Advertisment
  • ಮೃತ ರೇಣುಕಾಸ್ವಾಮಿ ಅಂತ್ಯಸಂಸ್ಕಾರ ಚಿತ್ರದುರ್ಗದಲ್ಲಿ ಮಾಡಲಾಗಿದೆ
  • ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ
  • ನ್ಯಾಯಕ್ಕಾಗಿ ರೇಣುಕಾಸ್ವಾಮಿ ಪತ್ನಿಯ ಆಕ್ರಂದನ ಮುಗಿಲು ಮುಟ್ಟಿತ್ತು

ಕೋಟ್ಯಂತರ ಅಭಿಮಾನಿಗಳ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ. ಪ್ರಕರಣದಲ್ಲಿ ನಟ ದರ್ಶನ್ ಸೇರಿ 13 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ. ಇವರಿಂದ ಕೊಲೆಯಾದ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿದೆ. ಆದ್ರೆ ಮೃತ ರೇಣುಕಾಸ್ವಾಮಿ ಕುಟುಂಬ ಕಣ್ಣೀರಲ್ಲಿ ಕೈತೊಳೆಯುತ್ತಿದೆ.

Advertisment

ಕಣ್ಣೀರಲ್ಲಿ ಮುಳುಗಿದ ಮೃತ ರೇಣುಕಾ ಸ್ವಾಮಿ ಪತ್ನಿ ಅಂಡ್ ಕುಟುಂಬ

ಮಣ್ಣಲ್ಲಿ ಮಣ್ಣಾಗ್ತಿರೋ ಮಗನನ್ನ ನೋಡ್ತಾ ನೊಡ್ತಾ ತಾಯಿ ಅಯ್ಯ ನನ್ನ ಕಂದ ಎಂದು ರೋದಿಸಿದ್ದಾರೆ. ನಾನೇ ನನ್ನ ಕೈಯಾರೆ ತೊಟ್ಟಿಲಲ್ಲಿ ಹಾಕಿದ ನಿನ್ನನ್ನ ಈಗ ಮಣ್ಣಲ್ಲಿ ಹಾಕ್ತಾ ಇದ್ದೀನಲ್ಲ ಎಂದು ಎದೆ ಬಡಿದುಕೊಂಡರು. ಇದಕ್ಕೇನಾ ಇಷ್ಟು ವರ್ಷ ಸಾಕಿ ಸಲಹಿ ಅನ್ನೋ ತಾಯಿಯ ಗೋಳು ಎಂಥವರಿಗೂ ಹೃದಯ ಕರಗಿ ಕಣ್ಣಲ್ಲಿ ನೀರು ತರಿಸುತ್ತದೆ. ರಾಜನಂತೆ ಇರಬೇಕು ಅಂತಾ ತನ್ನ ಮಗನಿಗಾಗಿ ಕನಸು ಕಂಡಿದ್ದ ತಂದೆ, ಎರಡೂ ಕೈ ಜೋಡಿಸಿ ನಮಗೆ ಯಾರೋ ದಿಕ್ಕು ಅಂತ ದಶದಿಕ್ಕಿನತ್ತ ನಮಿಸುತ್ತಾ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ:ಈ ಜಿಲ್ಲೆಗಳಲ್ಲಿ ಭಾರೀ ಮಳೆ.. ಮಲಗಿದ್ದ ವೃದ್ಧನ ಮೇಲೆ ಕುಸಿದ ಮೇಲ್ಛಾವಣಿ.. ಇಂದು ಕೂಡ ವರುಣಾರ್ಭಟ ಫಿಕ್ಸ್..!

publive-image

ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಅಂತ್ಯಸಂಸ್ಕಾರದ ವೇಳೆ ನನ್ನ ಮಗನನ್ನ ಸಾಯಿಸಿದಂತೆ ಅವನನ್ನ ಸಾಯಿಸಬೇಕು. ಆ ದರ್ಶನ್​ ಸಾಯಬೇಕು ಅಂತಾ ತಾಯಿ ಆಕ್ರೋಶ ಹೊರ ಹಾಕ್ತಿದ್ದಾರೆ. ಇತ್ತ ಮೃತನ ತಂದೆ ಮುಖಕ್ಕೆ ಹೊಡೆದಿದ್ದಾರೆ.. ತಲೆಗೆ ಹೊಡೆದಿದ್ದಾರೆ.. ಎದಗೆ.. ಮರ್ಮಾಂಗಕ್ಕೆ ಹೊಡೆದಿದ್ದಾರೆ.. ಏನಯ್ಯಾ ಇದು ಮಾನವೀಯತೆನಾ..? ಅಂತ ಕಣ್ಣೀರಲ್ಲೇ ಮಾಡಿದ ಪ್ರಶ್ನೆ ಮನಕಲಕುವಂತಿತ್ತು.

Advertisment

‘ಕರ್ಕೊಂಡು ಹೋಗಿ ಕೆಲೆ ಮಾಡಿದ್ದಾರೆ’

ನನ್ನ ಮಗನನ್ನ ಸಾಯಿಸಿದಂಗ ಅವನನ್ನ ಸಾಯಿಸಿಬಿಡಿ, ದರ್ಶನ್​ನನ್ನ ಸಾಯಿಸಿ ಬಿಡಿ. ಅವನು ಸಾಯಬೇಕು. ಮುಖಕ್ಕೆ, ಎದೆಗೆ ಮರ್ಮಾಂಗಕ್ಕೆ ಹೊಡೆದಿದ್ದಾರೆ. ಏನೋ ಇದು ಮಾನವೀಯತೆ. ಆಫೀಸ್​ಗೆ ಹೋದವನನ್ನ ಗೊತ್ತಿಲ್ಲದಾಗೆ ಕರ್ಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಮಗನನ್ನ ಯಾವ ಸ್ಥಿತಿಗೆ ತಂದಿದ್ದಾರೆ ಅದೇ ಸ್ಥಿತಿಗೆ ದರ್ಶನ್​​ನನ್ನ ತರಬೇಕು.

ರೇಣುಕಾಸ್ವಾಮಿ, ತಾಯಿ

ರೇಣುಕಾಸ್ವಾಮಿ ಅಂತ್ಯಸಂಸ್ಕಾರ ಚಿತ್ರದುರ್ಗದಲ್ಲಿ ನೆರವೇರಿದೆ. ವೀರಶೈವ-ಲಿಂಗಾಯತ ಸಂಪ್ರದಾಯದಂತೆ ಜೋಗಿಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ 33 ವರ್ಷದ ರೇಣುಕಾಸ್ವಾಮಿ ಅಂತ್ಯಕ್ರಿಯೆ ಮಾಡಲಾಗಿದೆ. ಮಗನನ್ನು ಕಳೆದುಕೊಂಡು ತಂದೆ-ತಾಯಿ ಕಣ್ಣೀರಿಟ್ರು. ನ್ಯಾಯಕ್ಕಾಗಿ ರೇಣುಕಾಸ್ವಾಮಿ ಪತ್ನಿ ಸಹನಾ ಆಕ್ರಂದನ ಮುಗಿಲು ಮುಟ್ಟಿತ್ತು. ಜೊತೆಗೆ ರೇಣುಕಾಸ್ವಾಮಿ ದರ್ಶನ್ ಅಭಿಮಾನಿ ಆಗಿರ್ಲಿಲ್ಲ ಅಂತ ಆತನ ಪತ್ನಿ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಮಾಡ್ತಿದ್ದ ಮೆಸೇಜ್ ಏನಾಗಿತ್ತು..? ಪವಿತ್ರಗೌಡ ತನಿಖೆಗೆ ಟ್ವಿಸ್ಟ್ ಕೊಡಲು ಮುಂದಾದ ಪೊಲೀಸ್..!

Advertisment

publive-image

‘ಅಭಿಮಾನಿ ಏನು ಆಗಿರಲಿಲ್ಲ’

ತಾಯಿ ಬೇರೆ ಆಗುತ್ತಿದ್ದೇನೆ. ಹೀಗೆ ಆದರೆ ಹೆಂಗೆ ಮಾಡೋಣ. ಹೋಗಬೇಕಾದರೆ ಯಾರಿಗೂ ಏನು ಹೇಳಿಲ್ಲ. ಯಾರಿಗೂ ಈ ಸ್ಥಿತಿ ಬರಬಾರದು. ಬೆಂಗಳೂರಿಗೆ ಹೋಗೋದು, ದರ್ಶನ್​ ಅವರ ಬಳಿಗೆ ಹೋಗೋದು ಯಾವ ಸುದ್ದಿನು ಹೇಳಿಲ್ಲ. ಅಭಿಮಾನಿಯೇನು ಆಗಿರಲಿಲ್ಲ.

ಸಹನಾ, ರೇಣುಕಾಸ್ವಾಮಿ ಪತ್ನಿ

ರೇಣುಕಾಸ್ವಾಮಿ ಅಂತ್ಯಸಂಸ್ಕಾರ ಮುಗಿದ ಬಳಿಕ ನಾವು ನ್ಯಾಯಾಂಗ ಹೋರಾಟ ಮಾಡ್ತೀವಿ ನಮಗೆ ನ್ಯಾಯ ಬೇಕು ಅಂತಾ ಕುಟುಂಬ ಮನವಿ ಮಾಡಿದೆ. ಇನ್ನು ಇದೇ ಕೇಸ್​ನಲ್ಲಿ ಅರೆಸ್ಟ್​ ಆಗಿರೋ ನಟ ದರ್ಶನ್ ಜೈಲಿನಲ್ಲಿ ಮೊದಲ ರಾತ್ರಿಯನ್ನ ಕಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment