newsfirstkannada.com

ದರ್ಶನ್​​ರನ್ನ ಬಳ್ಳಾರಿಗೆ ಶಿಫ್ಟ್ ಮಾಡೋದು ಯಾವಾಗ.. ಇವತ್ತು ರಾತ್ರಿನಾ, ಬೆಳಗ್ಗೆನಾ?

Share :

Published August 27, 2024 at 7:25pm

Update August 27, 2024 at 7:26pm

    ಬಳ್ಳಾರಿ ಬಿರು ಬಿಸಿಲಿನ ಅನುಭವ ಪಡೆಯಲಿದ್ದಾರೆ ನಟ ದರ್ಶನ್

    ದರ್ಶನ್ ಸ್ಥಳಾಂತರಕ್ಕೆ 24ನೇ ಎಸಿಎಂಎಂ ಕೋರ್ಟ್​​ನಿಂದ ಆದೇಶ

    ಒಂದೇ ಒಂದು ಫೋಟೋದಿಂದ ಬಳ್ಳಾರಿಗೆ ಹೊರಟ ನಟ ದರ್ಶನ್

ಬೆಂಗಳೂರು: ನಗರದ 24ನೇ ಎಸಿಎಂಎಂ ಕೋರ್ಟ್ ಆದೇಶದಂತೆ ದರ್ಶನ್​ರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಈ ಆದೇಶದ ಪ್ರತಿ ಜೈಲು ಅಧಿಕಾರಿಗಳ ಕೈ ಸೇರಿದರೆ ಸುರಕ್ಷತೆಯ ದೃಷ್ಟಿಯಿಂದ ಇಂದು ರಾತ್ರಿಯೇ ದರ್ಶನ್​ರನ್ನ ಬಳ್ಳಾರಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ!

ನಟ ದರ್ಶನ್ ಅವರ ಜೈಲಿನಲ್ಲಿನ ಸಿಗರೇಟ್ ಪಾರ್ಟಿ ಫೋಟೋ ರಾಜ್ಯಾದ್ಯಂತ ಭಾರೀ ಸೌಂಡ್ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜೈಲು ಅಧಿಕಾರಿಗಳು ದರ್ಶನ್​ರನ್ನ ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಮನವಿ ಮಾಡಿದ್ದರು. ಅದರಂತೆ ರೇಣುಕಾಸ್ವಾಮಿ ಕೇಸ್​ನ ಆರೋಪಿಗಳನ್ನೆಲ್ಲ ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರ ಮಾಡಿ ನಗರದ 24ನೇ ಎಸಿಎಂಎಂ ಕೋರ್ಟ್ ಆದೇಶ ನೀಡಿದೆ.

ಇದನ್ನೂ ಓದಿ: ದರ್ಶನ್ ಕೈಯಲ್ಲಿ ಸಿಗರೇಟ್​, ಟೀ ಕುಡಿಯೋ ಮಗ್ ಜೊತೆ ಬೆಳ್ಳಿ ಕಡಗ; ಸೆಂಟ್ರಲ್ ಜೈಲ್ ಅಂದ್ರೆ ಹೀಗೆನಾ? 

ಒಂದು ವೇಳೆ ಆದೇಶ ಪ್ರತಿ ನಾಳೆ ಬೆಳಗ್ಗೆ ಜೈಲು ಅಧಿಕಾರಿಗಳ ಕೈ ಸೇರಿದರೆ 11 ಗಂಟೆಗೆ ದರ್ಶನ್​ರನ್ನ ಬಳ್ಳಾರಿ ಜೈಲಿಗೆ ಕರೆದೊಯ್ಯಲಾಗುತ್ತದೆ. ಈಗಾಗಲೇ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳನ್ನು ಸ್ಥಳಾಂತರ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ದರ್ಶನ್ ಅವರು ಬಳ್ಳಾರಿಯ ಬಿರು ಬಿಸಿಲಿನ ಅನುಭವ ಪಡೆಯಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್​​ರನ್ನ ಬಳ್ಳಾರಿಗೆ ಶಿಫ್ಟ್ ಮಾಡೋದು ಯಾವಾಗ.. ಇವತ್ತು ರಾತ್ರಿನಾ, ಬೆಳಗ್ಗೆನಾ?

https://newsfirstlive.com/wp-content/uploads/2024/06/darshan43.jpg

Load More