Advertisment

ಕೊಲೆ ಆರೋಪದ ಟೆನ್ಷನ್ ನಡುವೆ ದರ್ಶನ್​ಗೆ ಮತ್ತೊಂದು ಚಿಂತೆ.. ಠಾಣೆಯಲ್ಲಿ ಚಿಂತಾಕ್ರಾಂತ..!

author-image
Ganesh
Updated On
ಚಾಲೆಂಜಿಂಗ್ ಸ್ಟಾರ್ ದರ್ಶನ್​​ ತನಿಖೆ ಹೆಂಗಿರುತ್ತೆ..? ಆ ಆರು ದಿನಗಳಲ್ಲಿ ರೋಚಕ ಟ್ವಿಸ್ಟ್​..!
Advertisment
  • ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್​​ನನ್ನ​ ತೀವ್ರ ವಿಚಾರಣೆ
  • ಏನೇ ಕೇಳಿದರೂ ಗೊತ್ತೇ ಇಲ್ಲ ಎನ್ನುತ್ತಿರುವ ದರ್ಶನ್
  • ಮಧ್ಯರಾತ್ರಿ ಎರಡ್ಮೂರು ಬಾರಿ ನಿದ್ದೆಯಿಂದ ಎದ್ದಿರುವ ದರ್ಶನ್

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ದರ್ಶನ್​​ ಅಂಡ್ ಗ್ಯಾಂಗ್​​​ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ.

Advertisment

ಪೊಲೀಸರ ತೀವ್ರ ವಿಚಾರಣೆಯಿಂದ ದರ್ಶನ್ ಕುಗ್ಗಿ ಹೋಗಿದ್ದಾರೆ ಎನ್ನಲಾಗುತ್ತಿದೆ. ಅರೆಸ್ಟ್ ಆದ ಮೊದಲ ದಿನವಿದ್ದ ಗತ್ತು ಈಗ ಇಲ್ಲ. ನಿರಂತರ ವಿಚಾರಣೆಯ ಪರಿಣಾಮ ಫುಲ್ ಸೈಲೆಂಟ್ ಆಗಿದ್ದಾರೆ. ಇತರೆ ಆರೋಪಿಗಳ ಹೇಳಿಕೆ ಆಧಾರಿಸಿ ದರ್ಶನ್ ಅವರ ವಿಚಾರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಮೃತದೇಹ ಬಿಸಾಡುವಾಗ ನಡೆಯಿತು ಯಡವಟ್ಟು.. ಪ್ಲಾನ್ ಉಲ್ಟಾ ಹೊಡೆದಿದ್ದೇ ಇಲ್ಲಿ..!

ದರ್ಶನ್ ಘಟನೆ ಬಗ್ಗೆ ಗೊತ್ತಿಲ್ಲ ಅಂದರೂ ಕೂಡ ಸಾಕ್ಷಿಗಳನ್ನು ಮುಂದಿಟ್ಟು ಡ್ರಿಲ್ ಮಾಡಲಾಗುತ್ತಿದೆ. ಸ್ಥಳ ಮಹಜರು ಸಂದರ್ಭದಲ್ಲಿ ಇತರೆ ಆರೋಪಿಗಳ ಹೇಳಿಕೆ ಆಧಾರದ ಮೇಲೆ ದರ್ಶನ್​​ಗೆ ಪ್ರಶ್ನೆ ಮಾಡಲಾಗಿದೆ. ತನಿಖಾಧಿಕಾರಿಯ ನಿರಂತರ ವಿಚಾರಣೆಗೆ ಥಂಡಾ ಹೊಡೆದಿರೋ ದರ್ಶನ್.. ತಮ್ಮ ಸ್ಟಾರ್ಡಮ್ ಹಾಗೂ ಭವಿಷ್ಯದ ಬಗ್ಗೆ ತೀವ್ರ ಚಿಂತೆ ಮಾಡ್ತಿದ್ದಾರೆ. ವಿಚಾರಣೆ ಟೆನ್ಷನ್​ಗಳ ನಡುವೆ ಭವಿಷ್ಯದ ಬಗ್ಗೆ ದರ್ಶನ್ ಚಿಂತೆ ಶುರುವಾಗಿದೆ. ತಡ ರಾತ್ರಿ ಕೂಡ ಎರಡ್ಮೂರು ಬಾರಿ ಎಚ್ಚರಗೊಂಡಿದ್ದರು ಎನ್ನಲಾಗಿದೆ.

Advertisment

ಇದನ್ನೂ ಓದಿ:ಮೃತದೇಹ ವಿಲೇವಾರಿಗೆ 30 ಲಕ್ಷ ರೂ ಡೀಲ್..? ರಾತ್ರಿ ಇಡೀ ದರ್ಶನ್​ಗೆ ಫೋನ್ ಕರೆ.. ನಟ ಸಿಕ್ಕಿಬಿದ್ದಿದ್ದು ಹೀಗೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment