/newsfirstlive-kannada/media/post_attachments/wp-content/uploads/2024/06/DARSHAN-JAIL-2-1.jpg)
ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿ ಎರಡು ದಿನ ಕಳೆದಿದೆ. ಹೈಫೈ ಲೈಫ್ ಲೀಡ್ ಮಾಡ್ಕೊಂಡು ಬೇಕಾಗಿದ್ದು ತಿನ್ಕೊಂಡಿದ್ದ ಅಭಿಮಾನಿಗಳ ಡಿ ಬಾಸ್ಗೀಗ ಜೈಲೂಟವೇ ಗತಿಯಾಗಿದೆ. ಆದ್ರೆ, ಪರಪ್ಪನ ಅಗ್ರಹಾರದಲ್ಲಿ ಕೊಡ್ತಿರೋ ಊಟ ಮಾಡೋಕೆ ಮಾತ್ರ ದರ್ಶನ್ ಪರದಾಡ್ತಿದ್ದಾರಂತೆ.
ಇದನ್ನೂ ಓದಿ:ಜಿಮ್ ಟ್ರೈನರ್‌ಗೆ ಕಂಡೀಷನ್ ಹಾಕಿ ಮದುವೆ.. ಫೇಲ್ ಆಗಿದ್ದಕ್ಕೆ ಗಂಡನಿಗೆ ಡಿವೋರ್ಸ್; ಕಾರಣವೇನು?
ದರ್ಶನ್ ಹೇಳಿ ಕೇಳಿ ಸ್ಟಾರ್ ನಟ. ಕೈಯಲ್ಲಿ ಸಾಲು ಸಾಲು ಸಿನಿಮಾಗಳು. ಹೀಗಾಗಿ ಫಿಟ್ನೆಸ್ ಮೆಂಟೇನ್ ಮಾಡಲೇಬೇಕು. ದಿನ ಜಿಮ್ ಮಾಡ್ಕೊಂಡು ಚಿಕನ್, ಮಟನ್, ಫ್ರೂಟ್ಸ್, ಜ್ಯೂಸ್ ಅಂತ ಪೌಷ್ಠಿಕ ಆಹಾರ ಸೇವಿಸ್ತಿದ್ದ ದರ್ಶನ್ಗೀಗ ಉಪ್ಪು, ಖಾರವಿಲ್ಲದ ಊಟವೇ ಗತಿಯಾಗಿದೆ. ಸರಿಯಾಗಿ ಉಪ್ಪು ಕಾರ ಇಲ್ಲದ ಸಾಂಬಾರ್, ಮುದ್ದೆ ಅನ್ನ ತಿನ್ನಲು ದರ್ಶನ್ಗೆ ಕಸ್ಟವಾಗ್ತಿದೆಯಂತೆ. ನಿನ್ನೆ ರಾತ್ರಿ ಎಂದಿನಂತೆ ಜೈಲಿನ ಮೆನು ಪ್ರಕಾರವೇ ಎಲ್ಲಾ ಆರೋಪಿಗಳಿಗೂ ಊಟ ನೀಡಲಾಯ್ತು. ಜೈಲಿನ ಸಿಬ್ಬಂದಿ ಆರೋಪಿಗಳಿಗೆ ಮುದ್ದೆ, ಅನ್ನ, ಚಪಾತಿ, ಸಾಂಬಾರ್, ಮಜ್ಜಿಗೆ ನೀಡಿದ್ದಾರೆ.
ಆದ್ರೆ, ಸಿಬ್ಬಂದಿ ಕೊಟ್ಟ ಜೈಲಿನ ಊಟ ತಿನ್ನಲಾಗದೆ ದರ್ಶನ್ ಪರದಾಡಿದ್ದಾನಂತೆ. ಸರಿಯಾಗಿ ಊಟ ಸೇರದೆ ನಿದ್ದೆಯು ಬಾರದೆ ದರ್ಶನ್ ನಿನ್ನೆ ರಾತ್ರಿ ಒದ್ದಾಡಿದ್ದಾರಂತೆ. ನಿನ್ನೆ ರಾತ್ರಿ ಕೂಡ ದರ್ಶನ್ ತಡವಾಗಿ ನಿದ್ರೆಗೆ ಜಾರಿಗೆ ಜಾರಿದ್ದಾರೆ. ಇನ್ನೂ, ಇಂದು ಬೆಳಗ್ಗೆ 6 ಗಂಟ ಸುಮಾರಿಗೆ ದರ್ಶನ್ ಎಚ್ಚರಗೊಂಡಿದ್ದಾರೆ. ಬಳಿಕ ಸಿಬ್ಬಂದಿ ಕೊಟ್ಟ ಕಾಫಿ ಬದಲಿಗೆ ದರ್ಶನ್, ಬಿಸಿನೀರನ್ನ ಕೇಳಿ ಕುಡಿದಿದ್ದಾನೆ. ಅಂದ್ಹಾಗೆ ದರ್ಶನ್ ಪರಪ್ಪನ ಅಗ್ರಹಾರ ವಿಶೇಷ ಬ್ಯಾರಕ್ನಲ್ಲಿ ಧನರಾಜ್, ವಿನಯ್, ಪ್ರದೂಶ್ ಜೊತೆ ಒಂದೇ ಕೊಠಡಿಯಲ್ಲಿದ್ದಾನೆ.
ಇದನ್ನೂ ಓದಿ: ಮುದ್ದು ಮುದ್ದಾದ ಅವಳಿ ಶಿಶುಗಳನ್ನೇ ಸುಟ್ಟು ಹಾಕಿದ ಪಾಪಿ ತಂದೆ; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ
ಆದ್ರೆ, ಸಹ ಖೈದಿಗಳು ಮಾತನಾಡಲು ಯತ್ನಿಸಿದ್ರು ದರ್ಶನ್ ಯಾರ ಜೊತೆಯೂ ಬೆರೆಯುತ್ತಿಲ್ಲವಂತೆ. ನಿಮ್ಮ ಸಹವಾಸ ಸಾಕಪ್ಪ ಅಂತ ಅಂತರ ಕಾಯ್ದುಕೊಂಡಿದ್ದಾರಂತೆ. ದಯವಿಟ್ಟು ನನ್ನ ಪಾಡಿಗೆ ಬಿಡಿ ಎಂದು ಸುಮ್ಮನೆ ಕುಳಿತಿದ್ದಾರಂತೆ. ಒಟ್ಟಿನಲ್ಲಿ ಪಾರ್ಟಿ, ಫ್ರೆಂಡ್ಸ್ ಅಂದ್ಕೊಂಡು ಬಿಂದಾಸ್ ಆಗಿದ್ದ ದರ್ಶನ್ ಈಗ ಜೈಲಲ್ಲಿ ವಿಲವಿಲ ಅಂತ ಒದ್ದಾಡುತ್ತಿದ್ದಾರಂತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ