/newsfirstlive-kannada/media/post_attachments/wp-content/uploads/2025/02/DARSHAN-3.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ. ಬಂದು ತಿಂಗಳೆ ಕಳೆದರೂ ಎಲ್ಲಿಯೂ ಏನನ್ನೂ ಮಾತನಾಡಿರಲಿಲ್ಲ. ಆದರೆ ಇದೀಗ ಕೆಲ ವಿಚಾರ ಕುರಿತು ದರ್ಶನ್ ಅವರು ಮಾತನಾಡಿದ್ದಾರೆ.
ಬಳ್ಳಾರಿ ಜೈಲಿನಿಂದ ಹೊರ ಬಂದ ಮೇಲೆ ದರ್ಶನ್ ಅವರು ಇದೇ ಮೊದಲ ಬಾರಿಗೆ ಮಾತನಾಡಿ, ಎಲ್ಲಾ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ?. ಥ್ಯಾಂಕ್ಸ್ ಹೇಳಲಾ?. ಧನ್ಯವಾದಗಳು ಹೇಳಲಾ?. ಇಲ್ಲಿ ಯಾವುದೇ ಪದ ಉಪಯೋಗಿಸಿದರೂ ತುಂಬಾ ಕಡಿಮೆ. ಏಕೆಂದರೆ ನೀವು ತೋರಿಸಿದ ಪ್ರೀತಿ, ಅಭಿಮಾನ ಯಾವಾತ್ತೂ ಅದನ್ನು ರಿಟರ್ನ್ ಮಾಡೋಕೆ ಆಗಲ್ಲ ಎಂದು ಅಭಿಮಾನಿಗಳನ್ನು ಹಾಡಿ ಹೊಗಳಿದ್ದಾರೆ.
ಇದನ್ನೂ ಓದಿ:KPSC ಮಹತ್ವದ ಸೂಚನೆ.. ಪರೀಕ್ಷೆಯಲ್ಲಿ ಇನ್ಮುಂದೆ ಅಭ್ಯರ್ಥಿಗಳು ಇದನ್ನು ಬಳಸುವಂತಿಲ್ಲ, ಏನದು?
ನನಗೆ ಕಾಲು ನೋವು ಹೆಚ್ಚಿದೆ. ಆಪರೇಷನ್ ಮಾಡಿಸಲೇಬೇಕು. ಕುಳಿತುಕೊಳ್ಳಲು, ಎದ್ದೆಲೇಳು ಆಗಲ್ಲ. ನೀವು ಇಷ್ಟ ಪಟ್ಟಂತೆ ಬರ್ತ್ಡೇ ಆಚರಣೆ ಆಗಲ್ಲ. ಪ್ರತಿ ಒಬ್ಬರನ್ನು ಮೀಟ್ ಮಾಡಿ ಥ್ಯಾಂಕ್ಸ್ ಹೇಳಬೇಕು ಎಂದು ಆಸೆ ಇತ್ತು. ಪ್ರತಿ ಸಲ ಎಲ್ಲರಿಂದಲೂ ವಿಶಸ್ ತೆಗೆದುಕೊಳ್ಳುತ್ತಿದ್ದೆ. ಆದರೆ ಈ ಸಲ ಇದು ಸಾಧ್ಯವಿಲ್ಲ ಎಂದು ದರ್ಶನ್ ಬೇಸರದಲ್ಲೇ ಹೇಳಿದ್ದಾರೆ.
ಆರೋಗ್ಯದ ಸಮಸ್ಯೆ ಇದ್ದಿದ್ದರಿಂದ ಬರ್ತ್ಡೇ ಸೆಲೆಬ್ರೇಷನ್ ಮಾಡಿಕೊಳ್ಳುತ್ತಿಲ್ಲ. ತುಂಬಾ ಹೊತ್ತು ನಿಂತುಕೊಂಡು ಕೆಲಸ ಮಾಡಲು ಆಗಲ್ಲ. ಯಾವಾಗ ಇಂಜೆಕ್ಷನ್ ತೆಗೆದುಕೊಳ್ಳುತ್ತೇನೋ ಅವಾಗ 15-20 ದಿನ ಓಕೆ. ಸರಿಯಾಗಿ ಇರುತ್ತದೆ. ಆದರೆ ಆ ಮೇಲೆ ಪವರ್ ಕಡಿಮೆ ಆದಂತೆ ನೋವು ಸ್ಟಾರ್ಟ್ ಆಗುತ್ತೆ ಎಂದು ದರ್ಶನ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ