ಪ್ರೇಮ್ ಜೊತೆ ದರ್ಶನ್ ಸಿನಿಮಾ ಮಾಡಲ್ವಾ? ಇಬ್ಬರ ಮಧ್ಯೆ ಆಗಿದ್ದೇನು?

author-image
Bheemappa
Updated On
ಪ್ರೇಮ್ ಜೊತೆ ದರ್ಶನ್ ಸಿನಿಮಾ ಮಾಡಲ್ವಾ? ಇಬ್ಬರ ಮಧ್ಯೆ ಆಗಿದ್ದೇನು?
Advertisment
  • ಕಷ್ಟದ ಸಮಯದಲ್ಲಿ ಜೊತೆಗೆ ನಿಂತ ಅಭಿಮಾನಿಗಳಿಗೆ ಥ್ಯಾಂಕ್ಸ್
  • ಪ್ರೇಮ್​ ಜೊತೆ ಸಿನಿಮಾ ಮಾಡುವ ಕುರಿತು ದರ್ಶನ್ ಏನಂದ್ರು?
  • ಮುಂದಿನ ಪ್ರಾಜೆಕ್ಟ್​ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ್ರಾ ದರ್ಶನ್?

ಬೆಂಗಳೂರು: ಪ್ರಕರಣದಲ್ಲಿ ಜಾಮೀನು ಪಡೆದು ನಟ ದರ್ಶನ್ ಬಳ್ಳಾರಿ ಜೈಲಿನಿಂದ ಹೊರ ಬಂದಿದ್ದಾರೆ. ಜೈಲಿನಿಂದ ಹೊರ ಬಂದು ದಿನಗಳು ಕಳೆದರೂ ನಟ ಎಲ್ಲಿಯೂ ಮಾತನಾಡಿರಲಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಅದರಂತೆ ದರ್ಶನ್ ಅವರು ಮೊದಲ ಬಾರಿಗೆ ಸಾರ್ವಜನಿಕವಾಗಿ ಸಿನಿಮಾ ಕುರಿತು ಮಾತನಾಡಿದ್ದಾರೆ.

ನಿರ್ಮಾಪಕ ಸೂರಪ್ಪ ಬಾಬುಗೆ ಹಣ ವಾಪಸ್ ಕೊಟ್ಟ ವಿಚಾರ ಕುರಿತು ಮಾತನಾಡಿದ ದರ್ಶನ್, ನನ್ನ ಸೆಲೆಬ್ರಿಟಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೆ ಹಾಕೋಬೇಡಿ. ಸೂರಪ್ಪ ಬಾಬು ಅವರಿಗೆ ಹಣ ವಾಪಸ್ ಕೊಟ್ಟಿದ್ದು ಸತ್ಯ. ಅದು ಏನಕ್ಕೆ ಎಂದರೆ ಇಂಡಸ್ಟ್ರಿಯಲ್ಲಿ ನನಗೆ ತುಂಬಾ ಪರಿಚಯ ಇರೋರು ಬಂದು ಅವರಿಗೆ ಕಮಿಟ್​ಮೆಂಟ್ಸ್​ ಇವೆ. ಸಿನಿಮಾ ಮಾಡಿಕೊಡಬೇಕು ಎಂದಿದ್ದರು. ಅದರಂತೆ ಮಾಡಿಕೊಡಣ ಎಂದು ಹೇಳಿದ್ದೆ.

publive-image

ಇದನ್ನೂ ಓದಿ:ಜೈಲಿಂದ ಹೊರಬಂದ ದರ್ಶನ್ ಮೊದಲ ಸಲ ಮಾತು.. ಫಸ್ಟ್​ ರಿಯಾಕ್ಷನ್ ಏನು..?

ಆದರೆ ಆ ಮೇಲೆ ಏನ್ ನಡೆದಿದೆ ಎಂದು ನಿಮಗೆಲ್ಲಾ ಗೊತ್ತು. ಟೈಮ್​ ಎಲ್ಲ ವೇಸ್ಟ್ ಆಗಿದೆ. ಇಂತಹ ಸಮಯದಲ್ಲಿ ಅವರ ದುಡ್ಡನ್ನು ನಾನೇ ಇಟ್ಟುಕೊಂಡರೇ ಅವರಿಗೆ ಕಮಿಟ್​ಮೆಂಟ್ಸ್​ ಜಾಸ್ತಿ ಆಗುತ್ತದೆ. ಅದಕ್ಕಾಗಿಯೇ ಹಣ ವಾಪಸ್ ಮಾಡಿದೆ. ಮುಂದೆ ಒಳ್ಳೆಯ ವಿಷಯ ಸಿಕ್ಕಾಗ ಸಿನಿಮಾ ಮಾಡೋಣ ಎಂದು ಹೇಳಿ ಹಣ ಕೊಟ್ಟಿದ್ದೇನೆ ಎಂದು ದರ್ಶನ್ ಅವರು ಹೇಳಿದ್ದಾರೆ.

ನಾನು ಪ್ರೇಮ್ ಖಂಡಿತಾ ಸಿನಿಮಾ ಮಾಡೇ ಮಾಡುತ್ತೇವೆ. ಏಕೆಂದರೆ ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಅವರ ಆಸೆ ಆಗಿದೆ. ಸಿನಿಮಾ ಮಾಡೇ ಮಾಡೋಣ. ಆದರೆ ಈಗ ಕೆವಿಎನ್ ಪ್ರೊಡಕ್ಷನ್ ಅವರು ಈಗಾಗಲೇ ಬೇರೆ ಪ್ರೊಡಕ್ಷನ್ ಮಾಡುತ್ತಿದ್ದಾರೆ. ಮಧ್ಯೆಕ್ಕೆ ಹೋಗಲು ಆಗಲ್ಲ. ನಿರ್ಮಾಪಕರು ಎಂದರೆ ಕೇವಲ ದುಡ್ಡು ಹೊಂದಿಸುವುದು ಮಾತ್ರ ಅಲ್ಲ. ಅಡ್ವಾನ್ಸ್​ ಕೊಟ್ಟು ರಿಲೀಸ್​ ಆಗೋವರೆಗೆ ಅವರದೇ ಕೆಲಸ ಇರುತ್ತದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment