ವಿಜಯಲಕ್ಷ್ಮಿಗೆ ಮುದ್ದು ರಾಕ್ಷಸಿ ಎಂದ ದರ್ಶನ್; ಫ್ಯಾನ್ಸ್​ ಖುಷ್, ವಿಡಿಯೋ ವೈರಲ್..!

author-image
Veena Gangani
Updated On
ವಿಜಯಲಕ್ಷ್ಮಿಗೆ ಮುದ್ದು ರಾಕ್ಷಸಿ ಎಂದ ದರ್ಶನ್; ಫ್ಯಾನ್ಸ್​ ಖುಷ್, ವಿಡಿಯೋ ವೈರಲ್..!
Advertisment
  • ಧನ್ವೀರ್​​ ವಾಮನ ಟ್ರೇಲರ್​​ ರಿಲೀಸ್​ ಮಾಡಿದ ಡಿ ಬಾಸ್
  • ಸಿನಿಮಾ ದೊಡ್ಡ ಹಿಟ್​ ಆಗಲಿ ಎಂದು ಶುಭ ಹಾರೈಸಿದ ನಟ
  • ತಮ್ಮ ಹೆಂಡತಿ ವಿಜಯಲಕ್ಷ್ಮೀ ಬಗ್ಗೆ ಹೇಳಿದ್ದೇನು ನಟ ದರ್ಶನ್

ಕನ್ನಡದ ನಟ ಧನ್ವೀರ್, ರೀಷ್ಮಾ ನಾಣಯ್ಯ ಮುಖ್ಯ ಭೂಮಿಕೆಯಲ್ಲಿ ತೆರೆಗೆ ಬರಲು ಸಜ್ಜಾಗಿದೆ ವಾಮನ ಸಿನಿಮಾ. ಹೀಗಾಗಿ ವಾಮನ ಚಿತ್ರತಂಡ ಸಖತ್​ ಪ್ರಮೋಷನ್ ಮಾಡುತ್ತಿದೆ. ಮೊನ್ನೆಯಷ್ಟೇ ಧನ್ವೀರ್ ಗೌಡ ಅಭಿನಯದ ವಾಮನ ಚಿತ್ರದ ಅಮ್ಮನ ಹಾಡನ್ನು ಡಿಜಿಟಲ್​ನಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ರಿಲೀಸ್ ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಶ್ರದ್ಧಾ ಮಾದರಿಯ ಹತ್ಯೆ; ಮುದ್ದಾದ ಹೆಂಡತಿಯ ಕೊಂದು ಸೂಟ್‌ಕೇಸ್‌ಗೆ ತುಂಬಿದ ಟೆಕ್ಕಿ..

publive-image

ಪ್ರಾಣ ಸ್ನೇಹಿತ ಧನ್ವೀರ್ ಗೌಡ ಅಭಿನಯದ ವಾಮನ ಚಿತ್ರದ ಟ್ರೈಲರ್ ರಿಲೀಸ್​ ಮಾಡಿ ಹಾಡಿ ಹೊಗಳಿದ್ದಾರೆ ದರ್ಶನ್. ಇದೇ ವೇಳೆ ಪತ್ನಿ ಬಗ್ಗೆಯೂ ಮುದ್ದಾಗಿ ಮಾತಾಡಿದ್ದಾರೆ. ದರ್ಶನ್​, ಧನ್ವೀರ್ ಅವರ ವಾಮನ ಸಿನಿಮಾದ ಟ್ರೈಲರ್ ವೀಕ್ಷಿಸಿದ್ದಾರೆ. ಟ್ರೈಲರ್ ಮೂಡಿ ಬಂದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಆಗ ವಾಮನ ಸಿನಿಮಾದ ಮುದ್ದು ರಾಕ್ಷಸಿ ಹಾಡಿನ ಬಗ್ಗೆ ಹೇಳುತ್ತಾ, ನನಗೂ ಈ ಮುದ್ದು ರಾಕ್ಷಸಿ ಸಾಂಗ್​ ಇಷ್ಟ. ನನ್ನ ಹೆಂಡತಿಗೂ ಕೆಲವೊಮ್ಮೆ ಮುದ್ದು ರಾಕ್ಷಸಿ ಥರಾ ಆಡ್ತೀಯಾ ಅಂತ ಹೇಳಿದ್ದೀನಿ ಎಂದಿದ್ದಾರೆ.


">March 28, 2025

ದರ್ಶನ್ ಮಾತನ್ನು ಕೇಳಿದ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ. ಇದೇ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಶಂಕರ್​ ರಾಮನ್ ಆ್ಯಕ್ಷನ್​ ಕಟ್​ ಹೇಳಿರೋ ವಾಮನ ಸಿನಿಮಾ ಏಪ್ರಿಲ್​ 10ಕ್ಕೆ ರಿಲೀಸ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment