/newsfirstlive-kannada/media/post_attachments/wp-content/uploads/2024/09/BLY-DARSHAN-2.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಅವರು ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ವೇಳೆ ಸ್ಯಾಂಡಲ್ವುಡ್ನ ಮೂವರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ. ಸದ್ಯ ದರ್ಶನ್ ಏನೇನು ಮಾತನಾಡಿದ್ದಾರೆ ಎಂಬುವ ಮಾಹಿತಿ ಇಲ್ಲಿದೆ.
ದರ್ಶನ್ ಅವರು ಮಾತನಾಡಿ, ಅಭಿಮಾನಿಗಳ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನಂತವನ ಮೇಲೆ ಇರುವುದಕ್ಕೆ ಯಾವಾಗಲೂ ನಾನು ಚಿರಋಣಿ ಆಗಿರುತ್ತೇನೆ. ಫ್ಯಾನ್ಸ್ ಕೊಟ್ಟಂತಹ ಪ್ರೀತಿ ನನಗೆ ತೀರಿಸಲು ಈ ಜನ್ಮದಲ್ಲಿ ಆಗಲ್ಲ. ಪ್ರೀತಿಗಿಂತ ಹೆಚ್ಚಾಗಿ ಸಪೋರ್ಟ್ ಕೊಟ್ಟಿದ್ದೀರಿ. ಇದಕ್ಕೆ ನಾನು ಎಂದಿಗೂ ಚಿರಋಣಿ. ಇದರಲ್ಲಿ ಮೂವರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಜೈಲಿಂದ ಹೊರಬಂದ ದರ್ಶನ್ ಮೊದಲ ಸಲ ಮಾತು.. ಫಸ್ಟ್ ರಿಯಾಕ್ಷನ್ ಏನು..?
ನಮ್ಮ ಹೀರೋ ಧನ್ವೀರ್ ಯಾವಾಗಲೂ ಜೊತೆಯಲ್ಲೇ ಇದ್ದು ಬೆನ್ನೆಲುಬಾಗಿ ನಿಂತಿದ್ದ. ಧನ್ವೀರ್ ಅವರಿಗೂ ಥ್ಯಾಂಕ್ಸ್. ಹಾಗೇ ಬುಲ್ ಬುಲ್ ರಚಿತಾ ರಾಮ್ ಅವರಿಗೂ ತುಂಬಾನೇ ಥ್ಯಾಂಕ್ಸ್. ಹಾಗೇ ನನ್ನ ಪ್ರಾಣ ಸ್ನೇಹಿತೆಯಾದ ರಕ್ಷಿತಾ ಅವರಿಗೂ ಥ್ಯಾಂಕ್ಸ್. ಇದರ ಜೊತೆ ನನ್ನ ಸೆಲೆಬ್ರಿಟಿಗಳಿಗೂ ಅನಂತ.. ಅನಂತ.. ಅನಂತ ನಮನಗಳು ಎಂದು ಹೇಳಿದ್ದಾರೆ.
ಬೇರೆ ಭಾಷೆಯ ಸಿನಿಮಾಗಳಿಗೆ ಹೋಗುವ ವಿಚಾರಕ್ಕೆ ಮಾತನಾಡಿದ ದರ್ಶನ್, ಬೇರೆ ಭಾಷೆಯ ಸಿನಿಮಾಗೆ ಎಲ್ಲಿಗೂ ಹೋಗಲ್ಲ. ಸಾಯೋವರೆಗೂ ಇಲ್ಲೇ ಇರೋದು. ನಾನು ಮಾಡೋದು ಕನ್ನಡ ಸಿನಿಮಾನೇ. ಅದು ಡಬ್ಬ ಆಗಿ ಬೇರೆ ಭಾಷೆಗೆ ಹೋದರೆ ಏನು ಮಾಡೋಕೆ ಆಗಲ್ಲ. ಅಭಿಮಾನಿಗಳ ಆಶೀರ್ವಾದ ಇನ್ನೂ ನನ್ನ ಮೇಲೆ ಹಾಗೇ ಇರಲಿ ಎಂದು ಮನವಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ