ಸಚ್ಚಿ ಬರ್ತ್​ ಡೇ ಮೂಲಕ ಸುಮಲತಾಗೆ ನಟ ದರ್ಶನ್ ಟಾಂಗ್..?

author-image
Veena Gangani
Updated On
ಸಚ್ಚಿ ಬರ್ತ್​ ಡೇ ಮೂಲಕ ಸುಮಲತಾಗೆ ನಟ ದರ್ಶನ್ ಟಾಂಗ್..?
Advertisment
  • ಶೂಟಿಂಗ್ ಸೆಟ್​ನಲ್ಲೇ ಸಚ್ಚಿ ಬರ್ತಡೇ ಆಚರಿಸಿರೋ ದರ್ಶನ್
  • ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚ್ಚಿದಾನಂದ
  • ಸುಮಲತಾರಿಂದ ಸಚ್ಚಿ ದೂರವಾಗಿ ನಟ ದರ್ಶನ್​ಗೆ ಹತ್ತಿರ

ನಟ ದರ್ಶನ್​​ ಮಾಜಿ ಸಂಸದೆ ಸುಮಲತಾ ಅಂಬರೀಶ್​ ಆತ್ಮ ಇಂಡುವಾಳು ಎಸ್.ಸಚ್ಚಿದಾನಂದರ ಹುಟ್ಟುಹಬ್ಬ ಆಚರಿಸಿದ್ದಾರೆ. ಇತ್ತೀಚೆಗೆ ನಡೆದ ಹುಟ್ಟುಹಬ್ಬ ಆಚರಣೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ವೀಕ್ಷಕರಿಗೆ ಬಿಗ್​ ಶಾಕ್​.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!

publive-image

ಒಂದು ಕಾಲದಲ್ಲಿ ಸುಮಲತಾರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚ್ಚಿದಾನಂದ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗುವುದರ ಮೂಲಕ ದರ್ಶನ್ ಟಾಂಟ್ ನೀಡಿದರಾ ಎಂಬ ಪ್ರಶ್ನೆ ಶುರುವಾಗಿದೆ. ಈ ಹಿಂದೆ ಸುಮಲತಾ, ದರ್ಶನ್​ಗೆ ಮಗನ ಸ್ಥಾನ ನೀಡಿದ್ದರು. ದರ್ಶನ್ ಕೂಡ ಮದರ್ ಇಂಡಿಯಾ ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದರು. ಆದರೆ ದರ್ಶನ್ ಜೈಲು ಸೇರಿದಾಗ ಸುಮಲತಾ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಇದೆ.   ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಮೊಮ್ಮಗನ ನಾಮಕರಣಕ್ಕೂ ದರ್ಶನ್​ಗೆ ಆಹ್ವಾನಿಸಿಲ್ಲ ಎನ್ನಲಾಗಿದೆ.

ಕಷ್ಟಕ್ಕೆ ಸ್ಪಂದಿಸದ ಸುಮಲತಾ, ಅಭಿಷೇಕ್​ರನ್ನ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದರು. ಆದ್ರೆ ಮಂಡ್ಯ ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರು ದರ್ಶನ್ ಜೈಲಿನಲ್ಲಿದ್ದಾಗ ನೋಡಲು ಹಲವು ಬಾರಿ ತೆರಳಿದ್ದರು.

publive-image

ಇದೀಗ ಸುಮಲತಾರ ಆಪ್ತನ ಬರ್ತ್ ಡೇಯನ್ನ ಶೂಟಿಂಗ್ ಸೆಟ್​ನಲ್ಲೇ ನಟ ದರ್ಶನ್​ ಸೆಲೆಬ್ರೇಟ್ ಮಾಡಿ ಕೌಂಟರ್​ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಬರ್ತ್​ ಡೇ ಪಾರ್ಟಿಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಕಿರುತೆರೆ ನಟಿ ನೇಹಾ ಗೌಡ ಪತಿ ಚಂದನ್​ ಗೌಡ ಕೂಡ ಭಾಗಿಯಾಗಿದ್ದರು.

publive-image

ಇಂಡುವಾಳು ಎಸ್. ಸಚ್ಚಿದಾನಂದ ಅವರು ಅಂಬರೀಶ್​ ಕುಟುಂಬಕ್ಕೆ ಆಪ್ತನಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಈ ಸಚ್ಚಿದಾನಂದ. ಕಳೆದ ವಿಧಾನಸಭಾ ಚುನಾವಣೆ ನಂತರ ಸುಮಲತಾರಿಂದ ಅಂತರ ಕಾಯ್ದುಕೊಂಡಿದ್ದರು. ಚುನಾವಣೆಯಲ್ಲಿ ನೆರವಿಗೆ ಬಾರದ ಸುಮಲತಾ ವಿರುದ್ಧ ಸಚ್ಚಿದಾನಂದ ಬೇಸರ ಮಾಡಿಕೊಂಡಿದ್ದರು. ಸದ್ಯ ಶೂಟಿಂಗ್​ ಸೆಟ್​ನಲ್ಲೇ ಸಚ್ಚಿದಾನಂದ ಅವರ ಹುಟ್ಟು ಹಬ್ಬವನ್ನು ನಟ ದರ್ಶನ್ ಆಚರಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment