/newsfirstlive-kannada/media/post_attachments/wp-content/uploads/2025/02/DARSHAN-1-1.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಮತ್ತೊಂದು ರಿಲೀಫ್ ಸಿಕ್ಕಿದ್ದು ಬೆಂಗಳೂರು ಬಿಟ್ಟು ಹೋಗುವಾಗ ಇದ್ದಂತ ಷರತ್ತನ್ನು ಹೈಕೋರ್ಟ್​ ಸಡಿಲಿಕೆ ಮಾಡಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಕೆಲ ಆರೋಪಿಗಳಿಗೆ ಜಾಮೀನು ಸಿಕ್ಕಿದ್ದು ಈಗಾಗಲೇ ಹೊರಗೆ ಇದ್ದಾರೆ. ನ್ಯಾಯಾಲಯ ಜಾಮೀನು ನೀಡುವಾಗ ಷರತ್ತು ಹಾಕಿ ಬೇಲ್ ನೀಡಿತ್ತು. ಅದರಲ್ಲಿ ದರ್ಶನ್​ಗೆ ಬೆಂಗಳೂರು ಬಿಟ್ಟು ಹೋಗದಂತೆ ಷರತ್ತು ವಿಧಿಸಲಾಗಿತ್ತು. ಆದರೆ ಇದೀಗ ಇದಕ್ಕೆ ಸಡಿಲಿಕೆ ಮಾಡಿದೆ.
ಹೈಕೋರ್ಟ್​ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರು ಈ ಕುರಿತು ಆದೇಶ ನೀಡಿದ್ದಾರೆ. ದರ್ಶನ್ ಅವರು ಬೆಂಗಳೂರು ಬಿಟ್ಟು ಹೋಗುವಾಗ ಇದ್ದ ಷರತ್ತು ಅನ್ನು ಸಡಿಲಿಕೆ ಮಾಡಿದ್ದು ವಿದೇಶಕ್ಕೆ ಹೋಗುವಾಗ ಮಾತ್ರ ಅನುಮತಿ ಪಡೆಯಲೇಬೇಕು ಎಂದು ಆದೇಶಿಸಿದೆ.
/newsfirstlive-kannada/media/post_attachments/wp-content/uploads/2025/02/Darshan-in-Court.jpg)
ದರ್ಶನ್‌ಗೆ ಹೈಕೋರ್ಟ್ ಜಾಮೀನು ಸಿಕ್ಕ ಮೇಲೆ ಅವರು ಬೆಂಗಳೂರು ಬಿಟ್ಟು ಹೋಗುವಂತಿರಲಿಲ್ಲ. ಹೀಗಾಗಿ ದರ್ಶನ್ ಮೈಸೂರು ಭೇಟಿ, ಹೊರ ರಾಜ್ಯಗಳಿಗೆ, ವಿದೇಶಗಳಿಗೆ ಶೂಟಿಂಗ್, ತೋಟದ ಮನೆಗೆ ಹೋಗುವುದಕ್ಕೆ ಕೋರ್ಟ್​ ಕಡಿವಾಣ ಹಾಕಿತ್ತು. ಆದರೆ ಇದರಲ್ಲಿ ಈಗ ಬೆಂಗಳೂರು ಬಿಟ್ಟು ಹೋಗುವಾಗ ಇದ್ದ ಷರತ್ತು ಅನ್ನು ಸಡಿಲಿಕೆ ಮಾಡಲಾಗಿದೆ.
ಪ್ರಕರಣದಲ್ಲಿ ಯಾರು ಯಾರಿಗೆ ಜಾಮೀನು ಸಿಕ್ಕಿದೆ?
ರೇಣುಕಾಸ್ವಾಮಿ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ಆರ್. ನಾಗರಾಜು, ಪ್ರದೋಷ್ ಎಸ್.ರಾವ್, ಅನು ಕುಮಾರ್, ಎಂ. ಲಕ್ಷ್ಮಣ್, ಜಗದೀಶ್ ಒಟ್ಟು ಪ್ರಕರಣದ 17 ಆರೋಪಿಗಳ ಪೈಕಿ ಈವರೆಗೂ 12 ಮಂದಿಗೆ ಜಾಮೀನು ಸಿಕ್ಕಿದೆ. ಇನ್ನು 5 ಮಂದಿ ಜೈಲಿನಲ್ಲಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us