newsfirstkannada.com

ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

Share :

Published August 29, 2024 at 8:18am

    ದರ್ಶನ್​ಗಾಗಿ ಇಬ್ಬರು ವಾಚ್ ಗಾರ್ಡ್ಸ್​, ಎಎಸ್ಐ ನಿಯೋಜನೆ?

    ಯಾರೊಬ್ಬರು ಎಂಟ್ರಿ ಆಗದಂತೆ ಹೈ ಸೆಕ್ಯೂರಿಟಿ ಸೆಲ್ ಆಗಿದೆ

    ಎಷ್ಟು ದಶಕಗಳ ಹಿಂದೆ ಈ ಹೈ ಸೆಕ್ಯೂರಿಟಿ ಸೆಲ್‌ ನಿರ್ಮಿಸಿದ್ದರು?

ಬಳ್ಳಾರಿ: ಪರಪ್ಪನ ಅಗ್ರಹಾರ ಜೈಲಿನಲ್ಲಿನ ದರ್ಶನ್ ಅವರ ಸಿಗರೇಟ್ ಪಾರ್ಟಿ ಫೋಟೋ ವೈರಲ್ ಆಗುತ್ತಿದ್ದಂತೆ ಅವರನ್ನು ಕೋರ್ಟ್​ ಆದೇಶದಂತೆ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ‌ಯ ಕೇಂದ್ರ ಕಾರಾಗೃಹದಲ್ಲಿ‌ ಎಲ್ಲ ಸಿದ್ಧತೆಗಳನ್ನು ಅಲ್ಲಿನ ಜೈಲು ಅಧಿಕಾರಿಗಳು ಕೈಗೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಬಳ್ಳಾರಿ ಜೈಲಿಗೆ.. ಪವಿತ್ರಾ ಎಲ್ಲಿಗೆ? ಕೊಲೆ ಆರೋಪಿಗಳು ಯಾವ್ಯಾವ ಜೈಲಿಗೆ ಶಿಫ್ಟ್? ಇಲ್ಲಿದೆ ಕಂಪ್ಲೀಟ್ ಮಾಹಿತಿ!

ಮೂರು ದಶಕಗಳ ಹಿಂದೆ ನಿರ್ಮಾಣ ಮಾಡಿದಂತಹ ಈ ಹೈ ಸೆಕ್ಯೂರಿಟಿ ಸೆಲ್‌ನಲ್ಲಿ ದರ್ಶನ್​ರನ್ನು ಬಂಧಿಸಿಡಲು ಅಧಿಕಾರಿಗಳು ವ್ಯವಸ್ಥೆ ಮಾಡುತ್ತಿದ್ದಾರೆ. ಈ ಸೆಲ್​ನ ಎರಡು ಬದಿಯಲ್ಲಿ ಕನಿಷ್ಠ 30 ಸೆಲ್​ಗಳು ಇವೆ. ಒಂದು ಕಡೆ 15ನೇ ಸೆಲ್​ನಲ್ಲಿ ನಟನನ್ನು ಇರಿಸಲಾಗುತ್ತದೆ. ಈ ಸೆಲ್​​ಗಳನ್ನ ಈ ಹಿಂದೆ ಪಂಜಾಬ್​ನ ಸಿಎಂ ಹತ್ಯೆ ಮಾಡಿದ್ದ ಉಗ್ರಗಾಮಿಗಳನ್ನ ಬಂಧಿಸಿಡಲು ನಿರ್ಮಿಸಿದ್ದ ಸೆಲ್​ಗಳಾಗಿವೆ. ಈ ಸೆಲ್​ಗಳಲ್ಲೇ ದರ್ಶನ್​ ಇನ್ಮುಂದೆ ಇರಲಿದ್ದಾರೆ.

ಇದನ್ನೂ ಓದಿ: ಪರಪ್ಪನ ಜೈಲಿನಿಂದ ಸಸ್ಪೆಂಡ್ ಆದ ಅಧಿಕಾರಿಗಳು ಯಾರು ಯಾರು.. ಗೃಹ ಸಚಿವರು ಹೇಳಿದ ಹೆಸರುಗಳು

ಈಗಾಗಲೇ ವಿವಿಧ ಆರೋಪ ಹಾಗೂ ಅಪರಾಧ ಅಡಿಯಲ್ಲಿ ಮಂಗಳೂರು, ಶಿವಮೊಗ್ಗ, ಬೆಂಗಳೂರಿನ 11 ಕೈದಿಗಳನ್ನು ಈ ಸೆಲ್​ಗಳಲ್ಲಿ ಬಂಧಿಸಿ ಇಡಲಾಗಿದೆ. ಇಬ್ಬರು ವಾಚ್ ಗಾರ್ಡ್ಸ್​ ಹಾಗೂ ಓರ್ವ ಎಎಸ್​ಐ ಅಧಿಕಾರಿ ದರ್ಶನ್ ಸೆಲ್​ಗಾಗಿಯೇ ಪ್ರತ್ಯೇಕವಾಗಿ ನಿಯೋಜಿಸಲಾಗುತ್ತಿದೆ. ಯಾರೋಬ್ಬರು ಆ ಸೆಲ್​ಗೆ ಹೋಗದಂತೆ ಹೈ ಸೆಕ್ಯೂರಿಟಿ ಇರುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯಲ್ಲಿ ದರ್ಶನ್ ಇರಲಿರುವ ಹೈ ಸೆಕ್ಯೂರಿಟಿ ಸೆಲ್‌ ಹೇಗಿದೆ.. 3 ದಶಕಗಳ ಹಿಂದೆ ನಿರ್ಮಿಸಿದ ಇದರ ಇತಿಹಾಸ ಗೊತ್ತಾ?

https://newsfirstlive.com/wp-content/uploads/2024/08/DARSHAN_BALLARY.jpg

Load More