/newsfirstlive-kannada/media/post_attachments/wp-content/uploads/2024/10/darshan-2.jpg)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್​ಗೆ ಇಂದು ಟೆನ್ಷನ್​ ಡೇ ಆಗಿದೆ. ಒಂದು ಕಡೆ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ. ಜೊತೆಗೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿರುವ ಅವರಿಗೆ ಸರ್ಜರಿ ಯಾವತ್ತು ಅಂತಾ ಇವತ್ತು ನಿರ್ಧಾರವಾಗುವ ನಿರೀಕ್ಷೆ ಇದೆ.
ದರ್ಶನ್ ಮಧ್ಯಂತರ ಜಾಮೀನು ರದ್ಧತಿಗೆ ಮೇಲ್ಮನವಿ ಸಲ್ಲಿಸಲು ಪೊಲೀಸ್ ಅಧಿಕಾರಿಗಳ ವಕೀಲರು ಸಿದ್ಧತೆ ನಡೆಸಿದ್ದಾರೆ. ಹಿರಿಯ ವಕೀಲ ರಘುಪತಿ ಅವರಿಂದ ಮೇಲ್ಮನವಿ ಸಲ್ಲಿಕೆ ಸಾಧ್ಯತೆ ಇದೆ. ನವೆಂಬರ್ 13ರಂದು SLP ಸಲ್ಲಿಕೆಗೆ ಅನುಮತಿ ಸಿಕ್ಕಿದೆ. ಗೃಹ ಇಲಾಖೆಯಿಂದ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಲು ಅನುಮತಿ ಸಿಕ್ಕಿದೆ. ಇದಕ್ಕೆ ಬೇಕಾದ ಅಗತ್ಯ ದಾಖಲಾತಿ, ವಿಷಯ, ಭಾಷಾಂತರ ಸಿದ್ಧತೆಯನ್ನು ತನಿಖಾಧಿಕಾರಿಗಳು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ:ಸದ್ಯದಲ್ಲೇ ಕೋರ್ಟ್​ನಿಂದ ನಟ ದರ್ಶನ್​ ಜಾಮೀನು ರದ್ದು? ಕಾರಣವೇನು?
ಈ ಸಂಬಂಧ ಹಿರಿಯ ವಕೀಲ ರಘುಪತಿ ಅವರಿಗೆ SPP ಪ್ರಸನ್ನ ಕುಮಾರ್ ಅವರು ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದಾರೆ. ತುರ್ತು ಸರ್ಜರಿ ಅಗತ್ಯ ಎಂದು ದರ್ಶನ್ ಮಧ್ಯಂತರ ಜಾಮೀನು ಕೇಳಿದ್ದರು. ದರ್ಶನ್ ಮನವಿ ಪರಿಗಣಿಸಿ ಆರು ವಾರಗಳ ಕಾಲ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮೆಡಿಕಲ್ ಗ್ರೌಂಡ್ಸ್ ಮೇಲೆ ಆರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿದೆ.
ಮಧ್ಯಂತರ ಜಾಮೀನು ಪಡೆದು 19 ದಿನಗಳಾದರೂ ದರ್ಶನ್​ಗೆ ಸರ್ಜರಿ ಆಗಿಲ್ಲ. ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ದರ್ಶನ್ ಫಿಜಿಯೋ ತೆರಪಿಗೆ ಒಳಗಾಗಿದ್ದಾರೆ. ಈ ಹಿಂದೆ ಫಿಜಿಯೋ ಥೆರಪಿ ಮಾಡಿಸೋದಾದ್ರೆ ಜೈಲಲ್ಲೇ ಮಾಡಿಸಿ ಎಂದು ಹೈಕೋರ್ಟ್ ಹೇಳಿತ್ತು. ಆದರೆ ತುರ್ತು ಸರ್ಜರಿ ಆಗದಿದ್ದಲ್ಲಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ದರ್ಶನ್ ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ:ನಟಿ ಕಾವ್ಯಾ ಗೌಡ ಮಗಳನ್ನು ಎತ್ತಿ ಮುದ್ದಾಡಿದ ವಿಜಯಲಕ್ಷ್ಮಿ ದರ್ಶನ್; ಕ್ಯೂಟ್​ ವಿಡಿಯೋ ಇಲ್ಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ