/newsfirstlive-kannada/media/post_attachments/wp-content/uploads/2024/04/Darshan_Actor_1.jpg)
ಇತ್ತೀಚೆಗೆ ರಿಲೀಸ್​ ಆದ ಕನ್ನಡದ ಕಾಟೇರ ಸಿನಿಮಾ ಸಕ್ಸಸ್​ನಲ್ಲಿ ತೇಲಾಡುತ್ತಿರೋ ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅವರು ಡೆವಿಲ್​ ಮೂವಿ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಡೆವಿಲ್​ ಸಿನಿಮಾ ಶೂಟಿಂಗ್​ ವೇಳೆ ಗಾಯಗೊಂಡಿದ್ದ ನಟ ದರ್ಶನ್​​ ಅವರು ಇತ್ತೀಚೆಗೆ ಸರ್ಜರಿ ಮಾಡಿಸಿಕೊಂಡಿದ್ದರು.
ಸರ್ಜರಿ ಮಾಡಿಸಿಕೊಂಡಿರೋ ನಟ ದರ್ಶನ್​​​ ಫೋಟೋ ಈಗ ವೈರಲ್​ ಆಗಿದೆ. ಮೊದಲು ಬಲಗೈಗೆ ಯಶಸ್ವಿ ಸರ್ಜರಿ ಆಗಿತ್ತು. ಈಗ ಎಡಗೈಗೂ ಆಪರೇಷನ್​ ಆಗಿದೆ. ಈ ಫೋಟೋ ನ್ಯೂಸ್​ಫಸ್ಟ್​ ಕನ್ನಡಕ್ಕೆ ಸಿಕ್ಕಿದೆ.
ಇನ್ನು, ಸರ್ಜರಿ ಆದ ಬಗ್ಗೆ ನಟ ದರ್ಶನ್​ ಅವರೇ ಖುದ್ದು ಮಾಹಿತಿ ನೀಡಿದ್ದಾರೆ. ನಿನ್ನೆಯಷ್ಟೇ ದರ್ಶನ್​ ಅವರಿಗೆ ಆಪರೇಷನ್​ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕಾಟೇರ ಸಿನಿಮಾದ ನಂತರ ದರ್ಶನ್​​ ಇವಾಗ ಡೆವಿಲ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಅಶ್ವಿನಿ ಪುನೀತ್ ವಿರುದ್ಧ ಅವಹೇಳನಕಾರಿ ಪೋಸ್ಟ್; ಇಬ್ಬರು ಸ್ಟಾರ್ ನಟರ ಹೆಸರಲ್ಲಿ ಅಸಲಿಗೆ ನಡೆದಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us