ಪತ್ನಿ ವಿಜಯಲಕ್ಷ್ಮೀ ಜೊತೆ ದರ್ಶನ್ ದೇವರ ಮೊರೆ.. ಬೇಲ್​ ಟೆನ್ಷನ್​ ನಡುವೆ ದಚ್ಚು ಟೆಂಪಲ್​ ರನ್

author-image
Ganesh
Updated On
ಫ್ಯಾನ್ಸ್​ ವಿರುದ್ಧ ಆರೋಪ ಬೆನ್ನಲ್ಲೇ ದರ್ಶನ್ ಪತ್ನಿ ಮಾರ್ಮಿಕ ಸಂದೇಶ.. ವಿಜಯಲಕ್ಷ್ಮೀ ಪೋಸ್ಟ್​ನಲ್ಲಿ ಏನಿದೆ?
Advertisment
  • ಸುಪ್ರೀಂ ಕೋರ್ಟ್​ ಬೇಲ್​ ಟೆನ್ಷನ್​ ನಡುವೆ ದಚ್ಚು ಟೆಂಪಲ್​ ರನ್​​!
  • ಬೆದರಿಕೆ ಹಾಕಿದವರ ವಿರುದ್ಧ ನಟ ಪ್ರಥಮ್​ ಏಕಾಂಗಿ ಹೋರಾಟ!
  • ರಮ್ಯಾ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ಸಾಲು ಸಾಲು ಸಂಕಷ್ಟದ ನಡುವೆ ನಟ ದರ್ಶನ್ ಪತ್ನಿ ಜೊತೆ ದೇವರ ದರ್ಶನ ಪಡೆದಿದ್ದಾರೆ. ಸುಪ್ರೀಂ ಕೋರ್ಟ್​​ನಲ್ಲಿ ಬೇಲ್​​​ ಭವಿಷ್ಯಕ್ಕೆ ತಲೆ ಕಡೆಸಿಕೊಂಡಿರೋ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ದೇಗುಲಗಳ ಪ್ರದಕ್ಷಿಣೆ ಹಾಕ್ತಿದ್ದಾರೆ. ಇಲ್ಲಿ ದರ್ಶನ್​ ವಿರುದ್ಧ ಸೆಲೆಬ್ರಿಟಿಗಳು ಹೋರಾಟ ಮಾಡ್ತಿದ್ದಾರೆ.

ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ vs ಡಿ ಬಾಸ್ ಪ್ಯಾನ್ಸ್​ ನಡುವೆ ಮಾತಿನ ಮಿಸೈಲ್​ ಅಟ್ಯಾಕ್​ ನಡೀತಿದೆ. ದರ್ಶನ್​ ಫ್ಯಾನ್ಸ್​ ಇಂದ ಕಾಮೆಂಟ್​.. ಮೆಸೇಜ್​ ರೂಪದಲ್ಲಿ ಡ್ರೋನ್​ ಅಟ್ಯಾಕ್ ​ಆಗ್ತಿದ್ರೆ.. ನಟಿ ರಮ್ಯಾ.. ನಟ ಪ್ರಥಮ್.. ಡಿಫೆಂಡ್​ ಮಾಡ್ಕೊಳ್ಳೋದಕ್ಕೆ ಪೊಲೀಸ್​ ಸೇನೆಯನ್ನ ಬಳಸ್ತಿದೆ. ಈ ವಾರ್​ನ ನಡುವೆ ಡೆವಿಲ್ ನಾಗರ ಪಂಚಮಿಯಂದು ಟೆಂಪಲ್​ ರನ್​ ಶುರು ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗೆ ಎ ಖಾತಾ ನೀಡಲು ಕೇವಲ 15 ದಿನದಲ್ಲಿ ಆನ್​​ಲೈನ್ ವ್ಯವಸ್ಥೆ ಜಾರಿ

publive-image

ದಚ್ಚು ಟೆಂಪಲ್​ ರನ್​​!

ಅಂದು ದಾಸ ಜೈಲಿನಲ್ಲಿದ್ರು.. ಆವತ್ತೂ ಬೇಲ್​ ಟೆನ್ಷನ್​ ಇತ್ತು.. ಪತಿಗಾಗಿ ಆಚೆ ಹೋರಾಟ ಮಾಡ್ತಿದ್ದ ವಿಜಯಲಕ್ಷ್ಮೀ.. ಅಸ್ಸಾಂನಲ್ಲಿರೋ ಆ ತಾಯಿ ದೇಗುಲಕ್ಕೆ ಭೇಟಿ ಕೊಟ್ಟಿದ್ರು.. ಭಾರತದ 51 ಶಕ್ತಿಪೀಠಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗುವ ಈ ದೇವಸ್ಥಾನಕ್ಕೆ ಬಂದು, ಪತಿಯ ಶೀಘ್ರ ಬಿಡುಗಡೆಗಾಗಿ ಹರಕೆ ಹೊತ್ತುಕೊಂಡಿದ್ದರು. ಅಂದು ವಿಜಯಲಕ್ಷ್ಮೀ ಮಾಡಿದ್ದ ಪಾರ್ಥನೆ ಫಲಿಸಿತೋ ಏನೋ, ದರ್ಶನ್​ಗೆ ಬೇಲ್​ ಕೂಡ ಸಿಕ್ಕಿತ್ತು.. ಹರಕೆ ಈಡೇರಿದ ಮೇಲೆ ಪೂಜೆ ಸಲ್ಲಿಕೆ ಮಾಡೋದಕ್ಕೆ ದರ್ಶನ್​ ದಂಪತಿ ಟೆಂಪಲ್​ ರನ್ ಶುರು ಮಾಡಿದ್ದಾರೆ.

ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್​ಗೆ ರೆಡಿಯಾದ ಭಾರತ್​ ಆರ್ಮಿ!

ಅಂದು ಸಿಕ್ಕ ಬೇಲ್​ ಅನ್ನ ರದ್ದು ಮಾಡಿ ಅಂತ ರಾಜ್ಯ ಪೊಲೀಸ್​ ಇಲಾಖೆ ಸುಪ್ರೀಂ ಕೋರ್ಟ್​ ಮೊರೆ ಹೋಗಿತ್ತು. ಇದರ ತೀರ್ಪು ಹೊರ ಬರೋದಿದೆ. ಈ ಟೆನ್ಷನ್​ ನಡುವೆ ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಲು ವಿಜಯಲಕ್ಷ್ಮಿ ಮತ್ತು ದರ್ಶನ್ ಕುಟುಂಬ ಸಮೇತರಾಗಿ ಅಸ್ಸಾಂನ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿದ್ರು. ಹರಕೆ ಈಡೇರಿಸಿದ್ರು.. ಜೊತೆಗೆ ಸುಪ್ರೀಂಕೋರ್ಟ್​​ನಲ್ಲಿ ಪ್ರಕಟವಾಗೋ ಬೇಲ್​ ಭವಿಷ್ಯ ತಮ್ಮ ಪರ ಇರಲಿ ಅಂತ ದೇಗುಲದಲ್ಲಿ ಪ್ರದಕ್ಷಿಣೆ ಹಾಕಿದ್ರು. ಕಳೆದ ವಾರ ಸುಪ್ರೀಂಕೋರ್ಟ್​ನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಾದ-ಪ್ರತಿವಾದಗಳು ನಡೆದಿವೆ. ಒಂದು ವಾರದಲ್ಲಿ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿದೆ.

ರಮ್ಯಾ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು

ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ನೀಡಿರೋ ದೂರಿನ ಬಗ್ಗೆ ಸಿಸಿಬಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಡಿಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ರಿಚ್ಮಂಡ್​ಟೌನ್​ನಲ್ಲಿರೋ ನಟಿ ರಮ್ಯಾ ನಿವಾಸಕ್ಕೆ ತೆರಳಿದ ಸೈಬರ್​ ಕ್ರೈಂ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಯಾವ ಪೇಜ್​ಗಳಿಂದ ಅಶ್ಲೀಲ ಕಾಮೆಂಟ್​ಗಳು ಬಂದಿತ್ತು. ಯಾವ ಯಾವ ನಂಬರ್​ಗಳಿಂದ ಬೆದರಿಕೆಯ ಕರೆಗಳು ಬಂದ್ವು ಅನ್ನೋ ಮಾಹಿತಿ ಪಡೆದುಕೊಂಡ್ರು.

ಇದನ್ನೂ ಓದಿ: ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!

ಬೆದರಿಕೆ ಹಾಕಿದವರ ವಿರುದ್ಧ ನಟ ಪ್ರಥಮ್​ ಏಕಾಂಗಿ ಹೋರಾಟ!

ದರ್ಶನ್​ ಫ್ಯಾನ್ಸ್​ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿರೋ ಪ್ರಥಮ್​ ಏಕಾಂಗಿ ಹೋರಾಟ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್​ಪಿಗೆ ಲಿಖಿತ ದೂರು ನೀಡಿದ್ದಾರೆ. ಬಳಿಕ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಸ್​ಪಿ ಕಚೇರಿ ಮುಂದೆ ಧರಣಿಗೆ ಕೂತ್ರು.. ನನಗೆ ಏನಾದ್ರು ಆದ್ರೆ ಅದಕ್ಕೆ ದರ್ಶನ್​ ಅವರೇ ಕಾರಣ ಅಂತ ಹೇಳಿದ್ರು. ಇವತ್ತು ಜ್ಞಾನ ಭಾರತಿ ಪೊಲೀಸ್​ ಠಾಣೆಯಲ್ಲಿ ಬಂದು ದೂರು ಸಲ್ಲಿಸೋದಾಗಿ ತಿಳಿಸಿದ್ದಾರೆ. ಅತ್ತ ಬೇಲ್​ ಟೆನ್ಷನ್ ಇತ್ತ ರಮ್ಯಾ.. ಇದ್ರ ಮಧ್ಯೆ ಪ್ರಥಮ್​.. ಈ ಮೂರು ವಿಚಾರ ದರ್ಶನ್​ಗೆ ತಲೆ ನೋವು ತಂದಿದೆ. ಆತಂಕದಲ್ಲಿರೋ ದರ್ಶನ್​ಗೆ ಸುಪ್ರೀಂಕೋರ್ಟ್​ ಏನ್​ ತೀರ್ಪು ನೀಡುತ್ತೋ ಕಾದು ನೋಡಬೇಕಿದೆ.

ಇದನ್ನೂ ಓದಿ: ಬ್ರೆಡ್​, ಬಿಸ್ಕತ್, ಚಿಪ್ಸ್ ಸೇರಿ ಇತರೆ​​ ಪ್ಯಾಕೆಟ್​ಗಳ ಮೇಲೆ ಈ ಕಲರ್​ ಚಿಹ್ನೆ, ಡಾಟ್​ ಇದ್ರೆ ಏನ್ ಅರ್ಥ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment