ನಟ ದರ್ಶನ್​​​ ಶಾಕಿಂಗ್​ ನಿರ್ಧಾರ; ತನ್ನ ಆಪ್ತರಿಗೆ ಗೇಟ್​ಪಾಸ್​ ನೀಡಲು ಕಾರಣವೇನು?

author-image
Ganesh Nachikethu
Updated On
‘ನಾನು ಬದುಕಿರೋ ತನಕ ದರ್ಶನ್​​ ನನ್ನ ಹಿರಿಯ ಮಗನೇ’- ನೋವು ತೋಡಿಕೊಂಡ ಸುಮಲತಾ!
Advertisment
  • ಲಾಂಗ್​​ ಬ್ರೇಕ್​ ನಂತರ ನಟ ದರ್ಶನ್​​ ʻದಿ ಡೆವಿಲ್ʼ ಶೂಟಿಂಗ್‌!
  • ಸದ್ಯದಲ್ಲೇ ಮೈಸೂರಿನಲ್ಲಿ ದಿ ಡೆವಿಲ್ʼ ಸಿನಿಮಾ ಶೂಟಿಂಗ್ ಶುರು
  • ಡೆವಿಲ್ ಚಿತ್ರೀಕರಣಕ್ಕೆ ಮುನ್ನವೇ ದರ್ಶನ್ ಮಹತ್ವದ ನಿರ್ಧಾರ

ಲಾಂಗ್​​ ಬ್ರೇಕ್​ ನಂತರ ನಟ ದರ್ಶನ್​​ ʻದಿ ಡೆವಿಲ್ʼ ಶೂಟಿಂಗ್‌ಗೆ ಎಂಟ್ರಿ ನೀಡುತ್ತಿದ್ದಾರೆ. ಸದ್ಯದಲ್ಲೇ ಮೈಸೂರಿನಲ್ಲಿ ಶೂಟಿಂಗ್ ಶುರುವಾಗಲಿದೆ. ಡೆವಿಲ್ ಚಿತ್ರೀಕರಣ ಶುರುವಾಗೋ ಮುನ್ನವೇ ನಟ ದರ್ಶನ್​ ಅವರು ತಮ್ಮ ಆಪ್ತರನ್ನು ಇನ್‌ಸ್ಟಾಗ್ರಾಮ್​​ನಲ್ಲಿ ಅನ್​ಫಾಲೋ ಮಾಡಿದ್ದಾರೆ.

ಈ ಹಿಂದೆ ನಟ ದರ್ಶನ್​​ ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ 6 ಮಂದಿಯನ್ನು ಫಾಲೋ ಮಾಡುತ್ತಿದ್ದರು. ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ಅವಿವಾ ಅಭಿಷೇಕ್​​, ಡಿ ಕಂಪನಿ, ದಿನಕರ್ ತೂಗುದೀಪ್​​, ವಿನೀಶ್ ಅವರನ್ನು ಫಾಲೋ ಮಾಡುತ್ತಿದ್ದರು. ಈಗ ಎಲ್ಲರನ್ನೂ ಅನ್​ಫಾಲೋ ಮಾಡಿದ್ದಾರೆ. ದರ್ಶನ್​ ಈ ನಿರ್ಧಾರ ಭಾರೀ ಚರ್ಚೆಗೆ ಗ್ರಾಸವಾಗಿದೆ.

publive-image

ಇನ್ನೂ, ಮಾರ್ಚ್ 12ರಿಂದ 15ರ ವರೆಗೆ ಮೈಸೂರಿನಲ್ಲಿ ‘ದಿ ಡೆವಿಲ್’ ಚಿತ್ರದ ಶೂಟಿಂಗ್ ನಡೆಯಲಿದೆ. ಮಾ.12ರಿಂದ ಮಾ.14ರವರೆಗೆ ಸರ್ಕಾರಿ ಅಥಿತಿ ಗೃಹದಲ್ಲಿ ಶೂಟಿಂಗ್​ ಆಗಲಿದೆ. ಮಾ.15ರಂದು ಲಲಿತಮಹಲ್ ಪ್ಯಾಲೆಸ್‌ನಲ್ಲಿ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ.

ಇದನ್ನೂ ಓದಿ:ಇನ್ಮುಂದೆ ಗೂಗಲ್​​ ಪೇ, ಫೋನ್​​ ಪೇ ಬಳಸಲು ಮೊಬೈಲ್​​​ ಬೇಡ! ಶಾಪಿಂಗ್​ ಈಗ ಮತ್ತಷ್ಟು ಸುಲಭ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment