ದರ್ಶನ್ ಬಳಸುತ್ತಿರುವ ಸ್ಮಾರ್ಟ್‌ಫೋನ್ ಮಾಡೆಲ್ ಯಾವುದು? ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Veena Gangani
Updated On
ದರ್ಶನ್ ಬಳಸುತ್ತಿರುವ ಸ್ಮಾರ್ಟ್‌ಫೋನ್ ಮಾಡೆಲ್ ಯಾವುದು? ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಥಾಯ್ಲೆಂಡ್‌ಗೆ ತೆರಳಿದ ಸ್ಯಾಂಡಲ್​ವುಡ್​ ನಟ ದರ್ಶನ್
  • ನಟ ದರ್ಶನ್​ ಬಳಸುವ ಫೋನ್​ ಬೆಲೆ ಎಷ್ಟು ಗೊತ್ತಾ?
  • ನಾಳೆ ಡೆವಿಲ್​ ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್

ನಟ ದರ್ಶನ್​ ಅವರ ಅಭಿಮಾನಿಗಳ ಬಗ್ಗೆ ಹೇಳಬೇಕಾಗಿಲ್ಲ. ಅದೆಷ್ಟೋ ಫ್ಯಾನ್ಸ್​ ನಟ ದರ್ಶನ್​ ಅವರನ್ನೇ ಫಾಲೋ ಮಾಡ್ತಾ ಇರುತ್ತಾರೆ. ನೆಚ್ಚಿನ ನಟ ಧರಿಸಿದ ಬಟ್ಟೆ, ವಾಚ್, ಶೂ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ಗಮನಿಸುತ್ತಲೇ ಇರುತ್ತಾರೆ.

ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್​ ಬಾಕ್ಸ್​ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್

publive-image

ಇದೀಗ ಸೋಷಿಯಲ್​ ಮೀಡಿಯಾದಲ್ಲಿ ನಟ ದರ್ಶನ್​ ಅವರು ಬಳಸುತ್ತಿರೋ ಫೋನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನಟ ದರ್ಶನ್​ ಧರಿಸುವ ಬಟ್ಟೆ, ವಾಚ್, ಕಾರು ಎಲ್ಲವೂ ಬಹಳ ದುಬಾರಿ. ಇದರ ಜೊತೆಗೆ ದುಬಾರಿ ಬೆಲೆಯ ಫೋನ್​ನನ್ನು ನಟ ದರ್ಶನ್​ ಅವರು ಬಳಸುತ್ತಿದ್ದಾರೆ ಎಂದರೆ ನೀವು ನಂಬ್ತೀರಾ?

publive-image

ಸದ್ಯ ನಟ ದರ್ಶನ್​ ಡೆವಿಲ್ ಸಿನಿಮಾ ಶೂಟಿಂಗ್​ಗಾಗಿ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಈ ವೇಳೆ ಪುತ್ರ ವಿನೀಶ್ ಕೂಡ ಅಪ್ಪನ ಜೊತೆ ಹೋಗಿದ್ದಾನೆ. ಇನ್ನು, ಈ ವೇಳೆ ದರ್ಶನ್ ಕೈಯಲ್ಲಿದ್ದ ಮೊಬೈಲ್ ಫೋನ್ ಅಭಿಮಾನಿಗಳ ಗಮನ ಸೆಳೆದಿದೆ. ವಿಮಾನ ನಿಲ್ದಾಣದಲ್ಲಿ ದರ್ಶನ್ ಕಾಣಿಸಿಕೊಂಡಿರುವ ಫೋಟೋ, ವೀಡಿಯೋಗಳು ವೈರಲ್ ಆಗ್ತಿದೆ. ನೀಲಿ ಬಣ್ಣದ ಜೀನ್ಸ್ ಹಾಗೂ ಬಿಳಿ ಬಣ್ಣದ ಟೀ-ಶರ್ಟ್ ಧರಿಸಿ ದರ್ಶನ್ ಕಾಣಿಸಿಕೊಂಡಿದ್ದಾರೆ.


">July 16, 2025

ಈ ವೇಳೆ ಪಾಸ್‌ಪೋರ್ಟ್ ಜೊತೆ ದರ್ಶನ್ ಕೈಯಲ್ಲಿದ್ದ ರುಯಿ ರೆಡ್ ಕಲರ್ ಫೋನ್ ಅಭಿಮಾನಿಗಳ ಹುಬ್ಬೇರಿಸಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆ ಆ ಫೋನ್ ಯಾವುದು? ಅದರ ಬೆಲೆ ಎಷ್ಟು? ಎಂದು ಅಭಿಮಾನಿಗಳು ಗೂಗಲ್ ಮಾಡುತ್ತಿದ್ದಾರೆ. ಇನ್ನೂ ದರ್ಶನ್ ಕೈಯಲ್ಲಿ ಇರುವುದು ಹುವಾವೆ ಮೇಟ್ ಬ್ರ್ಯಾಂಡ್ ಫೋನ್ ಎನ್ನುವುದು ಗೊತ್ತಾಗುತ್ತಿದೆ. ಹುವಾವೆ ಮೇಟ್ ಫೋನ್ ಬೆಲೆ 1.50 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಹುವಾವೇಯ ಟ್ರೈ-ಫೋಲ್ಡ್ ಸ್ಮಾರ್ಟ್‌ಫೋನ್ ಬೆಲೆ 3,59,999 ಲಕ್ಷ ರೂಪಾಯಿದ್ದಾಗಿದೆ. ಸದ್ಯ ಅಕ್ಟೋಬರ್ ಕೊನೆಗೆ 'ಡೆವಿಲ್' ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ಜುಲೈ 19ರಂದು ಮೋಷನ್ ಪೋಸ್ಟರ್ ರಿಲೀಸ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment