ಫೋಟೋ ವೈರಲ್ ಬೆನ್ನಲ್ಲೇ ಇದೀಗ ಮತ್ತೊಂದು ವಿಡಿಯೋ
ರೌಡಿಶೀಟರ್‌ಗಳ ಜೊತೆ ಆರೋಪಿ ದರ್ಶನ್ ಸಖತ್ ಮಾತುಕತೆ
ದರ್ಶನ್ ಸೆಲ್ ಪಕ್ಕದಲ್ಲೆ ಇದ್ದಾನೆ ಕಾರ್ತಿಕೇಯನ್ ಹತ್ಯೆ ಆರೋಪಿ
ತೆರೆ ಮೇಲೆ ಹೀರೋ. ನಿಜ ಜೀವನದಲ್ಲಿ ವಿಲನ್. ಇದು ನಟ ದರ್ಶನ್‌ನ ಅಸಲಿ ಮುಖದ ಹಿಂದಿರೋ ಮುಖವಾಡ ಬದುಕು. ಅಭಿಮಾನಿಗಳಿಗೆ ಮಾದರಿಯಾಗಬೇಕಿದ್ದ ನಟನ ಕೈಗೆ ಈಗ ರಕ್ತದ ಕಲೆ ಅಂಟಿಕೊಂಡು ಛೀ ಥೂ ಅನ್ನುವಂತಾಗಿದೆ. ತಪ್ಪು ಯಾರೇ ಮಾಡಲಿ ಅದು ತಪ್ಪೇ. ಸ್ಟಾರ್ ಆದ್ರೂ ಸರಿ ಯಾರಾದ್ರೂ ಸರಿ. ಜೈಲು ಸೇರಿ 65 ದಿನ ಕಳೆದ್ರೂ ಕೂಡ ಯಾವ ಪಶ್ಚಾತ್ತಾಪ ದರ್ಶನ್‌ಗೆ ಕಾಡ್ತಾನೆ ಇಲ್ಲ. ಕಂಬಿ ಹಿಂದೆ ಅಲ್ಲ ಸ್ವಾಮಿ ಚೇರ್‌ನಲ್ಲಿ ಆರಾಮಾಗಿ ಕೂತ್ಕೊಂಡು ಟೀ ಕುಡಿಯೋ ದರ್ಶನ್ ರೌಡಿಶೀಟರ್‌ನೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತಾಡಿದ್ದಾರೆ.
ಇದನ್ನೂ ಓದಿ: ಚೆನ್ನಾಗಿದ್ದೀರಾ ಬಾಸ್.. ಹೂ ಚಿನ್ನ; ದರ್ಶನ್ ಬಿಂದಾಸ್ ಲೈಫ್‌ಗೆ ಹೊಸ ಟ್ವಿಸ್ಟ್; ವಿಡಿಯೋ ಕಾಲ್ ಮಾಡಿದ್ಯಾರು?
ಕೊಲೆ ಆರೋಪಿಗಳಿಗೆ ಜೈಲು ಜೈಲಾಗಿ ಇದ್ಯೋ, ಇಲ್ವೋ ಟೈಮ್ ಸ್ಪೆಂಡ್ ಮಾಡೋ ರೆಸಾರ್ಟ್ ಆಗಿದ್ಯೋ ಗೊತ್ತಿಲ್ಲ. ಕೊಲೆ ಆರೋಪಿಗಳಿಗೆಲ್ಲಾ ಕೇಳಿದಾಗೆಲ್ಲ ಸಿಗರೇಟ್, ಕಾಫಿ ಆರಾಮಾಗಿ ಕುತ್ಕೊಳಕ್ಕೆ ಚೇರ್. ಚಿತ್ರಹಿಂಸೆ, ಕರೆಂಟ್ ಶಾಕ್ ಕೊಟ್ಟು ರೇಣುಕಾಸ್ವಾಮಿಯನ್ನ ಕೊಲೆ ಮಾಡಿರೋ ಆರೋಪಿಗಳಿಗೆ ಕೂಡ ಜೈಲಿನಲ್ಲಿಯೇ ರಾಜ್ಯಾತಿಥ್ಯವೇ ಸಿಕ್ತಿದೆ. ಪರಪ್ಪನ ಅಗ್ರಹಾರ ಜೈಲು ಪಾಲಾಗಿರೋ ದರ್ಶನ್‌ಗೆ ಕೇಸ್‌ನಲ್ಲಿ ಚೂರು ಪಶ್ಚಾತ್ತಾಪ ಕಾಣ್ತಿಲ್ಲ. ಹೊರಗೆ ರೇಣುಕಾಸ್ವಾಮಿ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ರೆ. ಜೈಲಿನ ಒಳಗೆ ದರ್ಶನ್ ಬಿಂದಾಸ್ ಜೀವನ ನಡೆಸ್ತಿದ್ದಾರೆ.
ಬಲ ಕೈಯಲ್ಲಿ ಟೀ ಕಪ್.. ಎಡಗೈಯಲ್ಲಿ ಸಿಗರೇಟ್
ಚೇರ್‌ನಲ್ಲಿ ಆರಾಮಾಗಿ ರೌಡಿಶೀಟರ್‌ಗಳ ಜೊತೆ ಕೂತ್ಕೊಂಡು ಕಾಫಿ ಕುಡಿಯುತ್ತಿದ್ದ ದರ್ಶನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಗ ರೌಡಿಶೀಟರ್ ಜೊತೆಗೆ ವಿಡಿಯೋ ಕಾಲ್‌ನಲ್ಲಿ ಹಾಯ್ ಚಿನ್ನ ಹೇಗಿದ್ಯಾ ಅಂತಾ ಮಾತನಾಡುತ್ತಿರೋ ವಿಡಿಯೋವೊಂದು ಹಲ್‌ಚಲ್ ಎಬ್ಬಿಸಿದೆ. ರಾಜಾತಿಥ್ಯದ ಜೊತೆಗೆ ಹೊರ ಜಗತ್ತನ್ನ ವಿಡಿಯೋ ಕಾಲ್‌ನಲ್ಲಿ ನೋಡಬಹುದು ಅನ್ನೋದಕ್ಕೆ ಸಾಕ್ಷಿ ಸಿಕ್ಕಿದೆ. ಪುಡಿರೌಡಿ ಸತ್ಯ ಎಂಬುವವನ ಜೊತೆ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಡಿಯೋ ಈಗ ಪರಪ್ಪನ ಅಗ್ರಹಾರದ ಅಸಲಿಯತ್ತನ್ನ ತೆರೆದಿಟ್ಟಿದೆ.
ನಟ ದರ್ಶನ್‌ಗೆ ವಿಡಿಯೋ ಕಾಲ್ ಮಾಡಿರೋದು ಸತ್ಯ ಎಂಬ ರೌಡಿ. ಇವನು ಬ್ಯಾಡರಹಳ್ಳಿ ರೌಡಿಶೀಟರ್ ಜಾನಿ @ ಜನಾರ್ದನ್ ಮಗ ಸತ್ಯ. ವಿಡಿಯೋ ಕಾಲ್‌ನಲ್ಲಿ ಇರೋನು ಇದೇ ರೌಡಿಶೀಟರ್ ಮಗ ಸತ್ಯ. ಇತ್ತೀಚಿಗೆ ವಿದ್ಯಾರ್ಥಿಗಳಿಗೆ ಉಲ್ಟಾ ಮಚ್ಚಲ್ಲಿ ಹೊಡೆದು ಜೈಲು ಸೇರಿದ್ದ ಈತ, ಜಾಮೀನಲ್ಲಿ ಹೊರಗಿರೋ ಇವ್ನು, ಧರ್ಮನಿಗೆ ವಿಡಿಯೋ ಕಾಲ್ ಮಾಡಿದ್ದ. ಧರ್ಮ ರಿಯಲ್ ಎಸ್ಟೇಟ್ ಉದ್ಯಮಿ ಕಾರ್ತಿಕೇಯನ್ ಹತ್ಯೆ ಆರೋಪಿ. ಆರೋಪಿ ಧರ್ಮನ ಬಳಿಯಿದ್ದ ಫೋನ್‌ಗೆ ಸತ್ಯ ವಿಡಿಯೋ ಕಾಲ್ ಮಾಡಿದ್ದು, ಈ ವೇಳೆ ಸತ್ಯನ ಜೊತೆ ಮಾತಾಡಲು ದರ್ಶನ್‌ಗೆ ಧರ್ಮ ಫೋನ್ ನೀಡಿದ್ದಾನೆ. ಅದರಲ್ಲಿ ಸತ್ಯನೊಂದಿಗೆ ಕೊಲೆ ಆರೋಪಿ ದರ್ಶನ್ ಮಾತನಾಡಿದ್ದಾರೆ. ಈ ವೇಳೆ ಏನ್ ಚಿನ್ನ ಹೆೇಗಿದ್ದೀಯಾ? ಅಂತ ದರ್ಶನ್‌ರಿಂದ ಸತ್ಯನ ಕುಶಲೋಪರಿ ವಿಚಾರಿಸಿದ್ದಾರೆ.
ಇದನ್ನೂ ಓದಿ: ದರ್ಶನ್‌ಗೆ ವಿಡಿಯೋ ಕಾಲ್ ಮಾಡಿದ ಸೀಕ್ರೆಟ್ ಬಯಲು.. ಬಿಲ್ಡಪ್ ಕೊಟ್ಟು ಸಿಕ್ಕಿಬಿದ್ದಿದ್ದೇ ರೋಚಕ ಸತ್ಯ!
ಮಾರ್ಕೆಟ್ ಧರ್ಮ ದರ್ಶನ್ ನಮ್ ಸೆಲ್‌ನ ಪಕ್ಕದಲ್ಲೇ ಇರೋದು ತೋರಿಸ್ತೀನಿ ಎಂದಿದ್ದ ಆತ ದರ್ಶನ್ ಹತ್ರ ಸತ್ಯನಿಗೆ ಹಾಯ್ ಹೇಳಿಸಿದ್ದ. ಇದನ್ನ ರೆಕಾರ್ಡ್ ಮಾಡ್ಕೊಂಡು ರೌಡಿಶೀಟರ್ ಸತ್ಯ ಕಲಾಸಿಪಾಳ್ಯ ಏರಿಯಾ ಹುಡುಗರಿಗೆ ಕಳಿಸಿ ಫುಲ್ ಬಿಲ್ಡಪ್ ತಗೊಂಡಿದ್ದ. ಜೈಲು ನರಕ ಅಂತಾ ಬೇರೆ ಆರೋಪಿಗಳು ಹೇಳಿದ್ರೆ ದರ್ಶನ್‌ಗೆ ಮಾತ್ರ ಸುಖದ ಜೀವನವೇ ಸಿಗ್ತಿದೆ. ಇಷ್ಟು ದಿನ ಆದ್ರೂ ತಪ್ಪಿನ ಅರಿವೇ ತಲೆಗೆ ಹೋಗ್ತಿಲ್ವೋ ಅಥವಾ ದುಡ್ಡಿನ ಅಹಂ ಜಾಸ್ತಿಯಾಗ್ತಿದ್ಯೋ ಗೊತ್ತಿಲ್ಲ. ವಿಡಿಯೋ ಹಾಗೂ ಫೋಟೋಗಳು ನೋಡ್ತಿದ್ರೆ ಕೊಲೆ ಆರೋಪಿಗಳಿಗೆ ಜೈಲಾಧಿಕಾರಿಗಳೇ ಆತಿಥ್ಯ ಕೊಡ್ತಿದ್ದಾರಾ ಎಂಬ ಅನುಮಾನ ಶುರುವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ