/newsfirstlive-kannada/media/post_attachments/wp-content/uploads/2025/06/darshan22.jpg)
ಸ್ಯಾಂಡಲ್ವುಡ್ ನಟ ದರ್ಶನ್ ದಂಪತಿ ಕೇರಳದ ಕೊಟ್ಟಿಯೂರು ಮಹಾದೇವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಲವರ್ ಬಾಯ್ ಆಗಿ ಬದಲಾದ ರಕ್ಷಕ್ ಬುಲೆಟ್; ರಮೋಲ ಜೊತೆ ಪ್ರೀತಿಯಲ್ಲಿ ಬಿದ್ದೇ ಬಿಟ್ನಾ..?
ಈ ಹಿಂದೆ ಕೇರಳದ ಶ್ರೀ ಮಾಡಾಯಿ ಕಾವು ಭಗವತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ನಟ ದರ್ಶನ್ ಇದೀಗ ಕುಟುಂಬ ಸಮೇತರಾಗಿ ಮಹಾದೇವ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ.
ಮಳೆಯಲ್ಲೇ ಮಹಾದೇವನ ದರ್ಶನ ಮಾಡಿರುವ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಮಹಾದೇವನಿಗೆ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನೂ, ಈ ದೇವಸ್ಥಾನದ ವಿಶೇಷತೆ ಏನೆಂದರೆ, ವರ್ಷದಲ್ಲಿ ಎರಡು ತಿಂಗಳ ಕೆಲವು ದಿನಗಳು ಮಾತ್ರ ತೆರೆಯಲಾಗುತ್ತದೆ. ಅಲ್ಲದೇ 27ರಿಂದ 28 ದಿನಗಳವರೆಗೂ ಭಕ್ತರ ಭೇಟಿಗೆ ಅವಕಾಶ ಕಲ್ಪಿಸಲಾಗಿರುತ್ತದೆ.
ಸಾಮಾನ್ಯವಾಗಿ ಜೂನ್ 8ರಿಂದ ಜುಲೈ 4ರ ತನಕ ಈ ದೇವಸ್ಥಾನ ಭಕ್ತಾದಿಗಳ ಭೇಟಿಗೆ ಮುಕ್ತವಾಗಿರುತ್ತದೆ. ಇಕ್ಕರೆ ಕೊಟ್ಟಿಯೂರು ದೇವಸ್ಥಾನ ವರ್ಷ ಪೂರ್ತಿ ತೆರೆದಿದ್ದರೂ ಅಕ್ಕರೆ ಕೊಟ್ಟಿಯೂರು ಬರೀ 28 ದಿನ ತೆರೆದಿರುತ್ತದೆ. ಹೀಗಾಗಿ ಜೂನ್ ತಿಂಗಳಲ್ಲಿ ಈ ದೇವಸ್ಥಾನಕ್ಕೆ ಭಕ್ತರು ಮಾತ್ರವಲ್ಲದೆ ಪ್ರವಾಸಿಗರ ದಂಡೇ ಹರಿದುಬರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ