Advertisment

ಆಸ್ಪತ್ರೆಗೆ ದಾಖಲಾದ ನಟ ದರ್ಶನ್‌.. BGS ಗೋಡೆ, ಅಂಗಡಿಗಳ ಮೇಲೆ D ಬಾಸ್‌, D ಬಾಸ್‌ ಜೈಕಾರ!

author-image
admin
Updated On
ದರ್ಶನ್ ಭೇಟಿಯಾಗಲು 7 ಜನರಿಗೆ ಮಾತ್ರ ಅವಕಾಶ; ಗೌಪ್ಯತೆ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಮನವಿ
Advertisment
  • ಆಸ್ಪತ್ರೆಗೆ ದರ್ಶನ್ ಬರುವ ಸುದ್ದಿ ಕೇಳಿ ಬಂದ ಅಭಿಮಾನಿಗಳು
  • ಆಸ್ಪತ್ರೆ ಗೋಡೆ, ಅಕ್ಕ-ಪಕ್ಕದ ಅಂಗಡಿ ಮೇಲೆ ಡಿ ಬಾಸ್, ಡಿ ಬಾಸ್‌ ಕೂಗು
  • ಭದ್ರತೆಗಾಗಿ KSRP ತುಕಡಿ, ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನೇಮಕ

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿದ್ದ ನಟ ದರ್ಶನ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬೆನ್ನು ನೋವಿನ ಹಿನ್ನೆಲೆಯಲ್ಲಿ ರಿಲೀಸ್ ಆದ ದರ್ಶನ್ ಒಂದು ದಿನ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು. ಇದೀಗ ನೋವು ವಿಪರೀತ ಕಾಡಿದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಂಗೇರಿ ಬಳಿಯ BGS ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ದರ್ಶನ್ ಅವರಿಗೆ ಚಿಕಿತ್ಸೆ ಆರಂಭಿಸಿದೆ.

Advertisment

ಕುಟುಂಬ ಸದಸ್ಯರು, ಸ್ನೇಹಿತ ಧನ್ವೀರ್ ಜೊತೆ ನಟ ದರ್ಶನ್ ಅವರು ಬಿಜಿಎಸ್‌ ಆಸ್ಪತ್ರೆಗೆ ಆಗಮಿಸಿದರು. ಬಿಜಿಎಸ್‌ ಆಸ್ಪತ್ರೆಗೆ ದರ್ಶನ್ ಬರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಜಮಾಯಿಸಿದ್ದರು. ಆಸ್ಪತ್ರೆಯ ಕಾಂಪೌಂಡ್‌ ಗೋಡೆಗಳ ಮೇಲೆ ನಿಂತು ಡಿಬಾಸ್ ಎಂದು ಜೈಕಾರ ಹಾಕಿದ್ದಾರೆ.

publive-image

ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರು ಕುಂಟುತ್ತಾ ಆಸ್ಪತ್ರೆಯ ಒಳಗೆ ಹೋಗಿದ್ದಾರೆ. ಆಸ್ಪತ್ರೆಯ ಮುಂದೆ ಕೆಂಗೇರಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದು, ದರ್ಶನ್ ಅಭಿಮಾನಿಗಳನ್ನು ಚದುರಿಸಿದ್ದಾರೆ. ಆಸ್ಪತ್ರೆ ಗೋಡೆ, ಅಕ್ಕ-ಪಕ್ಕದ ಅಂಗಡಿ ಮೇಲೆ ಫ್ಯಾನ್ಸ್‌ ನಿಂತಿದ್ದು, ಡಿಬಾಸ್, ಡಿ ಬಾಸ್ ಎಂದು ಕೂಗಿದ್ದಾರೆ.

ಇದನ್ನೂ ಓದಿ: ಬೆನ್ನು ನೋವಿಗೆ ದರ್ಶನ್ ಒದ್ದಾಟ.. ತಜ್ಞ ವೈದ್ಯರನ್ನು ಸಂಪರ್ಕಿಸಿದ ಕುಟುಂಬಸ್ಥರು; ಯಾವ ಆಸ್ಪತ್ರೆಗೆ ದಾಖಲು? 

Advertisment

ದರ್ಶನ್ ದಾಖಲಾಗಿರುವ ಬಿಜಿಎಸ್ ಆಸ್ಪತ್ರೆಗೆ ಎಸಿಪಿ ಬಸವರಾಜು ಅವರ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಆಸ್ಪತ್ರೆ ಮುಂಭಾಗದಲ್ಲಿ ಜಮಾಯಿಸಿದ್ದ ದರ್ಶನ್ ಅಭಿಮಾನಿಗಳನ್ನ ಪೊಲೀಸರು ಚದುರಿಸಿದ್ದು, ಆಸ್ಪತ್ರೆ ಎದುರು KSRP ತುಕಡಿ, ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಚಿಕಿತ್ಸೆ ಬಗ್ಗೆ ವೈದ್ಯರು ಹೇಳಿದ್ದೇನು?
ಆಸ್ಪತ್ರೆಗೆ ದಾಖಲಾದ ಕೂಡಲೇ ನಟ ದರ್ಶನ್‌ಗೆ ಹಲವು ವೈದ್ಯಕೀಯ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಪ್ರಮುಖವಾಗಿ ಬೆನ್ನುನೋವು ಕಾಡ್ತಿರೋ ಹಿನ್ನೆಲೆಯಲ್ಲಿ ಮೊದಲಿಗೆ ಫಿಸಿಯೋ ಥೆರಪಿ ಮಾಡಲಾಗುತ್ತಿದೆ. ಫಿಸಿಯೋ ಥೆರಪಿಯಲ್ಲಿ ಬೆನ್ನು ನೋವು ಗುಣವಾಗದಿದ್ದಲ್ಲಿ ಸರ್ಜರಿ ಮಾಡಬೇಕಾಗುತ್ತದೆ. ECG, ಸ್ಕ್ಯಾನಿಂಗ್, BP, ಶುಗರ್, ರಕ್ತ ಪರೀಕ್ಷೆ, ಲಿವರ್ ಫಂಕ್ಷನ್ ಟೆಸ್ಟ್ (LFT) ಮಾಡಿ ನಾಳೆಯೊಳಗೆ ದರ್ಶನ್ ಕುಟುಂಬಸ್ಥರಿಗೆ ವರದಿ ನೀಡಲಾಗುತ್ತದೆ.

ದರ್ಶನ್​ಗೆ ಚಿಕಿತ್ಸೆ ನೀಡಲಿರುವ ಹಿರಿಯ ತಜ್ಞ ಡಾ. ನವೀನ್ ಅವರನ್ನು ನಿನ್ನೆ ಸಂಜೆಯೇ ದರ್ಶನ್ ಕುಟುಂಬಸ್ಥರು ಸಂಪರ್ಕ ಮಾಡಿದ್ದರು. ಈ ಹಿಂದಿನ ಸ್ಕ್ಯಾನಿಂಗ್ ರಿಪೋರ್ಟ್ ನೋಡಿ ವೈದ್ಯರು ಸ್ಟ್ರಕ್ಚರ್ ಆ್ಯಕ್ಟಿವಿಟಿ ಮಾಡಿಸಲಿದ್ದಾರೆ. ರೋಗಿಯು ಫಿಸಿಯೋಥೆರಪಿಯನ್ನು ಬೇರೆ ಕಡೆ ಮಾಡಿಸಿಕೊಳ್ಳಲು ಅವಕಾಶವಿದೆ. ನಿರ್ಧಾರ ಅವರಿಗೆ ಬಿಟ್ಟಿದ್ದು ಎಂದು ನ್ಯೂಸ್ ಫಸ್ಟ್‌ಗೆ ನ್ಯೂರೋಲಾಜಿಸ್ಟ್ ಡಾ. ನವೀನ್ ಮಾಹಿತಿ ನೀಡಿದ್ದಾರೆ. ದರ್ಶನ್‌ಗೆ ಫಿಸಿಯೋ ಥೆರಪಿನಾ? ಅಥವಾ ಸರ್ಜರಿನಾ ಅನ್ನೋ ಬಗ್ಗೆ ಇಂದೇ ನಿರ್ಧಾರ ಮಾಡಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment
Advertisment