/newsfirstlive-kannada/media/post_attachments/wp-content/uploads/2025/04/DARSHAN_VAMANA_9.jpg)
ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗೆಳೆಯನ ಸಿನಿಮಾ ದರ್ಶನ್ ಸಾಥ್ ನೀಡಿದ್ದು, ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ.
ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ನಟ ದರ್ಶನ್ ಆಗಮಿಸಿದ್ದು, ನಟ ಚಿಕ್ಕಣ್ಣ ಸೇರಿದಂತೆ ಆಪ್ತರು ಸಾಥ್ ನೀಡಿದ್ದಾರೆ.
ನಗರದ ಜಿಟಿ ಮಾಲ್‌ನಲ್ಲಿ ನಟ ದರ್ಶನ್ ಅವರು ವಾಮನ ಸಿನಿಮಾ ನೋಡಲು ಬಂದಾಗ ದರ್ಶನ್ ಅವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಲಾಯಿತು.
ಬೆನ್ನು ನೋವಿನಲ್ಲೂ ದರ್ಶನ್ ಅವರು ಧನ್ವೀರ್ ಅಭಿನಯದ ವಾಮನ ಸಿನಿಮಾ ಶುಭ ಹಾರೈಸಲು ಆಗಮಿಸಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಬೆನ್ನು ನೋವಿನಿಂದ ದರ್ಶನ್ ಒದ್ದಾಡಿದರು.
ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ನಿನ್ನೆ ನಡೆದ ಕೋರ್ಟ್ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ್ದರು.
ಧನ್ವೀರ್ ನಟನೆಯ ನಾಲ್ಕನೇ ಸಿನಿಮಾ ವಾಮನ ಆಗಿದೆ. ಈ ಚಿತ್ರದ ಅಮ್ಮನ ಹಾಡನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡಿದ್ದಾರು. ಇದೇ ವೇಳೆ ಈ ಚಿತ್ರದ ಮುದ್ದು ರಾಕ್ಷಸಿ ಹಾಡು ನನಗೆ ತುಂಬಾ ಇಷ್ಟ ಹೋಗಿ ನೋಡಿ ಎಂದು ಶುಭ ಹಾರೈಸಿದ್ದರು.
ಇದನ್ನೂ ಓದಿ: ರೈಲ್ವೆ ಹಳಿಗಳ ನಡುವೆ ಮಲಗಿ ರೀಲ್ಸ್ ಮಾಡಿದ ರೀಲ್ಪುತ್ರ.. ವಿಡಿಯೋಗೆ 70K ಹೆಚ್ಚು ವೀವ್ಸ್, ಆದ್ರೆ ಯುವಕ ಏನಾದ?
ನಟ ದರ್ಶನ್ ತೂಗುದೀಪ ಮತ್ತು ಧನ್ವೀರ್ ಅವರ ಮಧ್ಯೆ ಮೊದಲಿನಿಂದ ಒಂದು ಒಳ್ಳೆಯ ಸಂಬಂಧ ಇದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. ಅಂತಹ ಕಷ್ಟದ ಸಮಯದಲ್ಲಿ ನಟ ದರ್ಶನ್ ಮತ್ತು ಅವರ ಕುಟುಂಬದ ಜೊತೆ ಧನ್ವೀರ್ ಬೆಂಬಲವಾಗಿ ನಿಂತಿದ್ದರು.
ಇದೀಗ ರಿಲೀಸ್‌ಗೆ ಸಜ್ಜಾಗಿರುವ ಧನ್ವೀರ್ ನಟನೆಯ ʻವಾಮನʼ ಸಿನಿಮಾ ಪ್ರೀಮಿಯರ್ ಶೋಗೆ ಖುದ್ದು ದರ್ಶನ್ ಅವರೇ ಆಗಮಿಸಿ ಪ್ರಾಣ ಸ್ನೇಹಿತನ ಸಿನಿಮಾದ ಸಕ್ಸಸ್ ಆಗಲಿ ಎಂದು ಹಾರೈಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ