/newsfirstlive-kannada/media/post_attachments/wp-content/uploads/2024/12/DARSHAN_CAR.jpg)
ಒಂದೂವರೆ ತಿಂಗಳಿಂದ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ದರ್ಶನ್ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ದರ್ಶನ್ ಅವರು ಮನೆಗೆ ಹೋಗದೆ ಸೀದಾ ಸೆಷನ್ ಕೋರ್ಟ್‌ಗೆ ತೆರಳಿದ್ದಾರೆ.
ಬೆನ್ನು ನೋವಿನ ಶಸ್ತ್ರ ಚಿಕಿತ್ಸೆಯ ಹಿನ್ನೆಲೆಯಲ್ಲಿ ದರ್ಶನ್ ಅವರಿಗೆ ಹೈಕೋರ್ಟ್ 6 ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ದರ್ಶನ್ ಅವರು ಸೆಷನ್ ಕೋರ್ಟ್‌ಗೆ ಬಂದು ಕೆಲ ಕಾನೂನು ಪ್ರಕ್ರಿಯೆಗಳನ್ನ ಮುಗಿಸಿದ್ದಾರೆ.
ಡಿಸೆಂಬರ್ 13ರಂದು ದರ್ಶನ್ ಅವರಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಜಾಮೀನು ಪಡೆದಿರುವ ದರ್ಶನ್ ಅವರು ಒಂದಷ್ಟು ಬಾಂಡ್ ಪ್ರಕ್ರಿಯೆ ಮುಗಿಸಬೇಕಿತ್ತು. ಇದರ ಜೊತೆಗೆ ಕೋರ್ಟ್‌ಗೆ ದರ್ಶನ್ ಅವರು ಷರತ್ತುಗಳ ಬಗ್ಗೆ ಸ್ಪಷ್ಟನೆ ಪಡೆಯಲಿದ್ದಾರೆ.
ಇದನ್ನೂ ಓದಿ: ನಟ ದರ್ಶನ್ಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್; ಆದೇಶ ಪ್ರತಿಯಲ್ಲೇನಿದೆ?
57 ಸಿಸಿಹೆಚ್ ಕೋರ್ಟ್ ಒಳಗೆ ಬಂದ ದರ್ಶನ್ ಅವರು ನ್ಯಾಯಾಧೀಶರು ಬೆಂಚ್‌ನಲ್ಲಿ ಇಲ್ಲದ ಕಾರಣ ಕಾದು ಕುಳಿತಿದ್ದರು. ಬ್ಲೂ ಜೀನ್ಸ್, ವೈಟ್ ಟೀಶರ್ಟ್‌ನಲ್ಲಿ ದರ್ಶನ್ ಅವರಿದ್ದು, ವಕೀಲ ಸುನೀಲ್, ನಟರಾದ ಧನ್ವೀರ್, ದಿನಕರ್ ತೂಗುದೀಪ ಸಾಥ್ ನೀಡಿದ್ದರು. ಉಳಿದ ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಧೀಶರು, ಮುಗಿಯುವವರೆಗೂ ಇರಿ ಎಂದು ದರ್ಶನ್ ಅವರನ್ನು ಕೂರಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ