/newsfirstlive-kannada/media/post_attachments/wp-content/uploads/2025/01/darshan.jpg)
ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಅಭಿಮಾನಿಗಳು ಹಬ್ಬದಂತೆ ಆಚರಿಸಲು ಸಿದ್ಧವಾಗಿದ್ದಾರೆ. ಹೀಗಿರುವಾಗಲೇ ದಚ್ಚು ಫ್ಯಾನ್ಸ್ಗೆ ಶಾಕಿಂಗ್ ವಿಚಾರ ಒಂದು ಹೊರಬಿದ್ದಿದೆ. ಅದೇನು ಎಂಬುದರ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ನಟ ದರ್ಶನ್ ಜೈಲಿನಿಂದ ಆಚೆ ಬಂದ ಬೆನ್ನಲ್ಲೇ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು. ಇನ್ಮುಂದೆ ನಮ್ ಬಾಸ್ ಅನ್ನ ಮತ್ತೆ ದೊಡ್ಡ ಪರದೆ ಮೇಲೆ ನೋಡಬಹುದು ಅಂತ ಅಂದುಕೊಂಡಿದ್ದ ಅಭಿಮಾನಿಗಳಿಗೆ ದಾಸ ಶಾಕಿಂಗ್ ಸುದ್ದಿಯನ್ನ ಕೊಟ್ಟಿದ್ದಾರೆ.
ಒಪ್ಪಿದ್ದ ಸಿನಿಮಾಗಳ ಅಡ್ವಾನ್ಸ್ ವಾಪಸ್ ಕೊಟ್ಟ ದರ್ಶನ್!?
ಇದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಅಂತಲೇ ಹೇಳಬಹುದು. ನಟ ದರ್ಶನ್ ಈ ಹಿಂದೆ ಒಪ್ಪಿಕೊಂಡಿದ್ದ ಸಿನಿಮಾ ತಂಡ ಕೊಟ್ಟ ಅಡ್ವಾನ್ಸ್ ಹಿಂತಿರುಗಿಸಿದ್ದಾರಂತೆ. ಡೆವಿಲ್ ನಂತರ ಇರೋ ಸಿನಿಮಾಗಳ ಹಣವನ್ನ ದರ್ಶನ್ ವಾಪಸ್ ಮಾಡಿದ್ದಾರೆ ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.
ಇದನ್ನೂ ಓದಿ: ಐಶ್ವರ್ಯಾ ಇಂದ ಮೋಕ್ಷಿತಾ ಆಗಿದ್ದು ಹೇಗೆ? ಹೆಸರು ಬದಲಾವಣೆ ಹೇಗೆ ಮಾಡಿಕೊಂಡರು?
ಇನ್ನು ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣದ ಸಿನಿಮಾದಲ್ಲಿ ದರ್ಶನ್ ನಟಿಸಬೇಕಿತ್ತು. ಈ ಸಿನಿಮಾದಲ್ಲಿ ನಟಿಸೋದಕ್ಕೆ ದರ್ಶನ್ ಅಡ್ವಾನ್ಸ್ ಕೂಡ ಪಡೆದಿದ್ದರು. ಆದ್ರೆ ಇದೀಗ ಆ ದುಡ್ಡನ್ನ ದರ್ಶನ್ ವಾಪಸ್ ಕೊಟ್ಟಿದ್ದಾರಂತೆ. ಹೀಗಿರುವಾಗ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ಸಿನಿಮಾ ಕೂಡ ನಿಲ್ಲುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ. ಈ ಪ್ರೊಡಕ್ಷನ್ ಅಡಿ ತಯಾರಾಗಬೇಕಿದ್ದ ದರ್ಶನ್ ಹಾಗೂ ಜೋಗಿ ಪ್ರೇಮ್ ಸಿನಿಮಾಗೆ ಬ್ರೇಕ್ ಬಿದ್ದಂತೆ ಆಗಿದೆ.
ಬಾಸ್ಗೆ ಬೆನ್ನು ನೋವಿನಿಂದ ರಿಲೀಫ್ ಸಿಕ್ಕಿದೆ.. ತಮ್ಮ ನೆಚ್ಚಿನ ಹೀರೋ, ತೆರೆ ಮೇಲೆ ಬರ್ತಾರೆ, ನೋಡಿ ಸಂಭ್ರಮಿಸಬೇಕು ಅಂತಾ ಕಾಯುತ್ತಿದ್ದ ಅಭಿಮಾನಿಗಳಿಗೆ ಇದು ನಿಜವಾಗ್ಲು ಶಾಕಿಂಗ್ ಸುದ್ದಿನೇ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ