ದರ್ಶನ್​ ಪ್ರಾಣ ಸ್ನೇಹಿತನಿಗೆ ಮತ್ತೊಂದು ಆನೆ ಬಲ.. ನಟ ಧನ್ವೀರ್​ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

author-image
Veena Gangani
Updated On
ದರ್ಶನ್​ ಪ್ರಾಣ ಸ್ನೇಹಿತನಿಗೆ ಮತ್ತೊಂದು ಆನೆ ಬಲ.. ನಟ ಧನ್ವೀರ್​ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?
Advertisment
  • ಥಿಯೇಟರ್​ಗೆ ಬಂದು ಕನ್ನಡ ಸಿನಿಮಾ ನೋಡಿ ಎಂದ ವಿಜಯಲಕ್ಷ್ಮೀ ದರ್ಶನ್
  • ವಾಮನ ಚಿತ್ರದ ಎಮೋಷನಲ್ ಸಾಂಗ್ ಬಿಡುಗಡೆ ಮಾಡಿದ ವಿಜಯಲಕ್ಷ್ಮೀ
  • ಸ್ಯಾಂಡಲ್‌ವುಡ್‌ನ ನಟ ಧನ್ವೀರ್ ಗೌಡಗೆ ಸಾಥ್ ನೀಡಿದ ದರ್ಶನ್​ ಕುಟುಂಬ

ಸ್ಯಾಂಡಲ್‌ವುಡ್‌ನ ನಟ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಗೌಡ ಅಭಿನಯದ ವಾಮನ ಚಿತ್ರದ ಅಮ್ಮನ ಹಾಡು ರಿಲೀಸ್ ಆಗಿದೆ. ಈ ಹಾಡನ್ನು ಡಿಜಿಟಲ್​ನಲ್ಲಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡಿದ್ದಾರೆ.

publive-image

ಕನ್ನಡದ ಹಿರಿಯ ನಟಿ ತಾರಾ ಅನುರಾಧಾ ಹಾಗೂ ನಟ ಧನ್ವೀರ್ ಅವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ತಾಯಿ ಹಾಗೂ ಮಗನ ನಡುವಿನ ಬಾಂಧವ್ಯದ ಬಗ್ಗೆ ಎತ್ತಿ ಹೇಳುವಂತಿದೆ. ಕಂಡ ಕನಸ್ಸು ರೂಪ ನೀನು ಎಂಬ ಸಾಲಿನೊಂದಿಗೆ ಈ ಹಾಡು ಶುರುವಾಗಿದೆ.

publive-image

ಇನ್ನೂ ವಿಶೇಷ ಎಂದರೆ ವಿಜಯಲಕ್ಷ್ಮೀ ದರ್ಶನ್‌ ಅವರಿಂದ ಈ ಹಾಡನ್ನು ರಿಲೀಸ್​ ಮಾಡಿಸಲಾಗಿದೆ. ಮತ್ತೊಂದು ವಿಶೇಷ ಎಂದರೆ ವಾಮನ ಚಿತ್ರದ ಅಮ್ಮನ ಹಾಡು ಬರುವ ಮುನ್ನ ಆರಂಭದಲ್ಲಿಯೇ ವಿಜಯಲಕ್ಷ್ಮೀ ದರ್ಶನ್‌ಗೆ ತುಂಬು ಹೃದಯದ ಧನ್ಯವಾದಗಳು ಅಂತ ಹಾಕಲಾಗಿದೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್​ಗೆ ಕಾಡಿದ ಅನಾರೋಗ್ಯ ಸಮಸ್ಯೆ; ಸವಾಲುಗಳು ಏನೇನು..?

ವೆಂಕಟೇಶ್ ಡಿಸಿ ಈ ಹಾಡನ್ನ ಹಾಡಿದ್ದು, ಪ್ರಮೋದ್ ಮರವಂತೆ ಹಾಡನ್ನು ಬರೆದಿದ್ದಾರೆ. ಅಲ್ಲದೇ ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನಟ ಧನ್ವೀರ್​ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಂಡಿದ್ದಾರೆ.

ನಟ ಧನ್ವೀರ್ ಹಾಗೂ ವಾಮನ ಚಿತ್ರಕ್ಕೆ ಶುಭ ಹಾರೈಸಿದ ವಿಜಯಲಕ್ಷ್ಮೀ

ಕಂಡ‌‌ ಕನಸು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಧನ್ವೀರ್ ನಟನೆಯ ನಾಲ್ಕನೇ ಸಿನಿಮಾ ಇದಾಗಿದೆ. ಈ ಚಿತ್ರದ ಮುದ್ದು ರಾಕ್ಷಸಿ ಹಾಡು ನನಗೆ ತುಂಬಾ ಇಷ್ಟ. ಆದಷ್ಟು ಕನ್ನಡ ಸಿನಿಮಾಗಳನ್ನು ಥಿಯೇಟರ್​ಗೆ ಹೋಗಿ ನೋಡಿ ಎಂದು ಶುಭ ಹಾರೈಸಿದ್ದಾರೆ.

publive-image

ನಟ ದರ್ಶನ್‌ ತೂಗುದೀಪ ಮತ್ತು ಧನ್ವೀರ್‌ ಅವರ ಮಧ್ಯೆ ಮೊದಲಿನಿಂದ ಒಂದು ಒಳ್ಳೆಯ ಸಂಬಂಧ ಇದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. ಅಂತಹ ಕಷ್ಟದ ಸಮಯದಲ್ಲಿ ನಟ ದರ್ಶನ್ ಮತ್ತು ಅವರ ಕುಟುಂಬದ ಜೊತೆ ಧನ್ವೀರ್‌ ಸಪೋರ್ಟಿವ್ ಆಗಿ ನಿಂತಿದ್ದರು. ಇದೀಗ ರಿಲೀಸ್‌ಗೆ ಸಜ್ಜಾಗಿರುವ ಧನ್ವೀರ್‌ ನಟನೆಯ ʻವಾಮನʼ ಸಿನಿಮಾದ ಎರಡನೇ ಸಾಂಗ್​ ಅನ್ನು ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment