newsfirstkannada.com

×

ದರ್ಶನ್ ಸಿಗ್ನಲ್ ಬಳಿಕ DBoss ಸೆಲೆಬ್ರಿಟಿಸ್‌ಗೆ ವಿಜಯಲಕ್ಷ್ಮಿ ಮೆಸೇಜ್‌.. ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

Share :

Published October 11, 2024 at 6:19pm

Update October 11, 2024 at 6:26pm

    ಪ್ರೀತಿಯ ಡಿಬಾಸ್ ಸೆಲೆಬ್ರಿಟೀಸ್‌.. ವಿಜಯಲಕ್ಷ್ಮಿ ದರ್ಶನ್ ಮೆಸೇಜ್‌!

    ಜೈಲಿನ ಮುಂದೆ ಬಾಸ್ ಡಿ ಬಾಸ್‌ ಅಂತ ಕಾಯುತ್ತಿರುವ ಫ್ಯಾನ್ಸ್‌ಗಳು

    ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮೇಲಿರಲಿ!

ರೇಣುಕಾಸ್ವಾಮಿ ಕೇಸ್‌ನಲ್ಲಿ ಬಂಧನದಲ್ಲಿರುವ ನಟ ದರ್ಶನ್ ಬಿಡುಗಡೆಯ ಬಾಗಿಲು ಯಾವಾಗ ತೆರೆಯುತ್ತೆ ಅಂತ ಕಾಯುತ್ತಿದ್ದಾರೆ. ದರ್ಶನ್ ಅಭಿಮಾನಿಗಳು ಅಷ್ಟೇ ಬಾಸ್, ಬಾಸ್ ಡಿ ಬಾಸ್‌ಗೆ ಯಾವಾಗ ಬಂಧನದಿಂದ ಮುಕ್ತಿ ಸಿಗುತ್ತೆ ಅಂತ ಎದುರು ನೋಡುತ್ತಿದ್ದಾರೆ.

ಕೋರ್ಟ್‌ನಲ್ಲಿ ದರ್ಶನ್‌ ಅವರ ಜಾಮೀನು ಅರ್ಜಿಯ ವಿಚಾರಣೆ ಈಗಾಗಲೇ ಮುಕ್ತಾಯವಾಗಿದೆ. ದರ್ಶನ್ ಪರ ಸಿ.ವಿ ನಾಗೇಶ್ ಅವರು ಪ್ರಬಲವಾದ ವಾದ ಮಂಡಿಸಿದ್ದು, ತನಿಖೆಯಲ್ಲಿ ಪೊಲೀಸರು ಒದಗಿಸಿರುವ ಸಾಕ್ಷ್ಯಗಳೇ ಸುಳ್ಳು ಎಂದು ಹೇಳಿದ್ದಾರೆ. ಇದಕ್ಕೆ SPP ಪ್ರಸನ್ನ ಕುಮಾರ್ ಅವರು ಖಡಕ್ ಆದ ಪ್ರತಿವಾದವನ್ನೇ ಮಂಡಿಸಿದ್ದಾರೆ. ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ಮುಂದಿನ ಸೋಮವಾರ ಜಾಮೀನು ಅರ್ಜಿಯ ತೀರ್ಪು ಕಾಯ್ದಿರಿಸಿದೆ.

ದರ್ಶನ್‌ ಜಾಮೀನು ಅರ್ಜಿ ತೀರ್ಪು ಕುತೂಹಲ ಕೆರಳಿಸಿರುವಂತೆಯೇ ಜೈಲಿನಲ್ಲಿರುವ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಸಿಗ್ನಲ್ ಕೊಟ್ಟಿದ್ದಾರೆ. ನೀವು ನನ್ನ ಹೃದಯದಲ್ಲಿ ಇದ್ದೀರಾ ಎಂದು ಹೇಳಿದ್ದರು. ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ಒಂದು ಮೆಸೇಜ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಬೆನ್ನಿನ ಮೇಲೆ ಕಾಣಿಸಿಕೊಂಡ ಊತ.. ವಿಪರೀತ ನೋವು; ವೈದ್ಯರ ವರದಿ ಮೇಲೆ ಮುಂದಿನ ನಿರ್ಧಾರ! 

ಬಹಳ ದಿನಗಳ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ದರ್ಶನ್ ಅವರು ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಾಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು. ದಿನಕರ್ ತೂಗುದೀಪ ನಿರ್ದೇಶನದ ನವಗ್ರಹ ಸಿನಿಮಾ ಶೀಘ್ರವೇ ರೀ ರಿಲೀಸ್ ಆಗಲಿದೆ ಎಂದಿದ್ದಾರೆ. ಈ ಪೋಸ್ಟ್‌ನ ಜೊತೆಗೆ ವಿಜಯಲಕ್ಷ್ಮಿ ಅವರು ಒಂದು ಸಂದೇಶವನ್ನು ಕೊಟ್ಟಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?
ಪ್ರೀತಿಯ ಡಿಬಾಸ್ ಸೆಲೆಬ್ರಿಟೀಸ್‌.. ಪ್ರತಿಯೊಬ್ಬರ ಹೃದಯ ಗೆದ್ದಿರುವ ನವಗ್ರಹ ಸಿನಿಮಾ ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ. ಈ ಬಾರಿ ಮತ್ತಷ್ಟು ಸ್ಪೆಷಲ್‌. ನಿಮ್ಮ ಹತ್ತಿರದ ಥಿಯೇಟರ್‌ಗಳಲ್ಲಿ ನವಗ್ರಹ ಸಿನಿಮಾವನ್ನು ನೋಡಲು ರೆಡಿಯಾಗಿ.
ನಾಡದೇವತೆ ಚಾಮುಂಡೇಶ್ವರಿಯ ಆಶೀರ್ವಾದ ನಿಮಗೆ ಹಾಗೂ ನಿಮ್ಮ ಕುಟುಂಬದ ಮೇಲೆ ಇರಲಿ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್ ಸಿಗ್ನಲ್ ಬಳಿಕ DBoss ಸೆಲೆಬ್ರಿಟಿಸ್‌ಗೆ ವಿಜಯಲಕ್ಷ್ಮಿ ಮೆಸೇಜ್‌.. ಫ್ಯಾನ್ಸ್‌ಗೆ ಗುಡ್‌ನ್ಯೂಸ್‌!

https://newsfirstlive.com/wp-content/uploads/2024/10/Darshan-Vijayalakshmi.jpg

Load More