ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಜೈಲು ಸೇರಿ 2 ತಿಂಗಳು
ಕೊಲೆ ಕೇಸಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಮತ್ತಷ್ಟು ಸಂಕಷ್ಟ..!
ದರ್ಶನ್ ಅವರೇ ಎ1 ಆಗಲಿದ್ದಾರೆ ಅನ್ನೋ ಸ್ಫೋಟಕ ಮಾಹಿತಿ ಲಭ್ಯ
ಬೆಂಗಳೂರು: ಕೊಲೆ ಕೇಸ್ನಲ್ಲಿ ಜೈಲು ಸೇರಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಮತ್ತಷ್ಟು ಸಂಕಷ್ಟ ಹೆಚ್ಚಾಗಿದೆ. ರೇಣುಕಾ ಸ್ವಾಮಿ ಕೇಸ್ನಲ್ಲಿ ದರ್ಶನ್ ಎ2 ಆಗಿದ್ದರು. ನಟಿ ಪವಿತ್ರಾ ಗೌಡ ಎ1 ಆಗಿದ್ದರು. ಆದರೀಗ, ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲು ಮುಂದಾಗಿದ್ದು, ದರ್ಶನ್ ಅವರನ್ನೇ ಎ1 ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ತನಿಖೆ ಕೊನೇ ಹಂತಕ್ಕೆ ಬಂದಿದೆ. ತನಿಖೆ ವೇಳೆ ನಟನ ವಿರುದ್ಧ ಹಲವು ಪ್ರಮುಖ ಸಾಕ್ಷಿಗಳು ಸಿಕಿದ್ದು, ಇವರೇ ಕೊಲೆ ಮಾಡಿಸಿರುವುದು ಎಂಬುದು ಬಹುತೇಕ ಖಚಿತವಾಗಿದೆ. ಎಲ್ಲ ಪ್ರಮುಖ ಸಾಕ್ಷಿಗಳು ದರ್ಶನ್ ವಿರುದ್ಧವಾಗಿ ಇರುವುದರಿಂದ ಕೇಸ್ನಲ್ಲಿ ಎ1 ಆಲಿದ್ದಾರೆ. A2ನಿಂದ A1 ಮಾಡಿ ಚಾರ್ಜ್ಶೀಟ್ ಸಲ್ಲಿಕೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಕೊಲೆ ಕೇಸ್ನಲ್ಲಿ ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಲಾಗಿದೆ. ಇದರಲ್ಲಿ ರೇಣುಕಾ ಸ್ವಾಮಿಯ 4 ಫೋಟೋಗಳು ಸಿಕ್ಕಿವೆ. ಸಾಯುವುದಕ್ಕೂ ಮುನ್ನ ಆತ ಕೈ ಮುಗಿದು ಬೇಡಿಕೊಳ್ಳುತ್ತಿರೋ ಫೋಟೋ ಇದಾಗಿದೆ. ಪ್ರದೋಶ್ ಮತ್ತು ಇನ್ನೋರ್ವನ ಮೊಬೈಲ್ನಿಂದ ಈ ಫೋಟೋ ರಿಟ್ರೀವ್ ಆಗಿದ್ದು, ಹಲವು ಬಗೆಯ ಸಾಕ್ಷಿಗಳನ್ನು ಕಲೆ ಹಾಕಲಾಗಿದೆ. ದರ್ಶನ್ ಎ1 ಆದಲ್ಲಿ ಶಿಕ್ಷೆ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ.
ಇದನ್ನೂ ಓದಿ: ನಾಳೆ ದರ್ಶನ್ ರಿಲೀಸ್ಗಾಗಿ ಪರಪ್ಪನ ಅಗ್ರಹಾರ ಜೈಲು ಮುಂದೆ ಉರುಳು ಸೇವೆ; 101 ತೆಂಗಿನ ಕಾಯಿ ಹೊಡೆದು ಪೂಜೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ