/newsfirstlive-kannada/media/post_attachments/wp-content/uploads/2024/10/DARSHAN_BAIL.jpg)
ನಟ ದರ್ಶನ್ ಬೆಂಗಳೂರು ಬಿಟ್ಟು ಮೈಸೂರಿನಲ್ಲಿರಲು ಯೋಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಇಂದು ಕೋರ್ಟ್​ಗೆ ಮನವಿ ಸಲ್ಲಿಕೆ ಸಾಧ್ಯತೆ ಇದೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್​ಗೆ ಜಾಮೀನು ಸಿಕ್ಕಿದೆ. ಪ್ರಕಣ, ಜೈಲು, ಆಸ್ಪತ್ರೆ, ಪೊಲೀಸ್, ಕೋರ್ಟ್​ ಅಂತೆಲ್ಲ ಬೇಸತ್ತಿದ್ದಾರೆ. ನೋವುಗಳನ್ನು ಮರೆತು ಹೊಸ ಜೀವನ ಕಂಡುಕೊಳ್ಳಲು ಮೈಸೂರಿನಲ್ಲಿಯೇ ಇರೋಕೆ ಪ್ಲಾನ್ ಮಾಡಿದ್ದಾರಂತೆ.
ಮೈಸೂರಿನಲ್ಲಿ ಈಗಾಗಲೇ ಪತ್ನಿ, ತಾಯಿ, ಅಕ್ಕ-ಭಾವನ ಜೊತೆ ಮೂರು ವಾರ ಕಳೆದಿದ್ದಾರೆ. ಫಾರ್ಮ್​ ಹೌಸ್​​ನಲ್ಲಿ ತಾವು ಸಾಕಿರುವ ಪ್ರಾಣಿ, ಪಕ್ಷಿಗಳ ಜೊತೆ ಕಾಲ ಕಳೆದಿದ್ದಾರೆ. ಇನ್ನೂ ಒಂದಷ್ಟು ದಿನಗಳ ಕಾಲ ಮೈಸೂರಿನಲ್ಲಿದ್ದು ಕಹಿ ನೆನಪು ಮರೆತು ಸಹಜ ಮನಸ್ಥಿತಿಗೆ ಮರಳಲು ನಿರ್ಧರಿಸಿದ್ದಾರೆ.
ಕೆಲವು ಮಾಹಿತಿಗಳ ಪ್ರಕಾರ, ಕಹಿ ಘಟನೆಯಿಂದ ನಿಧಾನಕ್ಕೆ ಹೊರಗೆ ಬರ್ತಿದ್ದಾರೆ. ಹೀಗಾಗಿ ಮೈಸೂರಿನಲ್ಲಿರಲು ಮತ್ತೆ ಕಾಲ ವಿಸ್ತರಣೆ ಮಾಡುವಂತೆ ಕೋರ್ಟ್​ಗೆ ಮನವಿ ಮಾಡಲಿದ್ದಾರೆ.
ಇದನ್ನೂ ಓದಿ:ನಟ ವಿಶಾಲ್​ ಆರೋಗ್ಯಕ್ಕೆ ಏನಾಗಿದೆ..? ಮೈಕ್ ಹಿಡಿದು ಮಾತನಾಡಲು ಕಷ್ಟ ಪಡುತ್ತಿರುವ ಸ್ಟಾರ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us