newsfirstkannada.com

×

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ.. ದಾಸನಿಗೆ ದೀಪಾವಳಿಯ ಗುಡ್​ನ್ಯೂಸ್​ ಸಿಗುತ್ತಾ?

Share :

Published October 28, 2024 at 6:58am

Update October 28, 2024 at 7:00am

    ಈ ಹಿಂದೆ ದರ್ಶನ್​ ಅವರಿಗೆ ಜಾಮೀನು ನಿರಾಕರಿಸಿದ್ದ ಸೆಷನ್ಸ್‌ ಕೋರ್ಟ್

    ಹೈಕೋರ್ಟ್‌ಗೆ ತುರ್ತು ಬೇಲ್ ಅರ್ಜಿ ಸಲ್ಲಿಸಿದ್ದ ದರ್ಶನ್ ಪರ ವಕೀಲರು

    ಹೈಕೋರ್ಟ್‌ನಲ್ಲಿ ಇಂದು ನಟ ದರ್ಶನ್​ ಅವರಿಗೆ ಜಾಮೀನು ಸಿಗುತ್ತಾ.?

ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣ ಸಂಬಂಧ ಜೈಲು ಕಂಬಿ ಎಣಿಸುತ್ತಿರುವ ದರ್ಶನ್ ಜಾಮೀನು ಭವಿಷ್ಯ ಇವತ್ತು ನಿರ್ಣಾಯಕ ಘಟ್ಟಕ್ಕೆ ಬರಲಿದೆ. ನಟ ದರ್ಶನ್‌ರ ಮೆಡಿಕಲ್ ರಿಪೋರ್ಟ್ ಸಲ್ಲಿಕೆ ಮಾಡುವಂತೆ ಬಳ್ಳಾರಿ ಜೈಲಾಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿತ್ತು. ಆ ವರದಿ ಇವತ್ತು ಹೈಕೋರ್ಟ್​ಗೆ ಸಲ್ಲಿಕೆ ಆಗಲಿದ್ದು, ಹೈಕೋರ್ಟ್‌ನಲ್ಲಿ ನಟ ದರ್ಶನ್​ಗೆ ಜೈಲಾ, ಬೇಲಾ ಅನ್ನೋದು ನಿರ್ಧಾರವಾಗಲಿದೆ.

ನಟ ದರ್ಶನ್​​ ಆರೋಪ ಹೊತ್ತು ಬಳ್ಳಾರಿ ಜೈಲಿನ ವಿಳಾಸ ಪಡೆದಿದ್ದಾರೆ. ಒಂದು ಕಡೆ ಜಾಮೀನು ಸಿಗದೇ ಪರದಾಡುತ್ತಿರುವ ದಾಸ, ಮತ್ತೊಂದು ಕಡೆ ಬೆನ್ನುನೋವು ಬೇತಾಳನಂತೆ ಬೆನ್ನೇರಿ ಪೀಡಿಸುತ್ತಿದೆ. ಅಂದ್ಹಾಗೆ ಇವತ್ತು ದರ್ಶನ್​​ ಪಾಲಿಗೆ ನಿರ್ಣಾಯಕ ದಿನ. ಜಾಮೀನು ಅರ್ಜಿ ವಿಚಾರಣೆ ಇವತ್ತು ಕರ್ನಾಟಕ ಹೈಕೋರ್ಟ್‌ ಅಂಗಳದಲ್ಲಿ ನಡೆಯಲಿದೆ.

ಇದನ್ನೂ ಓದಿ: PhDಗಾಗಿ ₹1 ಕೋಟಿಗೂ ಹೆಚ್ಚು ಖರ್ಚು.. ಹೇಳದೆ, ಕೇಳದೆ ಭಾರತೀಯ ವಿದ್ಯಾರ್ಥಿನ ತೆಗೆದು ಹಾಕಿದ ಆಕ್ಸ್‌ಫರ್ಡ್ ವಿವಿ

ಹೈಕೋರ್ಟ್‌ಗೆ ದರ್ಶನ್ ಮೆಡಿಕಲ್ ವರದಿ ಸಲ್ಲಿಕೆ!

ಕೇಸ್‌ನಲ್ಲಿ ಬಂಧನವಾದ ದರ್ಶನ್​ಗೆ ಸೆಷನ್ಸ್‌ ಕೋರ್ಟ್​​ ಜಾಮೀನು ನಿರಾಕರಿಸಿದೆ. ಸದ್ಯ ದರ್ಶನ್‌ ಪರ ವಕೀಲರು ಅನಾರೋಗ್ಯ ಕಾರಣ ನೀಡಿ ಹೈಕೋರ್ಟ್‌ಗೆ ತುರ್ತು ಜಾಮೀನು ಅರ್ಜಿ ಸಲ್ಲಿಸಿದ್ದಾರೆ.. ಬಳ್ಳಾರಿ ಜೈಲು ಅಧಿಕಾರಿಗಳಿಗೆ ಮೆಡಿಕಲ್​​​​ ರಿಪೋರ್ಟ್​​ ನೀಡುವಂತೆ ಸೂಚನೆ ನೀಡಿದ್ದ ಹೈಕೋರ್ಟ್​​​, ಇವತ್ತಿಗೆ ಅರ್ಜಿ ಮುಂದೂಡಿಕೆ ಮಾಡಿತ್ತು..

ಈಗಾಗಲೇ ದರ್ಶನ್‌ ವೈದ್ಯಕೀಯ ಪರೀಕ್ಷೆ ಆಗಿದೆ. ಬಳ್ಳಾರಿಯ ಬಿಮ್ಸ್ ವೈದ್ಯರು ಚಿಕಿತ್ಸೆ ನೀಡಿ, ಕಾರಾಗೃಹದ ಅಧಿಕಾರಿಗಳಿಗೆ ರಿಪೋರ್ಟ್​​​ ಸಬ್​​ಮೀಟ್​​​ ಮಾಡಿದ್ದಾರೆ. ಇದೇ ವರದಿ ಆಧಾರದ ಮೇಲೆ ದರ್ಶನ್‌ ಭವಿಷ್ಯ ನಿಂತಿದೆ. ಚಿಕಿತ್ಸೆಗೆ ಸಂಬಂಧಿಸಿ ಜೈಲಾಧಿಕಾರಿಗಳು ಇವತ್ತು ಹೈಕೋರ್ಟ್​​ಗೆ ದರ್ಶನ್​​​ ಆರೋಗ್ಯದ ರಿಪೋರ್ಟ್​​ನ್ನ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆ ಮಾಡಲಿದ್ದಾರೆ.

ರಿಪೋರ್ಟ್​​ ಮೇಲೆ ದರ್ಶನ್​​ ಭವಿಷ್ಯ!

  • ಜೈಲು ಅಧಿಕಾರಿಗಳಿಂದ ದರ್ಶನ್‌ ಆರೋಗ್ಯ ವರದಿ
  • ವರದಿ ಪಡೆದು ಪರಿಶೀಲನೆ ನಡೆಸಲಿರುವ ಹೈಕೋರ್ಟ್‌
  • ರಿಪೋರ್ಟ್ ಆಧರಿಸಿ ದರ್ಶನ್‌ ಪರ ವಕೀಲರ ವಾದ
  • ಮೆಡಿಕಲ್​​ ರಿಪೋರ್ಟ್ ಪಡೆದು ಎಸ್​​ಪಿಪಿ ಆಕ್ಷೇಪಣೆ
  • ಎಕ್ಸ್​​ಪರ್ಟ್‌ ಬಳಿ ಒಪಿನಿಯನ್ ಪಡೆದು SPP ವಾದ
  • ನೋವು ಇದೆ ಅಂದ್ರೆ, ಸರ್ಜರಿ ಬೇಕು ಅಂದ್ರೆ ಮಾಡಿಸಲಿ
  • ಜಾಮೀನು ಯಾಕೆ ಎಂಬ ಅಂಶಗಳ ಮೇಲೆ ಪ್ರತಿವಾದ
  • ಚಿಕಿತ್ಸೆಗೆ ಅಗತ್ಯ ಸೌಲಭ್ಯ ಎಂದಿರುವ ಬಿಮ್ಸ್​ ವೈದ್ಯರು
  • ಹೀಗಾಗಿ ಬಿಮ್ಸ್​​ನಲ್ಲಿ ಚಿಕಿತ್ಸೆ ಕೊಡಿಸಬಹುದೆಂದು ವಾದ

ಇದನ್ನೂ ಓದಿ: INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

ಅಂದ್ಹಾಗೆ ದರ್ಶನ್​ಗೆ ಬೆನ್ನುನೋವು ಶಮನಕ್ಕೆ ಶಸ್ತ್ರ ಚಿಕಿತ್ಸೆ ಅವಶ್ಯವಿದೆ ಅಂತ ಎಂಆರ್​​ಐ ಸ್ಕ್ಯಾನಿಂಗ್​​ನಲ್ಲಿ ವೈದ್ಯರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿ ಬಳ್ಳಾರಿ ಬಿಮ್ಸ್‌ನಲ್ಲಿ ಅಗತ್ಯ ಸೌಲಭ್ಯ ಇದೆ ಅಂತ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಅಂತ ಹೇಳಲಾಗಿದೆ.

ದರ್ಶನ್​​​​ ಚಿಕಿತ್ಸೆಗಾಗಿ ಜಾಮೀನು ಅಗತ್ಯವಿದೆ ಅಂತ ಕೋರ್ಟ್‌ಗೆ ಅನಿಸಿದರೆ ಜಾಮೀನು ಮಂಜೂರು ಸಾಧ್ಯತೆ ಇದೆ. ಇಲ್ಲವಾದ್ರೆ, ಬಿಮ್ಸ್​​ ವೈದ್ಯರ ಚಿಕಿತ್ಸೆಗೆ ಅಥವಾ ಬೆಂಗಳೂರಿಗೆ ಶಿಫ್ಟ್​​ ಮಾಡಲು ನಿರ್ದೇಶನ ನೀಡಬಹುದು. ಈ ರಿಪೋರ್ಟ್​​ ಒಂದೇ ದರ್ಶನ್​​​ ಜೈಲು ವಾಸ ನಿರ್ಧರಿಸಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ.. ದಾಸನಿಗೆ ದೀಪಾವಳಿಯ ಗುಡ್​ನ್ಯೂಸ್​ ಸಿಗುತ್ತಾ?

https://newsfirstlive.com/wp-content/uploads/2024/10/Darshan-bellary-Jail-12.jpg

Load More