/newsfirstlive-kannada/media/post_attachments/wp-content/uploads/2024/07/Dhanveer.jpg)
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಅವರನ್ನು ನೋಡಲು ಅನೇಕ ತಾರೆಯರು ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ನಟ ಧನ್ವೀರ್​ ಕೂಡ ದರ್ಶನ್​​ ಭೇಟಿಗೆ ಬಂದಿದ್ದಾರೆ.
ಮೊದಲಿಗೆ ಪರಪ್ಪನ ಅಗ್ರಹಾರ ಜೈಲು ಒಳಕ್ಕೆ ಹೋಗಲು ಧನ್ವೀರ್ ಕಾರಿನಲ್ಲಿ ಬಂದಿದ್ದಾರೆ. ಆದರೆ ಈ ವೇಳೆ ಜೈಲು ಸಿಬ್ಬಂದಿ ಅವರ ಕಾರನ್ನು ತಡೆದು ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ
ಬಳಿಕ ಧನ್ವೀರ್​ ದರ್ಶನ್​ ಭೇಟಿಗಾಗಿ ಕಾದು ಕುಂತಿದ್ದಾರೆ. ದರ್ಶನ್ ಭೇಟಿಗೆ ಸಮ್ಮತಿಸಿದರೆ ಒಳಗೆ ಹೋಗಲು ಕಾದಿದ್ದಾರೆ. ಆದರೆ ಕೊಂಚ ಸಮಯದ ಬಳಿಕ ಕಾರಿನಿಂದ ಕೆಳಗಿಳಿದ ನಟ ಜೈಲಿನ ಬಳಿ ನಡೆದುಕೊಂಡು ಹೋಗಿದ್ದಾರೆ.
ಮಾಹಿತಿ ಪ್ರಕಾರ ಧನ್ವೀರ್​ 2 ಗಂಟೆಗಳ ಕಾಲ ದರ್ಶನ್​ ಭೇಟಿಗಾಗಿ ಕಾದಿದ್ದಾರೆ. ನಂತರ ಅವರನ್ನು ಭೇಟಿ ಮಾಡಿದ್ದಾರೆ.​ ತುಂಬಾ ಹೊತ್ತು ಮಾತನಾಡಲು ಆಗಿಲ್ಲ ಎಂದು ಬಜಾರ್ ನಟ ಹೇಳಿದ್ದಾರೆ.
ಈಗಾಗಲೇ ದರ್ಶನ್​ ಭೇಟಿಗೆ ಅನೇಕ ತಾರೆಯರು ಜೈಲಿಗೆ ಆಗಮಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ, ದಿನಕರ್​ ತೂಗುದೀಪ ನಿನ್ನೆ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ. ಇದಲ್ಲದೆ, ನಟ ವಿನೋದ್​ ಪ್ರಭಾಕರ್​, ಜೋಗಿ ಪ್ರೇಮ್​, ರಕ್ಷಿತಾ ಪ್ರೇಮ್​ ಸೇರಿ ಕೆಲವರು ಈಗಾಗಲೇ ದರ್ಶನ್​ರನ್ನು ಭೆಟಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us