newsfirstkannada.com

VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

Share :

Published July 2, 2024 at 2:33pm

Update July 2, 2024 at 3:07pm

    ದರ್ಶನ್​​ ಭೇಟಿಗಾಗಿ ಬಂದ ನಟ ಧನ್ವೀರ್​

    ನ್ಯಾಯಾಂಗ ಬಂಧನದಲ್ಲಿರುವ ದರ್ಶನ್​ ಭೇಟಿಗೆ ಕಾದು ಕುಂತ ಧನ್ವೀರ್​

    ಕಾರು ಒಳಗೆ ಬಿಟ್ಟಿಲ್ಲ.. ದರ್ಶನ್‌ಗಾಗಿ ಗಂಟೆಗಟ್ಟಲೆ ಕಾದ ಬಜಾರ್​ ಹೀರೋ

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ವಿಚಾರಣಾಧೀನ ಖೈದಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಅವರನ್ನು ನೋಡಲು ಅನೇಕ ತಾರೆಯರು ಜೈಲಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ನಟ ಧನ್ವೀರ್​ ಕೂಡ ದರ್ಶನ್​​ ಭೇಟಿಗೆ ಬಂದಿದ್ದಾರೆ.

ಮೊದಲಿಗೆ ಪರಪ್ಪನ ಅಗ್ರಹಾರ ಜೈಲು ಒಳಕ್ಕೆ ಹೋಗಲು ಧನ್ವೀರ್ ಕಾರಿನಲ್ಲಿ ಬಂದಿದ್ದಾರೆ. ಆದರೆ ಈ ವೇಳೆ ಜೈಲು ಸಿಬ್ಬಂದಿ ಅವರ ಕಾರನ್ನು ತಡೆದು ನಿಲ್ಲಿಸಿದ್ದಾರೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಕೊಡಗಿನ ಬೆಡಗಿ ಹರ್ಷಿಕಾ ಪೂಣಚ್ಚ! ಅಪ್ಪ ಆಗ್ತಿದ್ದಾರೆ ಭುವನ್ ಪೊನ್ನಣ್ಣ

ಬಳಿಕ ಧನ್ವೀರ್​ ದರ್ಶನ್​ ಭೇಟಿಗಾಗಿ ಕಾದು ಕುಂತಿದ್ದಾರೆ. ದರ್ಶನ್ ಭೇಟಿಗೆ ಸಮ್ಮತಿಸಿದರೆ ಒಳಗೆ ಹೋಗಲು ಕಾದಿದ್ದಾರೆ. ಆದರೆ ಕೊಂಚ ಸಮಯದ ಬಳಿಕ ಕಾರಿನಿಂದ ಕೆಳಗಿಳಿದ ನಟ ಜೈಲಿನ ಬಳಿ ನಡೆದುಕೊಂಡು ಹೋಗಿದ್ದಾರೆ.

ಮಾಹಿತಿ ಪ್ರಕಾರ ಧನ್ವೀರ್​ 2 ಗಂಟೆಗಳ ಕಾಲ ದರ್ಶನ್​ ಭೇಟಿಗಾಗಿ ಕಾದಿದ್ದಾರೆ. ನಂತರ ಅವರನ್ನು ಭೇಟಿ ಮಾಡಿದ್ದಾರೆ.​ ತುಂಬಾ ಹೊತ್ತು ಮಾತನಾಡಲು ಆಗಿಲ್ಲ ಎಂದು ಬಜಾರ್ ನಟ ಹೇಳಿದ್ದಾರೆ.

ಈಗಾಗಲೇ ದರ್ಶನ್​ ಭೇಟಿಗೆ ಅನೇಕ ತಾರೆಯರು ಜೈಲಿಗೆ ಆಗಮಿಸಿದ್ದಾರೆ. ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ, ದಿನಕರ್​ ತೂಗುದೀಪ  ನಿನ್ನೆ ದರ್ಶನ್​​ರನ್ನು ಭೇಟಿ ಮಾಡಿದ್ದಾರೆ. ಇದಲ್ಲದೆ, ನಟ ವಿನೋದ್​ ಪ್ರಭಾಕರ್​, ಜೋಗಿ ಪ್ರೇಮ್​, ರಕ್ಷಿತಾ ಪ್ರೇಮ್​ ಸೇರಿ ಕೆಲವರು ಈಗಾಗಲೇ ದರ್ಶನ್​ರನ್ನು ಭೆಟಿ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ದರ್ಶನ್​ ಭೇಟಿಗಾಗಿ 2 ಗಂಟೆ ಕಾದು ಕುಂತ ಧನ್ವೀರ್​.. ಭೇಟಿ ಮಾಡೋಕೆ ನಿರಾಕರಿಸಿದ್ರಾ ದಾಸ? ಏನಾಯ್ತು ಅಲ್ಲಿ?

https://newsfirstlive.com/wp-content/uploads/2024/07/Dhanveer.jpg

Load More