Advertisment

ಹೊಟ್ಟೆ ತುಂಬಾ ಕೊಟ್ಟಿದ್ದಾರೆ.. ನಟ ದರ್ಶನ್ ಸ್ಥಿತಿ ನೆನೆದು ಬೇಸರಗೊಂಡ ಧರ್ಮ ಕೀರ್ತಿ ರಾಜ್

author-image
Ganesh
Updated On
ಹೊಟ್ಟೆ ತುಂಬಾ ಕೊಟ್ಟಿದ್ದಾರೆ.. ನಟ ದರ್ಶನ್ ಸ್ಥಿತಿ ನೆನೆದು ಬೇಸರಗೊಂಡ ಧರ್ಮ ಕೀರ್ತಿ ರಾಜ್
Advertisment
  • ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಜೈಲುಪಾಲು
  • ಜೈಲಿಗೆ ಹೋಗಿ ದರ್ಶನ್​​ ಭೇಟಿ ಮಾಡ್ತೀನಿ ಎಂದ ನಟ
  • ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಪವಿತ್ರಗೌಡ

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಪರಪ್ಪನ ಅಗ್ರಹಾರದ ಪಾಲಾಗಿರುವ ನಟ ದರ್ಶನ್​ ಮೂರನೇ ದಿನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಇತ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆರೋಪಿ ಸ್ಥಾನದಲ್ಲಿ ನೋಡಿ ಬೇಸರ ಆಗ್ತಿದೆ. ದರ್ಶನ್ ಅಂತಹ ವ್ಯಕ್ತಿ ಅಲ್ಲ ಎಂದು ನಟ ಧರ್ಮ ಕೀರ್ತಿ ರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

Advertisment

ಬೆಂಗಳೂರಲ್ಲಿ ಮಾತನಾಡಿದ ಅವರು ನಮ್ಮನ್ನೆಲ್ಲ ತಮ್ಮನಂತೆ ನೋಡಿಕೊಳ್ತಿದ್ದರು. ಈ ಪ್ರಕರಣದಲ್ಲಿ ದರ್ಶನ್ ಭಾಗಿಯಾಗಿದ್ದಾರಾ..? ಇಲ್ವಾ ಅಂತ ನ್ಯಾಯಾಲಯ ಹೇಳಬೇಕು ಎಂದಿದ್ದಾರೆ. ದರ್ಶನ್ ನೋಡೋಕೆ ಜೈಲಿಗೆ ಹೋಗ್ತೀನಿ ಎಂದಿದ್ದಾರೆ.

ಇದನ್ನೂ ಓದಿ:ಜೈಲಲ್ಲಿ ದರ್ಶನ್​ಗೆ ಆತಿಥ್ಯ ನೀಡಲು ಕುಖ್ಯಾತ ರೌಡಿಗಳಿಂದ ಪೈಪೋಟಿ..? ಅಚ್ಚರಿಯ ವಿಷಯ ಬಹಿರಂಗ..!

ಧರ್ಮ ಕೀರ್ತಿ ರಾಜ್ ಹೇಳಿದ್ದೇನು..?
ಚಿತ್ರರಂಗಕ್ಕೆ ಬರೋಕೆ ಮುಂಚೆನೇ ನಾನು ಅವರ ದೊಡ್ಡ ಫ್ಯಾನ್​. ಅವರ ಮನೆಯಲ್ಲಿ ಊಟ ಮಾಡಿದ್ದೀನಿ. ವಿಜಯಕ್ಕ ತಮ್ಮ ಕೈಯಿಂದ ನನಗೆ ಹೊಟ್ಟೆ ತುಂಬಾ ಊಟ ಕೊಟ್ಟಿದ್ದಾರೆ. ಇದೆಲ್ಲ ಆಗಬಾರದಿತ್ತು. ಈಗ ನೋಡಿದರೆ ನೋವಾಗುತ್ತೆ. ಎಲ್ಲ ಚೆನ್ನಾಗಿದ್ದರು. ಪೊಲೀಸರು ಅವರ ಕೆಲಸ ಮಾಡಿದ್ದಾರೆ. ಕೇಸ್ ಕೋರ್ಟ್​​ನಲ್ಲಿದೆ. ಇದು ಆಗಿರೋದು ಆಕಸ್ಮಿಕವಾಗಿ ಆಗಿರುತ್ತೆ. ರೇಣುಕಾಸ್ವಾಮಿ ಕುಟುಂಬಕ್ಕೆ ಭಗವಂತ ಶಕ್ತಿ ಕೊಡಲಿ ಅಂತ ಕೇಳಿಕೊಳ್ಳುತ್ತೇನೆ ಎಂದಿದ್ದಾರೆ.

Advertisment

ಇದನ್ನೂ ಓದಿ:ಬೀದರ್​​ನಲ್ಲಿ ಮಧ್ಯರಾತ್ರಿ ಹರಿದ ನೆತ್ತರು.. ಬಾಲ್ಯದ ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment