ಪಹಲ್ಗಾಮ್‌ ಉಗ್ರರಿಗೆ ತಕ್ಕ ಉತ್ತರ.. ಖಾರವಾಗಿ ಪ್ರತಿಕ್ರಿಯೆ ನೀಡಿದ ನಟ ಧ್ರುವ ಸರ್ಜಾ; ಏನಂದ್ರು?

author-image
admin
Updated On
Martin: ಧ್ರುವ ಸರ್ಜಾ ಫ್ಯಾನ್ಸ್‌ ಹಬ್ಬ.. ರಿಲೀಸ್‌ಗೂ ಮೊದಲೇ ಮಾರ್ಟಿನ್ ಹವಾ ಹೇಗಿದೆ ಗೊತ್ತಾ?
Advertisment
  • ಅವರಿಗೆ ಅರ್ಥ ಆಗೋ ಭಾಷೆಯಲ್ಲೇ ಆರ್ಮಿ ಉತ್ತರ ಕೊಡುತ್ತೆ
  • ಪಹಲ್ಗಾಮ್‌ ಉಗ್ರರ ಮೇಲೆ ಸ್ಯಾಂಡಲ್‌ವುಡ್‌ ನಟ ಧ್ರುವ ಕೆಂಡ
  • ಜಮ್ಮು ಕಾಶ್ಮೀರ ನಮ್ಮ ಕಿರೀಟ ಇದ್ದ ಹಾಗೆ ಯಾವತ್ತಿದ್ರೂ ನಮ್ಮದೇ!

ಪಹಲ್ಗಾಮ್‌ನಲ್ಲಿ ಹಿಂದೂಗಳನ್ನೇ ಹುಡುಕಿ, ಹುಡುಕಿ ಗುಂಡಿಕ್ಕಿ ಕೊಂದಿರುವ ಉಗ್ರರ ಮೇಲೆ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಆಕ್ಷನ್ ಪ್ರಿನ್ಸ್, ಟೆರರಿಸ್ಟ್‌ಗಳಿಗೆ ಅವರಿಗೆ ಅರ್ಥ ಆಗೋ ಭಾಷೆಯಲ್ಲೇ ನಮ್ಮ ಇಂಡಿಯನ್ ಆರ್ಮಿ ಉತ್ತರ ಕೊಟ್ಟೆ ಕೊಡುತ್ತೆ.

ನಮ್ಮ ಭಗವದ್ಗೀತೆಯಲ್ಲಿ ತಾಳ್ಮೆಯಿಂದ ಇರಬೇಕು ಎಂದಿದೆ. ಈಗಾಗಲೇ ಸಿಂಧೂ ನದಿ ನೀರು ಹರಿಯುವುದನ್ನು ಬಂದ್ ಮಾಡಿದ್ದಾರೆ. ಆದಷ್ಟು ಬೇಗ ಇದಕ್ಕೊಂದು ಉತ್ತರ ಸಿಗುತ್ತೆ. ದೇವರ ರೂಪದಲ್ಲಿ ಇಂಡಿಯನ್ ಆರ್ಮಿ ಶಿಕ್ಷೆ ಕೊಡುತ್ತಾರೆ.

publive-image

ಇದನ್ನೂ ಓದಿ: ನಾವು ಕೂಡ ರೆಡಿ.. ಭಾರತವನ್ನು ಕೆರಳಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮಾತು; ಏನಂದ್ರು? 

ಮಾರ್ಟಿನ್ ಸಿನಿಮಾ ಶೂಟಿಂಗ್ ಸಮಯದಲ್ಲಿ ಆ ಸ್ಥಳದಲ್ಲೇ ಚಿತ್ರೀಕರಣ ಮಾಡಿದ್ವಿ. ಜಮ್ಮು ಕಾಶ್ಮೀರ ನಮ್ಮ ಕಿರೀಟ ಇದ್ದ ಹಾಗೆ. ಯಾವತ್ತಿದ್ರೂ ನಮ್ಮದೇ. ನಾವು ಯುದ್ಧ ಪ್ರಾರಂಭ ಮಾಡಿಲ್ಲ, ಮೊದಲು ಆರಂಭ ಮಾಡಿರೋದು ಅವ್ರೇ.

ನಾವು ಅವರ ಬಗ್ಗೆ ಮಾತಾಡೋದು ಬೇಡ. ಭಾರತೀಯ ಯೋಧರು ಅವ್ರಿಗೆ ತಕ್ಕ ಉತ್ತರ ಕೊಟ್ಟೇ ಕೊಡುತ್ತಾರೆ. ಪ್ರಧಾನಿ ಮೋದಿ ಅವರ ನಿರ್ಧಾರದ ಬಗ್ಗೆ ನನಗೇನು ಗೊತ್ತಿಲ್ಲ. ನಮ್ಮ ಸರ್ಕಾರ ಕೆಲವೇ ಗಂಟೆಗಳಲ್ಲಿ, ಕೆಲವೇ ದಿನಗಳಲ್ಲೇ ಉತ್ತರ ಕೊಡುತ್ತೆ ಎಂದು ಧ್ರುವ ಸರ್ಜಾ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment