/newsfirstlive-kannada/media/post_attachments/wp-content/uploads/2025/04/Dhruva-sarja-Help-Child.jpg)
ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್, ನಟ ಧ್ರುವ ಸರ್ಜಾ ಈ ಪುಟ್ಟ ಮಗುವಿನ ಬಾಳಿಗೆ ಬೆಳಕಾಗಿದ್ದಾರೆ. ಕಣ್ಣಿನಲ್ಲಿ ಪೊರೆ ಬೆಳೆದಿದ್ದರಿಂದ ಈ ಬಾಲಕನಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಅನಿವಾರ್ಯತೆ ಇತ್ತು.
/newsfirstlive-kannada/media/post_attachments/wp-content/uploads/2025/04/Dhruva-sarja-Help-Child-2.jpg)
ಗಾರೆ ಕೆಲಸ ಮಾಡುವ ಪೋಷಕರಿಗೆ ಮಗನ ಶಸ್ತ್ರ ಚಿಕಿತ್ಸೆ ಮಾಡಿಸುವಷ್ಟು ಶಕ್ತಿ ಇರಲಿಲ್ಲ. ಈ ಬಗ್ಗೆ ಮಾಹಿತಿ ತಿಳಿದ ನಟ ಧ್ರುವ ಸರ್ಜಾ ಅವರು ಕಣ್ಣಿನಲ್ಲಿ ಪೊರೆ ಬೆಳೆದ ಬಾಲಕನ ಟ್ರೀಟ್ಮೆಂಟ್‌ಗೆ ಸಹಕರಿಸಿದ್ದಾರೆ.
/newsfirstlive-kannada/media/post_attachments/wp-content/uploads/2025/04/Dhruva-sarja-Help-Child-1.jpg)
ಮಗುವಿನ ಬೆನ್ನಿಗೆ ನಿಂತ ಧ್ರುವ ಸರ್ಜಾ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವಾಗಿದ್ದಾರೆ. ಇದೀಗ ಮಗುವಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಬಾಲಕ ಖುಷಿಯಾಗಿ ಪೋಷಕರ ಕಣ್ತುಂಬಿಕೊಳ್ಳುತ್ತಿದ್ದಾನೆ. ನಟ ಧ್ರುವ ಸರ್ಜಾ ಅವರು ವಿಡಿಯೋ ಕಾಲ್ ಮಾಡೋ ಮೂಲಕ ಬಾಲಕನ ಆರೋಗ್ಯ ವಿಚಾರಿಸಿದ್ದಾರೆ.
ಇದನ್ನೂ ಓದಿ: ಪುಟಾಣಿ ಕಂದಮ್ಮನ ಜೀವ ಉಳಿಸಲು ಪಣ ತೊಟ್ಟ ಕಿಚ್ಚ ಸುದೀಪ್; ಅಭಿಮಾನಿಗಳಿಗೆ ವಿಶೇಷ ಮನವಿ!
ಬಾಲಕನ ಪೋಷಕರು ನಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us