newsfirstkannada.com

ನಟ ಧ್ರುವ ಸರ್ಜಾಗೆ ವರ್ತೂರು ಸಂತೋಷ್​​ ಕೊಟ್ರು ಭರ್ಜರಿ ಗಿಫ್ಟ್​​.. ಏನದು ಗೊತ್ತಾ?

Share :

Published January 22, 2024 at 10:04pm

Update January 22, 2024 at 10:12pm

    ಧ್ರುವ ಸರ್ಜಾ ಫಾರ್ಮ್ ಹೌಸ್​ನಲ್ಲಿ ನಡೆಯಿತು ನಾಮಕರಣ ಶಾಸ್ತ್ರ

    ಹಳ್ಳಿಕಾರ್​ ಒಡೆಯರ್​ ಕಡೆಯಿಂದ ನಟನಿಗೆ ಬಂತು ಅದ್ಭುತ ಗಿಫ್ಟ್​

    ಆಂಜನೇಯ ಪರಮ ಭಕ್ತನಾಗಿರೋ ನಟ ಸರ್ಜಾ ಮಕ್ಕಳ ನಾಮಕರಣ

ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಶುಭ ದಿನದಂದು ಆಂಜನೇಯ ಪರಮ ಭಕ್ತನಾಗಿರೋ ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಮಗಳಿಗೆ ರುದ್ರಾಕ್ಷಿ ಡಿ. ಸರ್ಜಾ ಮತ್ತು ಮಗನಿಗೆ ಹಯಗ್ರೀವ ಡಿ. ಸರ್ಜಾ ಎಂದು ನಾಮಕರಣ ಮಾಡಿದ್ದಾರೆ. ಧ್ರುವ ಸರ್ಜಾ ಫಾರ್ಮ್ ಹೌಸ್​ನಲ್ಲಿ ನಾಮಕರಣ ಶಾಸ್ತ್ರ ನಡೆಯಿತು.

ಇನ್ನು ವಿಶೇಷ ಎಂದರೆ ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​​ ಸ್ಪರ್ಧಿಯಾಗಿರೋ ವರ್ತೂರು ಸಂತೋಷ್​ ಅವರು ನಟ ಧ್ರುವ ಸರ್ಜಾ ಅವರಿಗೆ ಎರಡು ಎತ್ತುಗಳನ್ನು ಗಿಫ್ಟ್​​ ಆಗಿ ನೀಡಿದ್ದಾರೆ. ಹೌದು, ನಟ ಧ್ರುವ ಸರ್ಜಾ ಅವರಿಗೆ ವರ್ತೂರು ಸಂತೋಷ್ ಅವರ ಸ್ನೇಹಿತರಿಂದ ಈ ಉಡುಗೊರೆಯನ್ನು ನೀಡಲಾಗಿದೆ. ಧ್ರುವ ಸರ್ಜಾ ಮಕ್ಕಳ ನಾಮಕರಣ ಸಮಾರಂಭಕ್ಕೆ ಬಾಲಿವುಡ್ ನಟ ಸಂಜಯ್ ದತ್, ಅರ್ಜುನ್ ಸರ್ಜಾ, ಪ್ರೇಮ್ ಹಾಗೂ ರಕ್ಷಿತಾ ಕೂಡ ಭಾಗಿಯಾಗಿದ್ದರು. ಧ್ರುವಾ ಸರ್ಜಾ ಮಕ್ಕಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇನ್ನು ಎತ್ತುಗಳನ್ನು ನೋಡಿದ ಕೂಡಲೇ ನಟ ಧ್ರುವ ಸರ್ಜಾ ಫುಲ್​ ಖುಷ್​ ಆಗಿದ್ದಾರೆ. ಆ ಎರಡು ಎತ್ತುಗಳನ್ನು ತೋಟದಲ್ಲಿ ಇರಿಸಿಕೊಂಡಿದ್ದಾರೆ. ಸದ್ಯ ವರ್ತೂರು ಸಂತೋಷ್​ ಅವರು ಬಿಗ್​ಬಾಸ್​ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ. ವೀಕ್ಷಕರ ಚಿತ್ತ ಬಿಗ್​ಬಾಸ್​ ಟ್ರೋಫಿ ಯಾರ ಕೈಗೆ ಸೇರಲಿದೆ ಎಂದು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ಧ್ರುವ ಸರ್ಜಾಗೆ ವರ್ತೂರು ಸಂತೋಷ್​​ ಕೊಟ್ರು ಭರ್ಜರಿ ಗಿಫ್ಟ್​​.. ಏನದು ಗೊತ್ತಾ?

https://newsfirstlive.com/wp-content/uploads/2024/01/varturu-santjosh.jpg

Load More