ಮದುವೆಗೂ ಮುಂಚೆ ಒಂದೊಳ್ಳೆ ಕಾರ್ಯಕ್ಕೆ ಮುಂದಾದ ಡಾಲಿ.. ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ!

author-image
admin
Updated On
ಮದುವೆಗೂ ಮುಂಚೆ ಒಂದೊಳ್ಳೆ ಕಾರ್ಯಕ್ಕೆ ಮುಂದಾದ ಡಾಲಿ.. ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ!
Advertisment
  • ಮದುವೆಯ ಸಂಭ್ರಮ, ತಯಾರಿಯ ಮಧ್ಯೆ ನಟ ಡಾಲಿ ಕೊಡುಗೆ
  • ಅರಸೀಕೆರೆ ತಾಲೂಕು ಕಾಳೇನಹಳ್ಳಿಗೆ ಭೇಟಿ ಕೊಟ್ಟ ಧನಂಜಯ
  • ಫೆಬ್ರವರಿ 16ರಂದು ಡಾಲಿ - ಧನ್ಯತಾ ಜೋಡಿಯ ವಿವಾಹೋತ್ಸವ

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ ಮದುವೆಯ ಸಂಭ್ರಮದಲ್ಲಿದ್ದಾರೆ. ಡಾಲಿ-ಧನ್ಯತಾ ಜೋಡಿ ಈಗಾಗಲೇ ಕನ್ನಡ ಸಿನಿಮಾದ ನಟ, ನಟಿಯರು, ರಾಜಕೀಯ ಗಣ್ಯರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡುತ್ತಿದ್ದಾರೆ.

ಇದನ್ನೂ ಓದಿ: ನಂದಿ ಧ್ವಜದ ಕುಣಿತ.. ಡಾಲಿ – ಧನ್ಯತಾ ಜೋಡಿಯ 10 ಫೋಟೋಗಳು ಇಲ್ಲಿವೆ! 

ಮದುವೆ ಸಂಭ್ರಮದ ಮಧ್ಯೆ ನಟ ಡಾಲಿ ಧನಂಜಯ ಅವರು ಒಂದೊಳ್ಳೆ ಕಾರ್ಯಕ್ಕೆ ಮುಂದಾಗಿದ್ದಾರೆ. ಡಾಲಿ ಓದಿದ ಊರಿನ ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರೆ.

publive-image

ಡಾಲಿ ಧನಂಜಯ ಅವರು ಹಾಸನದ ಅರಸೀಕೆರೆ ತಾಲೂಕು ಕಾಳೇನಹಳ್ಳಿಯವರು. ಹುಟ್ಟೂರಿನಲ್ಲಿ ತಾನು ಓದಿದ ಸರ್ಕಾರಿ ಶಾಲೆಗೆ ಡಾಲಿ ಅವರು ತಮ್ಮ ಕೊಡುಗೆ ನೀಡಿದ್ದಾರೆ.

publive-image

ಸರ್ಕಾರಿ ಶಾಲೆಯ ಜೀರ್ಣೋದ್ಧಾರಕ್ಕೆ ಖುದ್ದು ಡಾಲಿ ಧನಂಜಯ ಅವರೇ ಮುಂದೆ ನಿಂತು ಮಾಡುತ್ತಿದ್ದಾರೆ. ಇದರ ಜೊತೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಡಾಲಿ ಧನಂಜಯ ಅವರು ಮುಂದಾಗಿದ್ದಾರೆ.

publive-image

ಫೆಬ್ರವರಿ 16ರಂದು ಡಾಲಿ - ಧನ್ಯತಾ ಜೋಡಿ ಸಪ್ತಪದಿ ತುಳಿಯುತ್ತಿದ್ದಾರೆ. ಮೈಸೂರಿನಲ್ಲಿ ಈ ತಾರಾ ಜೋಡಿಯ ಅದ್ಧೂರಿ ವಿವಾಹ ಮಹೋತ್ಸವ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment