Advertisment

PHOTO: ಡಾಲಿ-ಧನ್ಯತಾ ಮದುವೆಯ ಮಮತೆಯ ಕರೆಯೋಲೆ.. ಮೊದಲ ಆಮಂತ್ರಣ ಯಾರಿಗೆ?

author-image
admin
Updated On
PHOTO: ಡಾಲಿ-ಧನ್ಯತಾ ಮದುವೆಯ ಮಮತೆಯ ಕರೆಯೋಲೆ.. ಮೊದಲ ಆಮಂತ್ರಣ ಯಾರಿಗೆ?
Advertisment
  • ಧನ-ಧನ್ಯ ಮದುವೆಗೆ ನಿಮಗೆ ಸ್ವಾಗತ ಎಂದ ಡಾಲಿ-ಜಾಲಿ ಜೋಡಿ
  • ಆಕ್ಟರ್-ಡಾಕ್ಟರ್ ಮದುವೆಗೆ ಬಂದು ಆಶೀರ್ವದಿಸಿ ಎಂದು ಆಮಂತ್ರಣ
  • ಇಂದಿನಿಂದ ಮದುವೆಗೆ ವೆಡ್ಡಿಂಗ್ ಕಾರ್ಡ್ ಕೊಡುವ ಕಾರ್ಯಕ್ರಮ

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ ಮದುವೆ ಸಂಭ್ರಮ ಶುರುವಾಗಿದೆ. ಡಾಕ್ಟರ್ ಧನ್ಯತಾ ಅವರನ್ನು ಪ್ರೀತಿಸಿ ಕೈ ಹಿಡಿಯುತ್ತಿರುವ ಡಾಲಿ ವಿವಾಹೋತ್ಸವದ ತಯಾರಿ ಭರ್ಜರಿಯಾಗಿದೆ. ಪೋಸ್ಟ್ ಕಾರ್ಡ್ ಮಾದರಿಯಲ್ಲಿ ಡಾಲಿ-ಧನ್ಯತಾ ಮದುವೆ ಆಮಂತ್ರಣ ಪತ್ರಿಕೆ ರೆಡಿಯಾಗಿದ್ದು, ಇಂದಿನಿಂದ ಮದುವೆಗೆ ವೆಡ್ಡಿಂಗ್ ಕಾರ್ಡ್ ಕೊಡುವ ಕಾರ್ಯಕ್ರಮ ಆರಂಭಿಸಿದ್ದಾರೆ.

Advertisment

publive-image

ಫೆಬ್ರವರಿಯಲ್ಲಿ ನಟ ಡಾಲಿ ಧನಂಜಯ ಅವರು ವೈದ್ಯೆ ಧನ್ಯತಾ ಜೊತೆಗೆ ಹಸೆಮಣೆ ಏರುತ್ತಿದ್ದಾರೆ. ಈ ಸ್ಟಾರ್ ಜೋಡಿ ಮೈಸೂರಿನಲ್ಲಿ ಮದುವೆಯಾಗಲು ನಿಶ್ಚಯಿಸಿದ್ದಾರೆ. ಡಾಲಿ ಮತ್ತು ಧನ್ಯತಾ ಅನೇಕ ವರ್ಷಗಳ ಗೆಳೆಯ, ಗೆಳತಿಯರು. ಚಿತ್ರದುರ್ಗ ಮೂಲದ ಧನ್ಯತಾ ಅಪ್ಪಟ ಕನ್ನಡತಿಯಾಗಿದ್ದು. ಮೈಸೂರಿನಲ್ಲಿ ಓದುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿದೆ.

publive-image

ಡಾಲಿ-ಧನ್ಯತಾ ತಮ್ಮ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದ್ದಾರೆ. ಸಿಎಂ ನಿವಾಸಕ್ಕೆ ತೆರಳಿದ ಇಬ್ಬರೂ ಮೊದಲ ಇನ್ವಿಟೇಷನ್‌ ಮುಖ್ಯಮಂತ್ರಿಗೆ ನೀಡಿ ಮದುವೆಗೆ ಆಹ್ವಾನಿಸಿದ್ದಾರೆ.

ಇದನ್ನೂ ಓದಿ: ಡಾಲಿ ಕೈ ಹಿಡಿಯುವ ವೈದ್ಯೆ ಎಲ್ಲಿಯವರು? ಪರಿಚಯ ಹೇಗಾಯ್ತು? 

ಮೈಸೂರು ಧನಂಜಯ ಮತ್ತು ಧನ್ಯತಾ ಇಬ್ಬರಿಗೂ ಎಮೋಷನಲಿ ಕನೆಕ್ಟ್ ಆದ ಸ್ಥಳವಾಗಿದೆ. ಹಾಗಾಗಿ ಅಲ್ಲಿಯೇ ಹಸೆಮಣೆ ಏರುವ ನಿರ್ಧಾರ ಮಾಡಿದ್ದಾರೆ. ಫೆಬ್ರವರಿ 16ರಂದು ಮೈಸೂರಿನ ಅಂಬಾ ವಿಲಾಸ ಅರಮನೆಯ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಮತ್ತು ಧನ್ಯತಾ ಮದುವೆಯಾಗಲಿದ್ದಾರೆ.

Advertisment

publive-image

ಆಮಂತ್ರಣ ಪತ್ರಿಕೆಯಲ್ಲಿ ಧನ-ಧನ್ಯ ಮದುವೆಗೆ ನಿಮಗೆ ಸ್ವಾಗತ. ಆಕ್ಟರ್-ಡಾಕ್ಟರ್ ಮದುವೆಗೆ ಬಂದು ಆಶೀರ್ವದಿಸಿ ಎಂದು ಮನವಿ ಮಾಡಲಾಗಿದೆ.

publive-image

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಗೂ ಡಾಲಿ-ಧನ್ಯತಾ ಅವರು ಮದುವೆ ಆಮಂತ್ರಣ ನೀಡಿ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಡಾಲಿ ಜಾಲಿ.. ವೈದ್ಯೆ ಜೊತೆ ಮದ್ವೆಗೆ ರೆಡಿಯಾದ ನಟ ಧನಂಜಯ್​!

ಅದ್ಧೂರಿಯಾಗಿ ನಡೆಯಲಿರುವ ಈ ಮದುವೆ ಸಮಾರಂಭದಲ್ಲಿ ಸಿನಿಮಾರಂಗ, ರಾಜಕೀಯ ಸೇರಿದಂತೆ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಜರಾಗಲಿದ್ದಾರೆ. ಬೆಳಗ್ಗೆ ಮಾಂಗಲ್ಯ ಧಾರಣೆ ನಡೆಯಲಿಕ್ಕಿದೆ. ಅದೇ ದಿನ ಅದೆ ಗ್ರೌಂಡ್ ನಲ್ಲಿ ಆರತಕ್ಷತೆ ಸಮಾರಂಭ ನಡೆಯಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment